ಶಿವನು ಮೃತ್ಯುಂಜಯನಾದದ್ದು
ಹಿಂದೆ ಮರ್ಕಂಡ ಎಂಬ ಮುನಿಗಳಿದ್ದರು.ಅವರಿಗೆ ಬಹಳ ಕಾಲದಿಂದ ಮಕ್ಕಳಾಗಲಿಲ್ಲ. ಅದಕ್ಕಾಗಿ ಅವರು ತಪಸ್ಸು ಮಾಡಿದರು.ಪ್ರತ್ಯಕ್ಷನಾದ ದೇವರು ಅವರ ಬಳಿ ದೀರ್ಘಾಯುಷಿಯಾಗಿ ಮೂರ್ಖನಾಗಿರುವ ಮಗ ಬೇಕೋ ಇಲ್ಲವೇ ಮೆಧಾವಿಯಾಗಿದ್ದು ಅಲ್ಪಾಯುಷಿಯಾಗಿರುವ ಮಗ ಬೇಕೋ ಎಂದು ಕೇಳಲು ಮರ್ಕಂಡರು ೨ನೆ ಯದನ್ನು ಆಯ್ಕೆ ಮಾಡಿಕೊಂಡರು.ಹಾಗೆ ಅವರಿಗೆ ಪುತ್ರನ ಜನನವಾಯಿತು.
ಹಾಗೆ ಹುಟ್ಟಿದ ಮಗ ಮಾರ್ಕಂಡೇಯ ಎಂಬ ಹೆಸರನ್ನು ಪಡೆದ.ಪುತ್ರನ ಜನನದಿಂದ ಸಂತೋಷವಾಗಿದ್ದರೂ ಆತನಿಗೆ ಅಲ್ಪಾಯುಷ್ಶ ಎಂಬುದು ತಂದೆಯ ಮನದಲ್ಲಿತ್ತು.ಹೀಗಾಗಿ ಅವರು ಮಾರ್ಕಂದೇಯನಿಗೆ ಶಿವ ಪಂಚಾಕ್ಷರಿ ಜಪ ಮಾಡಲು ತಿಳಿಸಿದರು.ಅಂತೆಯೇ ಬಾಲಕನು ಮಾಡುತ್ತಿದ್ದ.
ಹೀಗಿರಲು ಒಂದು ದಿನಾ ಆತ ಶಿವ ಪೂಜೆ ಮಾಡುತ್ತಿರಲು ಆತನ ಆಯಸ್ಸು ಮುಗಿದ ಕಾರಣ ಕೊಂಡೊಯ್ಯಲು ಖುದ್ದು ಯಮನೇ ಮೃತ್ಯು ರೂಪದಲ್ಲಿ ಬಂದ.ಆದರೆ ಮಾರ್ಕಂಡೇಯ ಶಿವ ಪೂಜೆ ಮಾಡುತ್ತಿದ್ದ ಕಾರಣ ಮಾರ್ಕಂಡೇಯ ಶಿವಲಿಂಗವನ್ನೇ ಗಟ್ಟಿಯಾಗಿ ಬಿಗಿದಪ್ಪಿಕೊಂಡು ಕುಳಿತ.ಆತ ಆರ್ತನಾಗಿ ಶಿವನನ್ನು ತನ್ನ ರಕ್ಷಣೆಗಾಗಿ ಬರುವಂತೆ ಕೇಳಿಕೊಂಡ.
ಒಂದೆಡೆ ಮೃತ್ಯು ಮತ್ತು ಇನ್ನೊಂದೆಡೆ ಶಿವಧ್ಯಾನ ಮಾಡುತ್ತಿರುವ ಮಾರ್ಕಂಡೇಯ. ಶಿವನು ಭಕ್ತನ ರಕ್ಷಣೆಗಾಗಿ ಓಡೋಡಿ ಬಂದ.ಶಿವನಿಗೂ ಮತ್ತು ಯಮನಿಗೂ ಘೋರ ಯುದ್ಧವಾಯಿತು.ಕೊನೆಗೆ ಶಿವನು ಯಮನ ಮೇಲೆ ವಿಜಯ ಸಾಧಿಸಿ ಮಾರ್ಕಂದೇಯನಿಗೆ ಆಯುಸ್ಸನ್ನು ನೀಡಿದ.ಹೀಗೆ ಮೃತ್ಯು ವಿನ ಜೊತೆ ಹೋರಾಡಿ ಶಿವನು ಜಯಿಸಿದ ಕಾರಣ ಶಿವನಿಗೆ ಮೃತ್ಯುಂಜಯ ಎಂಬ ಹೆಸರು ಬಂತು.

************ ಕೃಪೆ: ಆಸೆ ಬ್ಲಾಗ್ *************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ