ಅಷ್ಠಮಾಶ್ವಾಸಂ
ಕಂ|| ಶ್ರೀಯಂ ಭುಜಬಳದಿಂ ನಿ ರ್ದಾಯಾದ್ಯಂ ಮಾೞ್ಪ ಬಗೆಯಿನವಿಕಳನಿಯಮ|
ಶ್ರೀಯನಳವಡಿಸಿ ನಿಂದ ಧ
ರಾಯುವತೀಶನನುದಾತ್ತನಾರಾಯಣನಂ|| ೧
ಕಂಡು ನಿಜತನಯನಳವೆರ್ದೆ
ಗೊಂಡಿರೆ ಮುದುಪಾರ್ವನಾಗಿ ಮೆಲ್ಲನೆ ಸಾರ್ವಾ|
ಖಂಡಳನಂ ಕಾಣಲೊಡಂ
ಗಾಂಡಿವಿಗಿರದುರ್ಚಿ ಪಾಯ್ದುವಶ್ರುಜಲಂಗಳ್|| ೨
ವ|| ಅಂತು ಮನದೊಳಾದ ಮೋಹರಸಮೆ ಕಣ್ಣಿಂ ತುಳುಂಕುವಂತೆ ಪೊಱಪೊಣ್ಮುವ ನಯನಜಲಂಗಳನುತ್ತರೀಯವಲ್ಕಲವಸ ನೋಪಾಂತದೊಳೊತ್ತುತ್ತುಮತಿಥಿಗತಿಥಿಸತ್ಕಾರಮೆಲ್ಲಮಂ ನೆಯೆ ಮಾಡಿದಾಗಳಿಂದ್ರಂನರೇಂದ್ರತಾಪಸನನಿಂತೆಂದಂ-
ಕಂ|| ನೀನಾರ್ಗೆ ನಿನ್ನ ಪೆಸರೇ
ನೀ ನಿಯಮಕ್ಕೆಂತು ಮೆಯ್ಯನೊಡ್ಡಿದೆಯಿದು ದಲ್|
ತಾನಾಶ್ಚರ್ಯಮಿದೇನ
ಜ್ಞಾನಿಯವೋಲ್ ತಪಕೆ ಬಿಲ್ಲುಮಂಬುಂ ದೊರೆಯೇ|| ೩
ವ|| ಎನೆ ಸಾಹಸಾಭರಣನಿಂತೆಂದಂ-
ಕಂ|| ನಿನ್ನೆಂದಂತುಟೆ ಮೋಕ್ಷ
ಕ್ಕೆನ್ನಿರ್ಪಿರವಘಟಮಾನವೈಹಿಕದ ತೊಡ|
ರ್ಪೆನ್ನಿರವಿನೊಳುಂಟಱಪದೆ
ನಿನ್ನಂ ಪುಸಿಯಾಡಿ ಕಾಡೆನಗೇಂ ದೊರೆಯೇ|| ೪
ಮ|| ನಿನಗಂ ಪೇೞ್ವೊಡೆ ಪಾಂಡುರಾಜತನಯಂ ಗಾಂಡೀವಿಯೆಂ ದಾಯಿಗಂ
ಗೆ ನೆಲಂ ಜೂದಿನೊಳೊತ್ತೆವೋಗೆ ಬನಮಂ ಪೊಕ್ಕಣ್ಣನೆಂದೊಂದು ಮಾ|
ತನಣಂ ವಿಱದೆ ನಿಂದು ಶಂಕರನ ನೀನಾರಾಸೆಂದಿಂತಿದಂ
ಮುನಿ ಪಾರಾಶರನೊಲ್ದು ಪೇೞೆ ಹರ ಬರ್ಪನ್ನಂ ತಪಂಗೆಯ್ದಪೆಂ|| ೫
೧. ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಅಭಿಪ್ರಾಯದಿಂದ ಸ್ವಲ್ಪವೂ ಊನವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯೊಡನೆ ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು ಇಂದ್ರನು ಕಂಡನು.
೨. ತನ್ನ ಮಗನ ಪರಾಕ್ರಮವನ್ನು ನೋಡಿ ಎದೆಯು ಸೂರೆಗೊಂಡಿತು. ಮುದಿಬ್ರಾಹ್ಮಣನ ವೇಷದಲ್ಲಿ ಬರುತ್ತಿದ್ದ ಇಂದ್ರನನ್ನು ನೋಡಿ ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿತು. ವ|| ಹಾಗೆ ಮನಸ್ಸಿನಲ್ಲುಂಟಾದ ಮೋಹರಸವೇ ಕಣ್ಣಿನಿಂದ ತುಳುಕುವಂತೆ ಹೊರಹೊರಡುವ ಕಣ್ಣೀರನನು ಮೇಲೆ ಹೊದೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ಅತಿಥಿಯಾದ ಇಂದ್ರನಿಗೆ ಅತಿಥಿ ಸತ್ಕಾರವೆಲ್ಲವನ್ನೂ ಮಾಡಿದಾಗ
೩. ನೀನಾರವನು? ನಿನ್ನ ಹೆಸರೇನು? ಈ ನಿಯಮಕ್ಕೆ ಶರೀರವನ್ನು ಏಕೆ ಅನಗೊಳಿಸಿದೆ. ಇದು ನಿಜವಾಗಿಯೂ ಆಶ್ಚರ್ಯ. ಅಜ್ಞಾನಿಯ ಹಾಗೆ ಇದೇನು ತಪಸ್ಸಿಗೆ ಯೋಗ್ಯವಲ್ಲದ ಬಿಲ್ಲು ಬಾಣಗಳನ್ನು ತೊಟ್ಟಿದ್ದೀಯಲ್ಲ. ವ|| ಎನ್ನಲು ಸಾಹಸಾಭರಣನಾದ ಅರ್ಜುನನು ಹೀಗೆಂದನು.
೪. ನೀನು ಹೇಳಿದ ಹಾಗೆಯೇ ನನ್ನ ಸ್ಥಿತಿ ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ; ಇದು ಇಹಲೋಕದ ಬಂಧನಕ್ಕೊಳಗಾದುದು. ಅದನ್ನು ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವಲ್ಲ.
೫. ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯಾಗಿದ್ದೇನೆ. ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯ ಪ್ರವೇಶಮಾಡಿ ಸ್ಥಿರವಾಗಿ ನಿಂತೆವು. ಶಂಕರನನ್ನು ಆರಾಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ (ಅದರ ಪ್ರಕಾರ) ಈಶ್ವರನು ಪ್ರತ್ಯಕ್ಷವಾಗುವವರೆಗೆ
ವ|| ಅಂತುಮಲ್ಲದೆ-
ಚಂ|| ಸುರಿತ ತಪೋಮಯಾನಳನಿನೀಯೊಡಲಂ ನೆಗ್ದ ಗಿರೀಂದ್ರ ಕಂ
ದರದೊಳಗಿಂತೆ ದಲ್ ಕರಗಿಪೆಂ ಪೆಱತೇಂ ಪಡೆಮಾತೊ ಮೇಣ್ ಪುರಂ|
ದರನೊಸೆದಿತ್ತುದೊಂದು ಬರದಿಂದುಱದೆನ್ನ ವಿರೋವರ್ಗಮಂ
ಕರಗಿಪೆನಲ್ಲದಿಲ್ಲಿ ಸೆರಗಂ ಬೆರಗಂ ಬಗೆಯೆಂ ದ್ವಿಜೋತ್ತಮಾ|| ೬
ಎನೆಯನೆ ರತ್ನ ರಶ್ಮಿ ಜಟಿಳಂ ಮಕುಟಂ ಮಣಿಕುಂಡಳಂ ಕನ
ತ್ಕನಕ ಪಿಶಂಗ ದೇಹರುಚಿ ನೀಳಸರೋಜವನಂಗಳಾಗಳು|
ಳ್ಳನಿತುಮರಲ್ವವೋಲ್ ಪೊಳೆವ ಕಣ್ಗಳುಮೞ್ಕಱನೀಯೆ ವಿಕ್ರಮಾ
ರ್ಜುನನ ಮನಕ್ಕೆ ತೋಱದನಿಳಾಮರನಂದಮರೇಂದ್ರರೂಪಮಂ|| ೭
ವ|| ಅಂತು ತನ್ನ ಸಹಜರೂಪಮಂ ತೋಱ ಮನದೞ್ಕಱಂ ತೋಱಲೆಂದು ಮಗನನಪ್ಪಿಕೊಂಡು-
ಕಂ|| ಸಾಸುವೊಡಮರಿನೃಪಂ
ಸಾಸುವೊಡಮಸ್ತ್ರಚಯಮನಿನ್ನುಂ ತನುವಂ|
ಬಾಸು ತಪೋಗ್ನಿಯಿಂದಾ
ರಾಸು ನೀಂ ಮಗನೆ ದುರಿತಹರನಂ ಹರನಂ|| ೮
ಎಂದು ತಿರೋಹಿತನಾಗಿ ಪು
ರಂದರನುಂ ಪೋದನಿತ್ತ ತಪದೊಳ್ ನರನಿಂ|
ತೊಂದಿ ನಿಲೆ ತಪದ ಬಿಸುಪಿಂ
ಬೆಂದೞದುದು ವನದೊಳುಳ್ಳ ತಪಸಿಯರ ತಪಂ|| ೯
ಖರಕರಕಿರಣಾವಳಿಯಂ
ಪರಿದೆೞ್ಬಟ್ಟಿದುವು ಪಗಲಿರುಳ್ ಶಶಿರುಚಿಯಂ|
ಪರಿಭವಿಸಿ ನಭಮನಡರ್ದುವು
ನರೇಂದ್ರತಾಪಸತಪೋಮಯೂಖಾವಳಿಗಳ್|| ೧೦
ತಪಸ್ಸನ್ನು ಮಾಡುತ್ತೇನೆ. ವ|| ಹಾಗಲ್ಲದೆ-
೬. ಎಲೈ ಬ್ರಾಹ್ಮಣಶ್ರೇಷ್ಠನೇ ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ಕರಗಿಸುತ್ತೇನೆ ನನಗೆ ಬೇರೆ ಮಾತೇ ಇಲ್ಲ. ಮತ್ತು ಆ ಶಿವನು ಪ್ರೀತಿಯಿಂದ ಕೊಡುವ ಒಂದು ವರದಿಂದ ಸಾವಕಾಶ ಮಾಡದೆ ತನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ: ಹಾಗಲ್ಲದೆ ಇಲ್ಲಿ ನಾನು ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ.
೭. ಎನ್ನುತ್ತಿರುವಾಗಲೇ ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ ಕನ್ನೆ ದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು. ವ|| ಹಾಗೆ ತನ್ನ ಸ್ವಭಾವಸಿದ್ಧವಾದ ಆಕಾರವನ್ನು ತೋರಿಸಿ ಮನಸ್ಸಿನ ಪ್ರೀತಿಯನ್ನು ತೋರಬೇಕೆಂದು ಮಗನನ್ನು ತಬ್ಬಿಕೊಂಡು
೮. ಮಗನೇ ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತ್ರ) ಸಮೂಹವನ್ನು ಪಡೆಯಬೇಕಾದ ಪಕ್ಷದಲ್ಲಿ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು. ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು.
೯. ಎಂಬುದಾಗಿ ಹೇಳಿ ಇಂದ್ರನು ಅದೃಶ್ಯನಾದನು. ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾದನು. ತಪಸ್ಸಿನ ಬೆಂಕಿಯಿಂದ ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ ಸುಟ್ಟು ನಾಶವಾದುವು.
೧೦. ರಾಜತಪಸ್ವಿಯಾದ ಅರ್ಜುನನ ತಪಸ್ಸಿನ ಕಿರಣಸಮೂಹಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು. ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು. ವ|| ಹಾಗೆ ಅತ್ಯುಗ್ರಹವಾದ ತಪಸ್ಸನ್ನು ಮಾಡಲು ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು ಕೈಲಾಸಪರ್ವತದಲ್ಲಿ ವಿಳಾಸದಿಂದ ಕೂಡಿ ಪಾರ್ವತಿಯೊಡನಿದ್ದ ಶಿವನಿಗೆ ಸಾಮಂತಚೂಡಾಮಣಿಯ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆ
ವ|| ಅಂತುಗ್ರೋಗ್ರತಪಂಗೆಯ್ಯೆ ತತ್ತಪತ್ಸಪನವಿಪುಳಮರೀಚಿಗಳ್ ತಮಗೆ ತಪವಿಘಾತಮಂ ಮಾಡುವುದುಮಿಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ಕೈಲಾಸದೊಳ್ ವಿಳಾಸಂಬೆರಸು ಗಿರಿಜೆಯೊಳ್ ತಳ್ತಿರ್ದ ಬಾಳೇಂದುಚೂಡಾಮಣಿಗೆ ಸಾಮಂತಚೂಡಾಮಣಿಯ ತಪಪ್ರಭಾವಮನಿಂತೆಂದು ಬಿನ್ನಪಂಗೆಯ್ದರ್-
ಮಲ್ಲಿಕಾಮಾಲೆ|| ಆವನೆಂದಱಯಲ್ಕೆ ಬಾರದಪೂರ್ವನೊರ್ವನರಾತಿವಿ
ದ್ರಾವಣಂ ತಪಕೆಂದು ನಿಂತೊಡೆ ತತ್ತಪೋಮಯಪಾವಕಂ|
ದಾವಪಾವಕನಂತೆವೋಲ್ ಸುಡೆ ಬೆಂದುವೆಮ್ಮ ತಪಂಗಳಿ
ನ್ನಾವ ಶೈಳದೊಳಿರ್ಪೆವಿರ್ಪೆಡೆವೇೞ ನೀಂ ತ್ರಿಪುರಾಂತಕಾ|| ೧೧
ಕಂ|| ಆರೊಪಿತಚಾಪಂ ಸಂ
ಧಾರಿತಕವಚಂ ಧೃತೋಗ್ರಶರಯುಗಂ ತಾ|
ನಾರಂದಮಲ್ಲವಂ ತ್ರಿಪು
ರಾರೀ ಕೇಳ್ ತ್ರಿಪುರಮಿಸುವ ನಿನ್ನನೆ ಪೋಲ್ವಂ|| ೧೨
ವ|| ಎಂಬುದುಮದೆಲ್ಲಮಂ ಕೇಳ್ದಾತನಾವನೆಂಬುದನಱಯಲೆಂದು-
ಕಂ|| ಧ್ಯಾನದೊಳಭವಂ ನೆದಿನಿ
ಸಾನುಮನರೆ ಮುಚ್ಚಿ ಕಣ್ಗಳಂ ನಿಶ್ಚಳಿತಂ|
ತಾನಿರ್ದು ಮದು ಕೆಂದಿದ
ವಿನಂ ತಳ್ತಾಡದಿರ್ದ ಮಡುವಂ ಪೋಲ್ತಂ|| ೧೩
ವ|| ಅಂತು ಪೋಲ್ತು ದಿವ್ಯಜ್ಞಾನದೊಳ್ ಮಹೇಶ್ವರನುದಾರಮಹೇಶ್ವರನಪ್ಪುದನಱದು ಬೆರಲಂ ಮಿಡಿದು ಮುಗುಳ್ನಗೆ ನಕ್ಕು ನೆನೆದಾತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೇೞ್ದು ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆಯ್ದುದನವಧಾರಿಸಿ ಮೂಕದಾನವನಾದಿವರಾಹರೂಪದೊಳಿರ್ದುದುಮನಱದು ಮನುಜ ಮಾಂಧಾತನಿಂದಮಾ ದೈತ್ಯನಂ ಕೊಲಿಸಲುಂ ಸಾಹಸಾಭರಣನೊಳೇನಾನುಮೊಡಂಬಡಂ ಮಾಡಿ ಮಾಯಾಯುದ್ಧದೊಳಾತನ ಸಾಹಸದ ಬಲದ ಬಿಲ್ಲಾಳ್ತನದಳವಿಗಳನಳೆದು ನೋಡಿ ವರದನಪ್ಪೆನೆಂಬುದುಮಂ ಬಗೆದು-
ಚಂ|| ವನಚರನಾಗಿ ಶಂಭು ಗಿರಿಜಾತೆಯನೋತು ಪುಳಿಂದಿ ಮಾಡಿ ನ
ಚ್ಚಿನ ಗುಹನ ಕಿರಾತಬಲ ನಾಯಕನಾಗಿರೆ ಮಾಡಿ ಭೂತಮು|
ಳ್ಳನಿತುಮನೆಯ್ದೆ ಬೇಡವಡೆ ಮಾಡಿ ಯುಗಾಂತ ಪಯೋಧರಾಳಿ ಭೋಂ
ಕೆನೆ ಕವಿವಂದದಿಂ ಕವಿದನಾ ಬನಮಂ ಮೃಗಯಾನಿಧಾನಮಂ|| ೧೪
ಮಾಡಿದರು.
೧೧. ಯಾರೆಂದು ತಿಳಿಯಲಾಗುವುದಿಲ್ಲ. ಹಿಂದೆಂದೂ ಕಾಣದಿರುವ ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಲ್ಲಲು ಅವನ ತಪಸ್ಸಿನಿಂದುಂಟಾದ ಬೆಂಕಿಯಿಂದ ಬೆಂಕಿಯು ಕಾಡಕಿಚ್ಚನ್ನು ಸುಡುವ ಹಾಗೆ ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು.
೧೨. ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ, ಬೆನ್ನಲ್ಲಿ ಧರಿಸಿರುವ ಭಯಂಕರವಾದ ಎರಡು ಬತ್ತಳಿಕೆಗಳು. ಇವನ್ನುಳ್ಳ ಅವನು ಬೇರೆಯಾದ ರೀತಿಯವನೂ ಅಲ್ಲ. ಪರಶಿವನೇ, ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ ಎಂದರು. ವ|| ಅದೆಲ್ಲವನ್ನೂ ಕೇಳಿ ಅವನು ಯಾರೆಂಬುದನ್ನು ತಿಳಿಯಬೇಕೆಂದು
೧೩. ಶಿವನು ಧ್ಯಾನಮಗ್ನನಾಗಿ ಕಣ್ಣುಗಳನ್ನು ಅರ್ಧಮುಚ್ಚಿ ನಿಶ್ಚಲಚಿತ್ತನಾಗಿದ್ದು ಮೈಮರೆತು ಮಲಗಿರುವ ಮೀನುಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವಿಗೆ ಸಮಾನನಾದನು. ವ|| ಹಾಗೆ ಹೋಗಲಿ ತನ್ನ ದಿವ್ಯಜ್ಞಾನದಿಂದ ಶಿವನು, ತಪಸ್ಸು ಮಾಡುತ್ತಿದ್ದವನು ಉದಾರಮಹೇಶ್ವರನಾದ ಅರ್ಜುನನಾಗಿರುವುದನ್ನು ತಿಳಿದನು. (ಸಂತೋಷದಿಂದ) ಬೆರಳನ್ನು ಚಿಟಿಕಿಸಿ ಹುಸಿನಗೆ ನಕ್ಕು ಜ್ಞಾಪಿಸಿಕೊಂಡು ಆತನಿಗೆ ಯೋಗ್ಯವಾದುದನ್ನು ಮಾಡುವುದಕ್ಕೆ ನಾನು ಬಲ್ಲೆ, ನೀವು ಹೊರಡಿ ಎಂದು ಋಷಿಶ್ರೇಷ್ಠರ ಸಮೂಹವನ್ನು ಕಳುಹಿಸಿಕೊಟ್ಟನು. ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡುದನ್ನು ಜ್ಞಾಪಿಸಿಕೊಂಡನು. ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸುತ್ತೇನೆ. ಅರ್ಜುನನೊಡನೆ ಏನಾದರೂ ಕೀಟಲೆ ಮಾಡಿ ಮಾಯಾಯುದ್ಧದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳ್ತನದ ಶಕ್ತಿಯನ್ನೂ ಪರೀಕ್ಷಿಸುತ್ತೇನೆ; ಅನಂತರ ಅವನಿಗೆ ವರದ (ವರವನ್ನು ಕೊಡುವವ)ನಾಗುತ್ತೇನೆ ಎಂದು ನಿಶ್ಚಯಿಸಿದನು.
೧೪. ಈಶ್ವರನು ತಾನು ಬೇಡವರನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯನ್ನಾಗಿಯೂ ತನ್ನ ನಂಬಿಕೆಗೆ ಪಾತ್ರನಾದ
ವ|| ಅಂತು ಕವಿದೊಡಾ ಕಳಕಳಕ್ಕೇವಯಿಸಿ ವರಾಹರೂಪದ ಮೂಕದಾನವಂ-
ತರಳ|| ಪೊರಳೆ ವಾರಿಗಳ್ ಕಲಂಕಿದುವುರ್ದೆ ಮೆಯ್ಯನುದಗ್ರಮಂ
ದರಮದಂದಲುಗಿತ್ತು ಬಾಯ್ಗೆಯೆ ದಿಗ್ಗಜಂ ಪೆಱಗಿಟ್ಟುವಾಂ|
ತರದೆ ತೊಟ್ಟನೆ ದಾಡೆಗುಟ್ಟೆ ಕೞಲ್ದು ತಾರಗೆಗಳ್ ನಭಂ
ಬೆರಸು ಬಿೞ್ದುವು ಪೆಂಪಿದೇಂ ಪಿರಿದಾಯ್ತೊ ದೈತ್ಯವರಾಹನಾ|| ೧೫
ವ|| ಅಂತಾ ವರಾಹನಾದಿವರಾಹನಾದ ಮುರಾಂತಕನುಮನಿೞಸಿ ನೆಲಂ ಕಪ್ಪಂಗವಿಯು ಮಾಗೆ ಬರೆ ಪೆಱಗೆ ಕೃತಕ ಕಿರಾತನಟ್ಟುತ್ತುಂ ಬರೆ ತನ್ನತ್ತ ಮೊಗದೆ ಬರ್ಪುದಂ ಕಂಡಮೋಘಾಸ್ತ್ರ ಧನಂಜಯನೊಂದಮೋಘಾಸ್ತ್ರಮನಕ್ಷೂಣಬಾಣಯಿಂದಮುರ್ಚಿಕೊಂಡು ಗಾಂಡೀವದೊಳ್ ಪೂಡಿ-
ಮ|| ತೆಗೆದೆಚ್ಚರ್ಜುನನಂಬು ತೀವೆ ತುದಿಯಿಂ ಬಾಲಂಬರಂ ಪಂದಿ ಸೌ
ಳಗೆವೋಪಂತಿರೆ ನೋಡ ಸಂಬಳಿಗೆವೋಯ್ತೆಂಬನ್ನೆಗಂ ಕೊಂಡುದೊ|
ಯ್ಯಗೆ ಪಾರ್ದೆಚ್ಚ ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು ತೊ
ಟ್ಟಗೆ ವೈಮಾನಿಕಕೋಟಿಗಂದು ಪಿರಿದೊಂದುತ್ಸಾಹಮಪ್ಪನ್ನೆಗಂ|| ೧೬
ವ|| ಅಂತು ಮೂಕದಾನವನನಾ ನೆವದೊಳೆ ಕೊಂದು ವರಾಹಾರುಣಜಲಧಾರಾರುಣ ಮಾಗಿರ್ದಾತ್ಮೀಯಬಾಣಮಂ ಪರಾಕ್ರಮ ಧವಳನೊಯ್ಯನೆ ಕೊಂಡು ಬಾಣಯೊಳಿಟ್ಟು ಪೋಗಿ ಪೊಗೊಳದೊಳ್ ಕರಚರಣಪ್ರಕ್ಷಾಳನಂಗೆಯ್ದು ಮಗುೞ್ದುಮೇಕಪಾದ ತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನನಹಿಭೂಷಣನೆಂಬಂ ಬೇಡಿಯಟ್ಟಿದೊಡಾತಂ ಬಂದು-
ಚಂ|| ಗೊರವರೆ ಬೂದಿಯುಂ ಜಡೆಯುಮಕ್ಕೆ ತಪಕ್ಕೆ ತನುತ್ರವಿ ಭಯಂ
ಕರ ಧನು ಖೞ್ಗಮತ್ತಪರಮಿಂತೆರಡುಂ ದೊಣೆ ತೀವಿದಂಬುಮೊಂ|
ದಿರವು ತಪಕ್ಕಿದೆಂತುಟೊ ತಪಂಗಳುಮಿಲ್ಲಮವುಳ್ಳೊಡೀಗಳೆ
ಮ್ಮರಸರ ನಚ್ಚಿತೆಚ್ಚ ಶರಮಂ ಸೆರಗಿಲ್ಲದೆ ಕೊಂಡು ಬರ್ಪಿರೇ|| ೧೭
ಷಣ್ಮುಖನನ್ನು ಬೇಡರ ಸೈನ್ಯಕ್ಕೆ ನಾಯಕನನ್ನಾಗಿಯೂ ಮಾಡಿ ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿಸಿದನು. ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ ಬೇಟೆಗೆ ಆಧಾರವಾದ ಆ ಕಾಡನ್ನು ಮುತ್ತಿದನು. ವ|| ಆ ಕೋಲಾಹಲಶಬ್ದಕ್ಕೆ ಅಸಮಾಧಾನಪಟ್ಟು ಹಂದಿಯ ರೂಪದಲ್ಲಿದ್ದ ಆ ಮೂಕದಾನವನು
೧೫. ಹೊರಳಲು ಸಮುದ್ರಗಳು ಕಲಕಿಹೋದವು, ಮೆಯ್ಯನ್ನು ಉಜ್ಜಲ ಎತ್ತರವಾದ ಮಂದರಪರ್ವತವೂ ಅಲುಗಾಡಿತು. ಶಬ್ದಮಾಡಲು ದಿಗ್ಗಜಗಳೂ ಹಿಮ್ಮೆಟ್ಟಿದುವು. ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು. ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತು. ವ|| ಆ ಹಂದಿಯು ಆದಿವರಾಹಾವತಾರ ಮಾಡಿದ ಕೃಷ್ಣನನ್ನು ಹೀಯ್ಯಾಳಿಸಿ (ತಿರಸ್ಕರಿಸಿ) ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ (ನೆಲವನ್ನಲ್ಲಾಡಿಸುತ್ತ) ಬರುತ್ತಿರಲು ಹಿಂಭಾಗದಿಂದ ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬಂದನು. ತನ್ನ ಕಡೆಗೆ ಬರುತ್ತಿರುವುದನ್ನು ಧನಂಜಯನು ಕಂಡು ಒಂದು ಅಮೋಘವಾದ ಬಾಣವನ್ನು ತನ್ನ ಅಕ್ಷಯವಾದ ಬತ್ತಳಿಕೆಯಿಂದ ಸೆಳೆದುಕೊಂಡು ಗಾಂಡೀವದಲ್ಲಿ ಹೂಡಿದನು.
೧೬. ಹೆದೆಯೆಳೆದು ಪ್ರಯೋಗ ಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ವ್ಯಾಪಿಸಿ ಸೌಳೆಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿಕೊಂಡಿತು. ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಒಳನುಗ್ಗಿತು. ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳ ಸಮೂಹಕ್ಕೆ ವಿಶೇಷ ಸಂತೋಷವಾಯಿತು. ವ|| ಹಾಗೆ ಮೂಕದಾನವನನ್ನು ಆ ನೆಪದಿಂದ ಕೊಂದ ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಸೇರಿಸಿ ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು ಪುನ ಏಕಪಾದತಪಸ್ಸಿನಲ್ಲಿ ನಿಲ್ಲಲು ಅರ್ಜುನನ ಹತ್ತಿರಕ್ಕೆ ಸರ್ಪಾಭರಣನಾದ ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಕಳುಹಿಸಿದನು. ಅವನು ಬಂದು
೧೭. ತಪಸ್ವಿಗಳೇ, ಬೂದಿಯೂ ಜಡೆಯೂ ತಪಸ್ಸಿಗಿರಲಿ; ಕವಚ, ಈ ಭಯಂಕರವಾದ ಬಿಲ್ಲು ಕತ್ತಿ ಗುರಾಣಿ, ಬಾಣದಿಂದ ತುಂಬಿದ ಈ ಎರಡು ಬತ್ತಳಿಕೆಗಳು -ಇವು ತಪಸ್ಸಿಗೆ ಹೊಂದಿಕೊಳ್ಳಲಾರವು. ಇದು ಹೇಗೊ (ವಿಚಿತ್ರವಾಗಿದೆ) ತಪಸ್ಸು ಕೂಡ ಇಲ್ಲ, ಅದಿದ್ದ ಪಕ್ಷದಲ್ಲಿ (ನೀವು ತಪಸ್ವಿಗಳಾಗಿದ್ದರೆ) ನಮ್ಮ ರಾಜರು ನಂಬಿಕೆಯಿಂದ (ಗುರಿಯಿಟ್ಟು) ಹೊಡೆದ ಬಾಣವನ್ನು ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ?
ಕಂ|| ಅಱಯದೆ ತಂದೊಡಮೇನೆ
ಮ್ಮೆಯಂಗದನೆಮ್ಮ ಕೆಯ್ಯೊಳಟ್ಟಿಂ ನೀಮಿಂ|
ತಱಯುತ್ತುಂ ಪೆಱರೊಡಮೆಯ
ನು ಸೆವಿಡಿದಿರ್ಪಿರಿನ್ನರುರ್ವಿಯೊಳೊಳರೇ|| ೧೮
ವ|| ಎಂದು ಕಿರಾತದೂತಂ ತನ್ನನತಿಕ್ರಮಿಸಿ ನುಡಿದುದರ್ಕೆ ಮುಳಿದು ಪರಾಕ್ರಮಧವಳನಿಂತೆಂದಂ-
ಕಂ|| ದಸಿಕೊಂದಕ್ಕುಂ ಬೇಡಂ
ಗಿಸಲ್ಕೆ ದೊರೆ ಮೃಗಮನೀ ಜಗಂಗಳನಳ್ಳಾ|
ಡಿಸುವ ಮದೀಯೋಗ್ರಾಸ್ತ್ರಂ
ಪೆಸರ್ಗೊಳಲೇಂ ತನಗೆ ದೊರೆಯೆ ಖಳನಳವಱಯಂ|| ೧೯
ಉ|| ಏಱನೆ ಸೂಗೊಂಡು ನುಡಿವೀ ನುಡಿಯಲ್ಲದೆ ಮತ್ತಮಾಸನಂ
ದೋಱುವ ಬಲ್ಪುದೋಱುವೆರ್ದೆದೋಱುವ ಕಯ್ಪೆಸರಂಗಳೆಮ್ಮನುಂ|
ತೇಱವು ಬೇಡ ಬೇಡದಿರು ಬೇಡ ಚಲಂಬೆರಸಂಬನಂಬನಿನ್
ಕಾಱುತೆ ಮೋದಲಾಟಿಪೊಡೆ ನೀಂ ಬರವೇೞ್ವುದು ನಿನ್ನನಾಳ್ದನಂ|| ೨೦
ವ|| ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ ಬಗ್ಗಿಸಿದೊಡಾ ಮಾತೆಲ್ಲಮನಾ ಮಾೞ್ಕೆಯೊಳೆ ಪೋಗಿ ಕಪಟ ಕಿರಾತಂಗಱಪಿದೊಡಾತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು ಹಸ್ತ್ಯಶ್ವರಥಪದಾತಿಬಲಂಗಳನೆನಿತಾನುಮನಿದಿರೊಳ್ ತಂದೊಡ್ಡಿದಾಗಳ್ ಪರಸೈನ್ಯಭೈರವಂ ಮಹಾಪ್ರಳಯಭೈರವಾಕಾರಮಂ ಕೆಯ್ಕೊಂಡು ಸೆರಗಿಲ್ಲದೆ ಬಂದು ತಾಗಿ-
ಚಂ|| ಕೆದ ಚತುರ್ಬಲಂ ಬೆದ ತಳ್ತ ದೞಂ ಕೆಡೆದೆೞ ತೞ ಮಾ
ಣದೆ ಪೆಱಗಿಟ್ಟು ಬಾಯ್ಬಿಡೆ ಘಟಾಳಿ ಗುರ್ಣಾವನಂಬು ಲಕ್ಕಲೆ|
ಕ್ಕದೆ ಕೊಳೆ ಚಾತುರಂಗಬಲಮಂತೞದೞ್ಗೆ ಕನಲ್ದೊನಲ್ದು ಮಾ
ಣದೆ ಪೆಣೆದಂ ಹರಂ ದಿಗಿಭದೊಳ್ ದಿಗಿಭಂ ಪೆಣೆವಂತೆ ಪಾರ್ಥನೊಳ್|| ೨೧
ವ|| ಅಂತು ಶೂನ್ಯಹಸ್ತದೊಳಿರ್ವರುಂ ಪೆಣೆದು ಪಲವುಂ ಗಾಯದೊಳಾಯಂದಪ್ಪದೆ ಪಿರಿದುಂ ಪೊೞ್ತು ಸಂತರ್ಪಿನಂ (?) ಪೋರೆ ದೇವರೆಲ್ಲರುಮಂಬರತಳದೊಳಿರ್ದು ತಮ್ಮಂ ನೋೞ್ಪಂತೆ (?) ನೋಡೆ-
೧೮. ತಿಳಿಯದೆ ತಂದರೆ ತಾನೆ ಏನು ದೋಷ? ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ. ನೀವು ಹೀಗೆ ತಿಳಿದವರಾಗಿದ್ದರೂ ಇತರರ ಪದಾರ್ಥವನ್ನು ವಿಶೇಷವಾಗಿ ಬಂಸಿಟ್ಟಿದ್ದೀರಲ್ಲ! ಇಂತಹವರೂ ಭೂಮಿಯಲ್ಲಿದ್ದಾರೆಯೇ? ವ|| ಎಂದು ಆ ಬೇಡನ ದೂತನಾದ ಗುಹನು ತನ್ನನ್ನು ಮೀರಿ ಮಾತನಾಡಿದುದಕ್ಕೆ ಕೋಪಿಸಿ ಪರಾಕ್ರಮಧವಳನಾದ ಅರ್ಜುನನು ಹೀಗೆಂದನು-
೧೯. ಬೇಡನಿಗೆ ಒಂದು ಪ್ರಾಣಿಯನ್ನು ಹೊಡೆಯಲು ಒಂದು ಮೊಳೆ ಸಾಕು. ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಬಾಣದ ಹೆಸರು ಹೇಳಲು ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ. ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ.
೨೦. ಕೇವಲ ಕಲಹಮಾಡುವುದಕ್ಕಾಗಿಯೂ ಪೊಳ್ಳು ಪರಾಕ್ರಮವನ್ನು ಮೆರೆಯುವುದಕ್ಕಾಗಿಯೂ ಇಂತಹ ಒರಟಾದ ಉಪೇಕ್ಷೆಯಿಂದ ಕೂಡಿದ ಕಹಿ ಮಾತುಗಳನ್ನು ನಮ್ಮಲ್ಲಿ ಆಡಬೇಡ. ಈ ಕಹಿಯಾದ ಮಾತುಗಳು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು (ನಮ್ಮನ್ನು ಹೆದರಿಸಲಾರವು). ಎಲೋ ಬೇಡ ನಿನಗೆ ಹಟಬೇಡ, ಬಾಣವನ್ನು ಕೇಳಿದರು. ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ಧಮಾಡುವ ಅಪೇಕ್ಷೆಯೇ ಇದ್ದರೆ ನೀನು ನಿನ್ನ ಯಜಮಾನನನ್ನು ಬರಹೇಳು. ವ|| ಎಂದು ಬಂದ ದೂತನಾದ ಗುಹನನ್ನು ವಿಕ್ರಾಂತತುಂಗನಾದ ಅರ್ಜುನನು ಹೆದರಿಸಿ ಕಳುಹಿಸಿದನು. ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದನು. ಆತನೂ ಮಾಯಾಯುದ್ಧವನ್ನು ಹೂಡಲು ಮನಸ್ಸು ಮಾಡಿ ಅಸಂಖ್ಯಾತವಾದ ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದನು. ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ ಆಕಾರವನ್ನು ತಾಳಿ ಭಯವಿಲ್ಲದೆ ಬಂದು ತಾಗಿದನು.
೨೧. ಚತುರಂಗಸೈನ್ಯವು ಚದುರಿತು. ನೆರೆದಿದ್ದ ಸೈನ್ಯವು ಬೆದರಿತು. ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು. ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ ಚತುರಂಗಸೈನ್ಯವೂ ಕುಗ್ಗಿ ನಾಶವಾಯಿತು. ಶಿವನು ವಿಶೇಷವಾಗಿ ಕೋಪಿಸಿಕೊಂಡು ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜನೊಡನೆ ಹೆಣೆದುಕೊಳ್ಳುವಂತೆ ಹೆಣೆದುಕೊಂಡನು. ವ|| ಹಾಗೆ ಇಬ್ಬರೂ ನಿರಾಯುಧರಾಗಿ ಹೆಣೆದುಕೊಂಡು ಅನೇಕ ಪಟ್ಟುಗಳಲ್ಲಿ
ಕಂ|| ಇಕ್ಕಿದನಭವಂ ಪಾರ್ಥನ
ನಿಕ್ಕಿದನಾ ತ್ರಿಪುರಹರನನರ್ಜುನನೆನೆ ಗೆ|
ಲ್ಲಕ್ಕೆ ಮುಡಿಗಿಕ್ಕುವಂತೆವೊ
ಲಿಕ್ಕಿದನವಯವದೆ ನೆಲದೊಳರಿಗಂ ಹರನಂ|| ೨೨
ವ|| ಅಂತು ನೆಲಕ್ಕಿಕ್ಕಿ ಗಂಟಲಂ ಮೆಟ್ಟಿದಾಗಳ್-
ಕಂ|| ಪೊಱಕಣ್ಗಂ ಮುನ್ನಂ ತಾಂ
ಮಱಸಿದ ನೊಸಲೊಂದು ಕಣ್ಣುಮಾಗಳ್ ನೊಸಲಿಂ|
ಪೊಱಮಟ್ಟಂತಿರೆ ತೋಱದ
ನೆಱಕದೆ ಹರಿಗಂಗೆ ರುದ್ರನಗ್ಗಳಗಣ್ಣಂ||
ಉರದೊಳ್ ಫಣಿ ಕರದೊಳ್ ಬಿಲ್
ಶಿರದೊಳ್ ತೊ ತೊಯ ಕೆಲದೊಳೆಸೆದಿರೆ ಪೆ ಮುಂ|
ಗೊರಲೊಳ್ ಕ ಮಯಿಲ್ಲದೆ
ದೊರೆಕೊಳೆ ಮೃಡನಡಿಗೆ ಹರಿಗನೆಱಗಿದನಾಗಳ್|| ೨೪
ವ|| ಅಂತೆಱಗಿ ಪೊಡವಟ್ಟು-
ಕಂ|| ನೀನಪ್ಪುದನಣಮಱಯದೆ
ದಾನವ ಮಾನವ ಸುರೇಂದ್ರ ಮಣಿಮಕುಟತಟಾ|
ವ್ಯಾನಪದಂಗಾ ನೆಗೞ್ದುದ
ನಾನೇತಳೆಂತು ನೀಗುವೆಂ ನೀಂ ಬೆಸಸಾ|| ೨೫
ವ|| ಎಂದು ವಿನಯವಿನಮಿತೋತ್ತಮಾಂಗನಾಗಿ ಕರಕಮಳಂಗಳಂ ಮುಗಿದು ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ ಮೆಚ್ಚಿದೆಂ ಬರವಂ ಬೇಡಿಕೊಳ್ಳೆನೆ ಮಹಾಪ್ರಸಾದಂ ಪೆಱತೇನುಮನೊಲ್ಲೆನೆನಗೆ ನಿಮ್ಮಡಿ ಪಾಶುಪತಾಸ್ತ್ರಮಂ ದಯೆಗೆಯ್ವುದೆನೆ ನಿನ್ನ ತಪಶ್ಶಕ್ತಿಗಂ ಭಕ್ತಿಗಂ ಮೆಚ್ಚಿತ್ತೆನೆಂದು-
ಕಂ|| ಕ್ಲೇಶದ ಫಳಮೆರ್ದೆಗೊಳ್ಳದೆ
ಈಶಂ ಮನಮೊಸೆದು ನೆಗೞ್ದ ದಿವ್ಯಾಸ್ತ್ರಮನಾ.
ಪಾಶುಪತಾಸ್ತ್ರಮನಿತ್ತು ವಿ
ನಾಶಿತರಿಪುವಕ್ಕೆ ಹರಿಗನೆಂದಂ ದಯೆಯಿಂ|| ೨೬
ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು ಕಾದಿದರು. ದೇವತೆಗಳು ಆಕಾಶಪ್ರದೇಶದಲ್ಲಿದ್ದುಕೊಂಡು ಅವರ ದ್ವಂದ್ವ ಯುದ್ಧವನ್ನು ನೋಡುತ್ತಿದ್ದರು.
೨೨. ಶಿವನು ಪಾರ್ಥನನ್ನು ಬೀಳಿಸಿದನು; ಪಾರ್ಥನು ಶಿವನನ್ನು ಬೀಳಿಸಿದನು. ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮವಿಲ್ಲದೆ ನೆಲದಲ್ಲಿ ಬೀಳಿಸಿ ವ|| ಅವನ ಗಂಟಲನ್ನು ಮೆಟ್ಟಿದನು.
೨೩. ಹೊರಗಡೆಯ ಕಣ್ಣುಗಳಿಗೆ ಕಾಣದಂತೆ ಮೊದಲೇ ಮರಸಿಟ್ಟಿದ್ದ ಹಣೆಗಣ್ಣೊಂದು ಆಗ ಹಣೆಯಿಂದ ಹೊರ ಹೊರಟ ಹಾಗಿರಲು ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು.
೨೪. ಎದೆಯಲ್ಲಿ ಹಾವು, ಕಯ್ಯಲ್ಲಿ ಬಿಲ್ಲು, ತಲೆಯಲ್ಲಿ ಗಂಗಾನದಿ, ನದಿಯ ಪಕ್ಕದಲ್ಲಿ ಚಂದ್ರ, ಪ್ರಕಾಶಮಾನವಾಗಿರಲು ಮುಂಭಾಗದ ಕೊರಳಿನಲ್ಲಿ ಕರೆಯು ಪ್ರಕಟವಾಗಿ ಕಾಣಿಸಿಕೊಳ್ಳಲು ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು. ವ|| ಹಾಗೆ ಬಗ್ಗಿ ನಮಸ್ಕಾರಮಾಡಿ-
೨೫. (ನನ್ನನ್ನು ಪ್ರತಿಭಟಿಸಿದವನು ಶಿವನಾದ) ನೀನು ಎಂಬುದನ್ನು ತಿಳಿಯದೆ ರಾಕ್ಷಸ, ಮನುಷ್ಯ, ದೇವೇಂದ್ರ ಇವರುಗಳ ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ ಪಾದಗಳುಳ್ಳ ಶಿವನಾದ ನಿನಗೆ ನಾನು ಮಾಡಿದ ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ ಎಂಬುದನ್ನು ನೀನೇ ಅಪ್ಪಣೆ ಕೊಡಿಸು. ವ|| ಎಂದು ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ (ನಮಸ್ಕರಿಸಿ) ಕರಕಮಲಗಳನ್ನು ಮುಗಿದು ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ ಶಿವನು ‘ಮೆಚ್ಚಿದ್ದೇನೆ ವರವನ್ನು ಕೇಳಿಕೊ’ ಎಂದನು. ಅರ್ಜುನನು ಮಹಾಪ್ರಸಾದ, ಬೇರೆಯೇನೂ ಬೇಡ, ನನಗೆ ತಮ್ಮ ಪಾಶುಪತಾಸ್ತ್ರವನ್ನು ದಯಮಾಡಿ ಕೊಡಿಸಬೇಕು ಎಂದನು. ನಿನ್ನ ತಪ್ಪಶ್ಶಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು.
೨೬. ಕಷ್ಟದಿಂದ ಸಂಪಾದಿಸಿದ ಫಲ ಹೃದ್ಯವಾಗದೇ ಇರುತ್ತದೆಯೇ? ಈಶ್ವರನು ಮನಪ್ರೀತಿಯಿಂದ
ವ|| ಆಗಳೀಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಮಂಜರಿಕಾಸ್ತ್ರಮೆಂಬ ಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ ಮೂವತ್ತುಮೂದೇವರುಂ ತಂತಮ್ಮ ನಚ್ಚಿನಂಬುಗಳಂ ತಂದೀಯೆ ಗುಣಾರ್ಣವಂ ಸಂಪೂರ್ಣ ಮನೋರಥನಾಗಿರ್ದಾಗಳಿಂದ್ರಂ ಪರಾಕ್ರಮಧವಳನ ಪರಾಕ್ರಮಕ್ಕಮೇಗೆಯ್ವ ತೆಱನುಮಱಯದೆಯುಮತಿಸ್ನೇಹದಿಂ ಪುಷ್ಪವೃಷ್ಟಿಯುಮನಾನಂದಬಾಷ್ಪ ವೃಷ್ಟಿಯುಮನೊಡನೊಡನೆ ಸುರಿದು ಪಲವು ದಿವಸಮುಗ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶ್ರಮಂ ಪೋಗೆ ಕೆಲವು ದಿವಸಮನೆಮ್ಮ ಲೋಕದೊಳ್ ವಿಶ್ರಮಿಸಿ ಬರ್ಪೆ ಬಾ ಪೋಪಮೆಂದು ತನ್ನೊಡನೆ ರಥಮನೇಱಸಿಕೊಂಡು ಗಗನತಳಕ್ಕೊಗೆದು ತನ್ನಮರಾವತೀಪುರಮನೆಯ್ದಿ ಮಗಂ ಬಂದೊಸಗೆಗೆ ಪೊೞಲೊಳಷ್ಟ ಶೋಭೆಯಂ ಮಾಡಿಸಿ ಪೊೞಲಂ ಪೊಕ್ಕಾಗಳ್-
ಮ|| ಪರಿತಂದಂದಮರಾವತೀಪುರದ ವಾರಸ್ತ್ರೀಯರೇನೀತನೇ
ನರನಾ ಖಾಂಡವಮೆಲ್ಲಮಂ ಶಿಖಿಗುಣಲ್ ಕೊಟ್ಟಾತನೀಗಳ್ ಮಹೇ|
ಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತಮಂ ಪೆತ್ತಾತನೇ ಸಾಹಸಂ
ಪಿರಿದುಂ ಚೆಲ್ವನುಮಪ್ಪನೆಂದು ಮನದೊಳ್ ಸೋಲ್ತೞ್ಕಱಂ ನೋಡಿದರ್|| ೨೭
ವ|| ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಗಳಪ್ಪ ಶೇಷಾಕ್ಷತಂಗಳನೀಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳುತ್ತುಂ ದೇವರಾಜನೊಡನೆ ದೇವಾಪ್ಸರೋನಿಚಯನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯಾಹಾರಂಗಳನೊಡನಾರೋಗಿಸಿ ತಂಬುಲಂಗೊಂಡು ತನ್ನ ತುಡುವ ತುಡುಗೆಗಳೆಲ್ಲಮಂ ತುಡಿಸಿ ಕಿರೀಟಿಯಂ ಕೋಟಿ ಮಾೞ್ಕೆಯಿಂ ಕೊಂಡಾಡಿ ಕೆಲವು ದಿವಸಮನಿರ್ದು ತನಗವಧ್ಯರುಮಸಾಧ್ಯರುಮಾಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬಱುವತ್ತು ಕೋಟಿ ರಕ್ಕಸರನೆನಗೆ ಗೆಲ್ದೀಯಲ್ವೇೞ್ಕುಮೆಂದು ಮಾತಳಿಯೆಂಬ ಸಾರಥಿವೆರಸು ವಿವಿಧಾಸ್ತ್ರಗರ್ಭಮಪ್ಪ ರಥಮಂ ಕೊಟ್ಟೊಡದನೇಱ ಪೋಗಿ-
ಮ|| ದನುಜಾನೀಕರದ ನಿಂದದೊಂದು ನೆಲೆಯಂ ಮುಟ್ಟುತ್ತೆ ಮಾದೇವನಿ
ತ್ತ ನಿಜೋಗ್ರಾಸ್ತ್ರದೆ ದೈತ್ಯರೆಂಬ ಪೆಸರಿಲ್ಲೆಂಬಂತುಟಂ ಮಾಡಿ ಬಂ|
ದೆನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದೊಂದು ಪೆಂಪಿಂದಮಿಂ
ದ್ರನೊಳರ್ಧಾಸನಮೇಱದೊಳ್ಪು ಹರಿಗಂಗಕ್ಕುಂ ಪೆಱಂಗಕ್ಕುಮೇ|| ೨೮
ಪ್ರಸಿದ್ಧವಾದ ದಿವ್ಯಾಸ್ತ್ರವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು ಅರ್ಜುನನನ್ನು ‘ಶತ್ರುಗಳನ್ನು ಗೆಲ್ಲುವವನಾಗು’ ಎಂದು ಹರಸಿದನು. ವ|| ಆಗ ಈಶ್ವರನು ಕೊಟ್ಟುದಕ್ಕೆ ಸಮಾನವಾದ ಬಹುಮಾನವೆಂದು ಗೌರೀದೇವಿಯು ಅಂಜರಿಕಾಸ್ತ್ರವೆಂಬ ಬಹು ಬೆಲೆಯುಳ್ಳ ಅಸ್ತ್ರವನ್ನು ವಿಕ್ರಮಾರ್ಜುನನಿಗೆ ಕೊಟ್ಟಳು. ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತ್ರಗಳನ್ನು ತಂದುಕೊಟ್ಟರು. ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನೋರಥನಾದನು. ಇಂದ್ರನು ಪರಾಕ್ರಮಧವಳನಾದ ಅರ್ಜುನನ ಶೌರ್ಯಪರಾಕ್ರಮಗಳಿಗೆ ಯಾವ ರೀತಿಯ ಸತ್ಕಾರ ಮಾಡಬೇಕೆಂಬುದನ್ನು ತಿಳಿಯದೆ ವಿಶೇಷವಾದ ಸ್ನೇಹದಿಂದ ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು. ‘ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸ ಪರಿಹಾರವಾಗುವ ಹಾಗೆ ಕೆಲವು ಕಾಲ ನಮ್ಮ ಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ’ ಎಂದು ತನ್ನ ಜೊತೆಯಲ್ಲಿಯೇ ತೇರನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು. ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು-
೨೭. ಅಮರಾವತೀ ಪಟ್ಟಣದ ವೇಶ್ಯಾಸ್ತ್ರೀಯರು ಓಡಿ ಬಂದು ಇವನೇ ಅರ್ಜುನನೇನು! ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು, ಈಗ ಮಹೇಶ್ವರನನ್ನು ಮೆಚ್ಚಿಸಿ ಶ್ರೇಷ್ಠವಾದ ಪಾಶುಪತಾಸ್ತ್ರವನ್ನು ಪಡೆದವನೆ. ಪರಾಕ್ರಮಶಾಲಿಯೂ ವಿಶೇಷ ಸೌಂದರ್ಯವಂತನೂ ಆಗಿದ್ದಾನೆ. ಎಂದು ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು. ವ|| ಹಾಗೆ ಕಡಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಮುಖಕಮಲದ ವಧುವಿನ ಸಂಬಂಧವುಳ್ಳ ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ದೇವೇಂದ್ರನೊಡನೆ ದೇವಲೋಕದ ಅಪ್ಸರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು. ದೇವೇಂದ್ರನು ಅರ್ಜುನನಿಗೆ ತನ್ನೊಡನೆ ಸ್ನಾನಮಾಡಿಸಿ ದಿವ್ಯಾಹಾರಗಳ ಸಹಪಂಕ್ತಿ ಭೋಜನವನ್ನು ಮಾಡಿದನು. ಜೊತೆಯಲ್ಲಿಯೇ ತಾಂಬೂಲವನ್ನು ಸ್ವೀಕರಿಸಿದನು. ತಾನು ಧರಿಸುವ ಎಲ್ಲ ಆಭರಣಗಳನ್ನು ತೊಡಿಸಿ ಅರ್ಜುನನನ್ನು ಕೋಟಿ ರೀತಿಯಿಂದ ಕೊಂಡಾಡಿದನು. ಕೆಲವು ದಿನಗಳಿದ್ದು ತಾನು ಕೊಲ್ಲಲು ಅಸಾಧ್ಯರಾಗಿದ್ದ ನಿವಾತಕವಚ ಕಾಲಕೇಯ ಪೌಲೋಮ ತುಳುತಾಳುಕರೆಂಬ ಅರುವತ್ತು ಕೋಟಿ ರಾಕ್ಷಸರನ್ನು ಗೆದ್ದು ಕೊಡಬೇಕು ಎಂದು ಕೇಳಿದನು. ಅರ್ಜುನನು ಸಾರಥಿಯಾದ ಮಾತಲಿಯೊಡನೆ ಕೂಡಿ ಅನೇಕ ರೀತಿಯ ಬಾಣಗಳಿಂದ ತುಂಬಿದ ತೇರನ್ನು ಹತ್ತಿ
೨೮. ರಾಕ್ಷಸ ಸಮೂಹವು ವಾಸಮಾಡುತ್ತಿದ್ದ ಸ್ಥಳವನ್ನು ಮುಟ್ಟಿದನು.
ವ|| ಅಂತು ದೇವಲೋಕದೊಳ್ ತನ್ನ ಮಾತೆ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ತು ಸೈರಿಸಲಾಱದೇಕಾಂತದೊಳ್ ಮೇಲೆ ಬಿೞ್ದೊಡೆ-
ಕಂ|| ಎಂದು ಪುರಂದರನರಸಿಯ
ಯಂದು ದಲೆನಗಬ್ಬೆಯೇ ತೊದಳ್ ನುಡಿಯದೆ ಪೋ|
ಗೆಂದೊಡದೊಂದಬ್ಬದೊಳೆ ಬೃ
ಹಂದಳೆಯಾಗೆಂದು ಮುನಿದು ಶಾಪವನಿತ್ತಳ್|| ೨೯
ವ|| ಇತ್ತೊಡೆಂತುಮಾನ್ ಪರಸ್ತ್ರೀಯರ ದೆಸೆಯೊಳಮಣ್ಣನ ನನ್ನಿಯ ವರ್ಷಾವಯೊಳಮೋತು ಪಿಡಿರೆಂ ನಿನ್ನ ನುಡಿಯೊಳೇ ದೋಷಮೆಂದು ತನ್ನ ಶೌಚದ ಮೇಗಣ ಕಲಿತನಮುಮಂ ಸೌಭಾಗ್ಯದ ಮೇಗಣ ಬಲ್ಲಾಳ್ತನಮುಮನಿಂದ್ರಲೋಕದಿಂ ಪೊಗೞಸಿ ಸುಖಮಿರ್ಪನ್ನೆಗಮಿತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಷ್ಠಿರ ಭೀಮಸೇನ ನಕುಳ ಸಹದೇವರುಂ ದ್ರೌಪದಿಯುಂ ವ್ಯಾಕುಳಚಿತ್ತರಾಗಿ-
ಸ್ರ|| ಆ ದಿವ್ಯಾಸ್ತ್ರಂಗಳಂ ಸಾಸಲೆ ನೆಗೞ್ದ ಪಾರಾಸರಂ ಪೇೞೆ ಮುನ್ನಂ
ಪೋದಂ ಸಂದಿಂದ್ರಕೀಲಕ್ಕದನಱವಮದೇನಾದುದೋ ಕಾರ್ಯಸಿದ್ಧಿ|
ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವಱಯಲ್ಬುರ್ಕುಮೇ ಬಾರದಲ್ಲಿಂ
ಪೋದಂ ವಿಕ್ರಾಂತತುಂಗಂ ಗಡಮದನಱಯಲ್ಕಾಗದಿನ್ನೆಲ್ಲಿ ಕಾಣ್ಬಂ|| ೩೦
ವ|| ಎಂದು ಪೋದ ದೆಸೆಯನಱಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವ್ಯೋಪದೇಶದೊಳಯ್ವರುಂ ಗಂಧಮಾದನಗಿರಿಗೆವಂದು ತದ್ಗಿರೀಂದ್ರದೊಳ್ ಭೀಮಸೇನಂ ದ್ರೌಪದಿಯ ಬಯಕೆಗೆ ಧನದನ ಕೊಳದೊಳಗಣ ಕನಕಕಮಳಂಗಳಂ ತರಲೆಂದು ಪೋಗಿ-
ಕಂ|| ಪ್ರಕಟಿತ ಸಾಹಸನಱುವ
ತ್ತು ಕೋಟಿ ಧನದಾನುಚರರನತಿ ರೌದ್ರಭಯಾ|
ನಕಮಾಗೆ ಕೊಂದು ಸೌಗಂ
ಕಕಾಂಚನಕಮಳಹರಣಪರಿಣತನಾದಂ|| ೩೧
ವ|| ಮತ್ತಂ ಜಟಾಸುರನೆಂಬಸುರನನಾ ಗಿರೀಂದ್ರಕಂದರದೊಳ್ ಸೀಳ್ದು ಸೀಱುಂಬುಳಾಡಿ ಕೆಲವು ದಿವಸಮನಿರ್ದೊಂದು ದಿವಸಮೊರ್ವನೆ ಬೇಂಟೆಯ ನೆವದಿಂದಲ್ಲಿಂ ತಳರ್ದು ಬಟ್ಟೆಯ ಕಣ್ಣೊಳಡ್ಡಂಬಿೞರ್ದ ವೃದ್ಧ ವಾನರನಂ ಕಂಡು-
ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತ್ರದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ ಬಂದನು. ವಿಶೇಷ ಮಹಾತ್ಮೆಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಸಮಪೀಠ)ವನ್ನು ಹತ್ತುವ ಸೌಭಾಗ್ಯವು ಅರ್ಜುನನಿಗಲ್ಲದೆ ಮತ್ತಾರಿಗೆ ಸಾಧ್ಯ. ವ|| ಹಾಗೆ ದೇವಲೋಕದಲ್ಲಿ ತನ್ನ ಮಾತೇ ಮಾತಾಗಿದ್ದ ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ರಂಭೆಯು ಸೋತು ಸಹಿಸಲಾರದೆ ರಹಸ್ಯವಾಗಿ ಬಂದು ಮೇಲೆ ಬಿದ್ದು ತನ್ನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದಳು.
೨೯. ‘ಎಲ್ಲಿಯವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ. ಕೆಟ್ಟ ಮಾತನಾಡದೆ ಹೋಗಿ ಎಂದು ಅವಳನ್ನು ಅರ್ಜುನನು ತಿರಸ್ಕರಿಸಿದನು. ರಂಭೆಗೆ ಕೋಪ ಬಂದಿತು. ‘ಒಂದು ವರ್ಷಕಾಲ ಬೃಹಂದಳೆಯಾಗು’ ಎಂದು ಶಾಪವನ್ನು ಕೊಟ್ಟಳು. ವ|| ಹೇಗೂ ನಮ್ಮಣ್ಣನ ಪ್ರತಿಜ್ಞೆಯ ವರ್ಷಾವಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ಸಂತೋಷದಿಂದ ಅಂಗೀಕಾರ ಮಾಡುತ್ತೇನೆ. ನಿನ್ನ ಮಾತಿನಲ್ಲಿ ದೋಷವೇನಿಲ್ಲ ಎಂದನು. ಹೀಗೆ ತನ್ನ ಶುದ್ಧನಡತೆಯೊಡನೆ ಕೂಡಿದ ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ ಇಂದ್ರಲೋಕದವರಿಂದ ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ ಈ ಕಡೆ ವಿಕ್ರಾಂತತುಂಗನಾದ ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದ್ರೌಪದಿ ಮೊದಲಾದವರು ಚಿಂತಾಕ್ರಾಂತರಾದರು.
೩೦. ಪ್ರಸಿದ್ಧನಾದ ವ್ಯಾಸಮಹರ್ಷಿಯು ದಿವ್ಯಾಸ್ತ್ರಗಳನ್ನು ಪಡೆಯಲೇಬೇಕು ಎಂದು ಹೇಳಲು ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು. ಅದೇನಾಯಿತೋ ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವಾಗುವುದಿಲ್ಲ. ಅರ್ಜುನನು ಇಂದ್ರಕೀಲದಿಂದ ಮುಂದೆ ಹೋದನೋ ಇಲ್ಲವೋ ಎಂಬುದನ್ನೂ ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ. ವ|| ಎಂದು ಅರ್ಜುನನು ಹೋದ ದಿಕ್ಕನ್ನು ತಿಳಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಯ ದಿವ್ಯೋಪದೇಶದಿಂದ ಅಯ್ದು ಮಂದಿಯೂ ಗಂಧಮಾದನಪರ್ವತಕ್ಕೆ ಬಂದರು. ಆ ಶ್ರೇಷ್ಠಪರ್ವತದಲ್ಲಿ ಭೀಮಸೇನನು ದ್ರೌಪದಿಯ ಆಶೆಯನ್ನು ತೀರಿಸುವುದಕ್ಕಾಗಿ ಕುಬೇರನ ಸರೋವರದಲ್ಲಿದ್ದ ಚಿನ್ನದ ಕಮಲಗಳನ್ನು ತರಲು ಹೋಗಿ
೩೧. ಸಾಹಸವನ್ನು ಪ್ರದರ್ಶಿಸಿ ಕುಬೇರನ ಅರವತ್ತು ಕೋಟಿ ಭಟರನ್ನು
ಚಂ|| ತೊಲಗೆನೆ ಬಟ್ಟೆಯಿಂ ತೊಲಗಲಾನಶಕ್ತನೆನಾರ್ಪೊಡೆನ್ನನಿನ್
ತೊಲಗಿಸಿ ಪೋಗು ನೀನೆನೆ ವೃಕೋದರನೊಯ್ಯನೆ ನಕ್ಕು ಬಾಲಮಂ|
ಸಲೆ ಮುರಿದೆತ್ತಲಾಟಿಸೆ ಧರಿತ್ರಿಗೆ ಕೀಲಿಸಿದಂತುಟಾಗೆ ದೋ
ರ್ವಲದ ಪೊಡರ್ಪುಗೆಟ್ಟು ನಡೆ ನೋಡಿ ಮರುತ್ಸುತನಂ ಮರುತ್ಸುತಂ|| ೩೨
ಕಂ|| ನೀನೆಮ್ಮಣ್ಣನೆ ವಂಶದ
ವಾನರನಲ್ಲಯ್ ವಲಂ ಮಹಾಬಲ ಪೇೞೇ|
ಕೀ ನಗದೊಳಿರ್ದೆಯೆನೆ ತ
ದ್ವಾನರನೞ್ಕರ್ತು ಭೀಮನೆಂಬಂ ನೀನೇ|| ೩೩
ವ|| ಎಂಬುದುಮಪ್ಪೆನೆಂದೊಡೆ ನಿಮ್ಮಣ್ಣನಪ್ಪಣುವನೆ ನಾನಪ್ಪೆನೆಂದು ಪೇೞ್ವುದುಮಾಗಳ್ ಸಾಷ್ಟಾಂಗಮೆಱಗಿ ಪೊಟವಟ್ಟ ಭೀಮಸೇನನಂ ಪರಸಿ-
ಕಂ|| ಎನ್ನಂತಪ್ಪೊಡವುಟ್ಟಿದ
ರಿನ್ನಿನಗೊಳರಾಗಲಹಿತರಿದಿರಾಂಪರೆ ಪೇೞು|
ನಿನ್ನಂ ಪಗೆವರ ಬೇರೊಳ್
ಬೆನ್ನೀರಂ ಪೊಯ್ದು ನಿನಗೆ ಮಾೞ್ಪೆಂ ಧರೆಯಂ|| ೩೪
ವ|| ಎಂಬುದುಂ ಭೀಮಸೇನನಿಂತೆಂದಂ-
ಮ|| ಬೆಸನಂ ಪೂಣ್ದು ಕಡಂಗಿ ಪಾಯ್ದು ಕಡಲಂ ಮುಂ ಪೂಣ್ದರಂ ಕೊಂದು ಪೊ
ಕ್ಕು ಸಮಂತಾಗಡೆ ಲಂಕೆಯಂ ಬನಮನಾಟಂದುರ್ಕಿ ಕಿೞಕ್ಕಿ ಸಂ|
ತಸಮಂ ಸೀತೆಗೆ ಮಾಡಿ ಸುಟ್ಟು ಪೊೞಲಂ ಕಾಳಾನಳಂಗಿತ್ತು ಬೇ
ವಸಮಂ ರಾಮನಿನುಯ್ದ ನೀಂಬರೆಗಮೇನಾ ಕೌರವರ್ ಗಂಡರೇ|| ೩೫
ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು ಬಂದನು.
೩೨. ಮತ್ತು ಜಟಾಸುರನೆಂಬ ರಾಕ್ಷಸನನ್ನು ಆ ಪರ್ವತದ ಗುಹೆಯಲ್ಲಿ ಸೀಳಿ ಚೆಲ್ಲಾಪಿಲ್ಲಿ ಮಾಡಿ ಅಲ್ಲಿ ಕೆಲವು ದಿವಸವಿದ್ದನು. ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು ದಾರಿಯ ಎದುರಿಗೆ ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು ‘ದಾರಿಯಿಂದ ತೊಲಗು’ ಎಂದನು. ಅದಕ್ಕೆ ಆ ಕಪಿಯು ತೊಲಗಲಶಕ್ತನಾಗಿದ್ದೇನೆ. ನಿನಗೆ ಸಾಮರ್ಥ್ಯವಿದ್ದರೆ ನೀನೇ ನನ್ನನ್ನು ತೊಲಗಿಸಿ ಹೋಗು’ ಎಂದಿತು. ಭೀಮನು ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ಬಗ್ಗಿಸಿ ಎತ್ತಲು ಪ್ರಯತ್ನಿಸಿದರೂ ಭೂಮಿಗೆ ಬೆಸೆದಿರುವಂತಿರಲು ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೇ ವಿನಾ ಭೀಮಸೇನನು ಆ ವಾನರನ ಬಾಲವನ್ನು ಅಲುಗಿಸಲೂ ಆಗಲಿಲ್ಲ. ಆಗ ಆಂಜನೇಯನನ್ನು ದೀರ್ಘವಾಗಿ ನೋಡಿ
೩೩. ‘ನೀನು ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ (ಆಂಜನೇಯನೇ) ಅಲ್ಲವೇ? ಪರಾಕ್ರಮಶಾಲಿಯೇ ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು’ ಎಂದು ಕೇಳಿದನು. ಆ ವಾನರನು ಪ್ರೀತಿಸಿ ನೋಡಿ ಓಹೋ ಭೀಮನೆಂಬುವವನು ನೀನೆಯೊ ವ|| ಎನ್ನಲು ‘ಭೀಮನು ನಾನು’ ಎಂದನು. ಹೌದು, ಹಾಗಾದರೆ ನಿಮ್ಮಣ್ಣನಾದ ಹನುಮಂತನು ನಾನೆಂಬುದೂ ಸತ್ಯ ಎಂದನು, ಆಗ ಸಾಷ್ಟಾಂಗ ನಮಸ್ಕಾರ ಮಾಡಿದ ಭೀಮನನ್ನು ಆಂಜನೇಯನು ಹರಸಿದನು.
೩೪. ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ. ನಿನ್ನನ್ನು ದ್ವೇಷಿಸುವವರ ಬೇರಿನಲ್ಲಿ ಬಿಸಿನೀರನ್ನು ಸುರಿದು ನಿನಗೆ ರಾಜ್ಯವನ್ನು ದೊರಕಿಸುತ್ತೇನೆ ಎಂದನು. ವ|| ಅದಕ್ಕೆ ಭೀಮಸೇನನು ಹೀಗೆ ಹೇಳಿದನು.
೩೫. ಅಣ್ಣಾ ; ಕಾರ್ಯ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ ಪ್ರತಿಜ್ಞೆಮಾಡಿದ್ದವರನ್ನು ಕೊಂದೆ, ಆಗಲೇ ಲಂಕಾಪ್ರವೇಶಮಾಡಿದೆ, ಅಶೋಕವನ್ನಾಕ್ರಮಿಸಿ ಉತ್ಸಾಹದಿಂದ ಉಬ್ಬಿ (ಅದನ್ನು) ನಾಶಪಡಿಸಿದೆ. ಸೀತಾದೇವಿಗೆ ಸಂತೋಷವನ್ನುಂಟುಮಾಡಿದೆ. (ಲಂಕಾ) ಪಟ್ಟಣವನ್ನು ಸುಟ್ಟು ಹಾಕಿದೆ (ಕಾಲಾಗ್ನಿಗೆ ಕೊಟ್ಟು) ರಾಮನ ದುಖವನ್ನು ಪರಿಹಾರಮಾಡಿದೆ. ನಿನ್ನವರೆಗೂ (ನಿನ್ನನ್ನೂ ಪ್ರತಿಭಟಿಸುವಷ್ಟು)
ಕಂ|| ಎನಗೆ ದಯೆಗೆಯ್ವುದೊಂದನೆ
ಮೊನೆಯೊಳ್ ವಿಜಯಂಗೆ ವಿಜಯಮಾಗಿರೆ ನೀಮಾ|
ತನ ಕೇತನದೊಳ್ ಫಣಿಕೇ
ತನಬಲಕುತ್ಪಾತಕೇತುವಪ್ಪುದೆ ಸಾಲ್ಗುಂ|| ೩೬
ವ|| ಎಂದು ಬೇಡಿಕೊಂಡೊಡದೇವಿರಿದಿತ್ತೆನೆಂದಣುವನದೃಶ್ಯಮಾದನಾಗಳ್ ಭೀಮಸೇನಂ ಬೀಡಿಂಗೆ ವಂದು ಧರ್ಮಪುತ್ರಂಗಾ ಮಾತೆಲ್ಲಮಂ ಪೇೞ್ದು ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪನ್ನೆಗಮಿತ್ತ ವಿಬುಧವನಜವನಕಳಹಂಸನುಂ ಪಲವುಂ ದಿವಸಮಗಲ್ದಿರ್ದ ತನ್ನೊಡವುಟ್ಟಿದರಂ ನೆನೆದು ಪೋಪೆನೆಂದಿಂದ್ರನಂ ಬೀೞ್ಕೊಂಡು ತನಗೆ ದೇವೇಂದ್ರನಿತ್ತ ಐಂದ್ರಮೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯ್ಕೊಂಡು ದೇವಸ್ತ್ರೀಯರ ಮನಮನಿೞ್ಕುಳಿಗೊಂಡಿಂದ್ರಂ ತನ್ನ ಪುಷ್ಪಕಮನೇಱಸಿ ಮಾತಳಿಯಂ ಸಾರಥಿಯಾಗಲ್ವೇೞ್ದು ಕೞಪೆ ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆವಂದು ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ತನ್ನ ಬರವನೆ ಪಾರುತ್ತಿರ್ದ ಧರ್ಮಪುತ್ರನ ಮರುತ್ಸುತನ ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಮರ್ಚಿಸಿ ತದೀಯಾಶೀರ್ವಚನಮನಾಂತು ತನಗ ಪೊಡವಟ್ಟ ನಕುಳ ಸಹದೇವರಿರ್ಬರುಮನೞ್ಕಱಂ ಪರಸಿ ಬೞಯಮಿಂದ್ರಕೀಲನಗೇಂದ್ರದೊಳೀಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತ್ರಮಂ ತೋಱ ತನ್ನನಿಂದ್ರನೊಡಗೊಂಡು ಪೋದುದುಮನಿಂದ್ರಲೋಕದೊಳಾತನಲ್ಲಿ ಪಡೆದ ಮಹಿಮೆಯುಮನಱಯೆ ಪೇೞ್ದು ನಾವಿಲ್ಲಿರಲ್ಬೇಡ ದ್ವೈತವನದೊಳಿರ್ಪಂ ಬನ್ನಿಮೆಂದು ಮಾತಳಿಯಂ ಬೀೞ್ಕೊಟ್ಟು ಕೞಪಿ ನಿಜಪರಿಜನಸಹಿತಂ ಬಂದು ಸುಖಮಿರ್ಪನ್ನೆಗಮೊಂದು ದಿವಸಮೊಂದು ಮಾಯಾ ಮತ್ತಹಸ್ತಿ-
ಮ|| ಮಸಕಂ ಕಾಯ್ಪು ಜವಂ ಜವಂಗಮಿದಿರೊಳ್ ನೋಡಲ್ಕಗುರ್ವಾಗೆ ಮಾಂ
ದಿಸಿವಿ ವಂದುದು ಕೊಂದುದೆಂದು ಭಯದಿಂ ವಿಪ್ರರ್ ತೆರಳ್ದೋಡೆ ತಾ|
ಪಸರಂ ಬೆರ್ಚಿಸಿ ತೂಳ್ದಿ ಬೇಳ್ವರಣಿಯಂ ಕೊಂಡಾಶ್ರಮಕ್ಕಿಂತು ಬೇ
ವಸಮಂ ಮಾಡುವುದಾಯ್ತದೊಂದು ವಿಭವಂ ಮತ್ತೇಭವಿಕ್ರೀಡಿತಂ|| ೩೭
ವ|| ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್ ಬಂದು ಯುಷ್ಠಿರಂಗಱಪಿ ನೀಮೆಮಗದಱ ಕೈಗೆ ಪೋದರಣಿಯಂ ತಂದೀಯದಾಗಳಿಷ್ಟಿ ವಿಘ್ನಂಗಳಂ ಮಾಡಿದಿರೆಂದೊಡಯ್ವರುಂ ಪ್ರಚಂಡಕೋದಂಡಹಸ್ತರ್ ಕಾಳಕಾಳಸ್ವರೂಪಮಂ ಆ ಕೌರವರು ಶೂರರೇ ಏನು
೩೬. ‘ನನಗೆ ದಯಮಾಡಿ ಒಂದನ್ನು ಕರುಣಿಸಬೇಕು; ಯುದ್ಧದಲ್ಲಿ ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು? ಎಂದು ಬೇಡಿದನು. ವ|| ‘ಅದೇನು ದೊಡ್ಡದು ಆಗಬಹುದು’ ಎಂದು ಹೇಳಿ ಹನುಮಂತನು ಅದೃಶ್ಯನಾದನು. ಭೀಮಸೇನನು ಬೀದಿಗೆ ಬಂದು ಧರ್ಮರಾಜನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿದನು. ಎಲ್ಲರೂ ವಿಕ್ರಮಾರ್ಜುನನ ಬರವನ್ನೇ ಇದಿರುನೋಡುತ್ತಿದ್ದರು. ಈ ಕಡೆ ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನೂ ಅನೇಕಕಾಲ ಅಗಲಿದ್ದ ತನ್ನ ಸಹೋದರರನ್ನು ಜ್ಞಾಪಿಸಿಕೊಂಡು ಹಿಂದಿರುಗಲು ಮನಸ್ಸುಮಾಡಿ ಇಂದ್ರನನ್ನು ಬೀಳ್ಕೊಟ್ಟು ತನಗೆ ದೇವೇಂದ್ರನು ಕೊಟ್ಟ ಐಂದ್ರವೆಂಬ ದಿವ್ಯಾಸ್ತ್ರವನ್ನೂ ನೈಷ್ಠಿಕವೆಂಬ ಮುಷ್ಟಿಯನ್ನೂ (ಮಂತ್ರವಿಶೇಷ) ಅಂಗೀಕಾರಮಾಡಿ ಇಂದ್ರನು ತನ್ನನ್ನು ಅವನ ಪುಷ್ಪಕವಿಮಾನವನ್ನು ಹತ್ತಿಸಿ ಮಾತಲಿಯನ್ನು ಸಾರಥಿಯಾಗಿರ ಹೇಳಿ ಕಳುಹಿಸಲು ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದನು. ವರ್ಷಾಕಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ ತನ್ನ ಬರವನ್ನೇ ಎದುರು ನೋಡುತ್ತಿದ್ದ ಧರ್ಮರಾಜ ಮತ್ತು ಭೀಮರ ಪಾದಕಮಲಗಳನ್ನು ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ ಅವರ ಆಶೀರ್ವಾದವನ್ನು ಧರಿಸಿದನು. ತನಗೆ ನಮಸ್ಕಾರಮಾಡಿದ ನಕುಲಸಹದೇವರಿಬ್ಬರನ್ನೂ ಪ್ರೀತಿಯಿಂದ ಆಶೀರ್ವಾದ ಮಾಡಿದನು. ಆನಂತರ ಇಂದ್ರಕೀಲಪರ್ವತದಲ್ಲಿ ಈಶ್ವರನ ವರಪ್ರಸಾದದಿಂದ ಪಡೆದ ದಿವ್ಯಾಸ್ತ್ರ (ಪಾಶುಪತಾಸ್ತ್ರ)ವನ್ನು ತೋರಿ ತನ್ನನ್ನು ಇಂದ್ರನು ಜೊತೆಯಲ್ಲಿ ಕರೆದುಕೊಂಡು ಹೋದುದನ್ನೂ ಇಂದ್ರಲೋಕದಲ್ಲಿ ಇಂದ್ರನಿಂದ ಪಡೆದ ಮಹಿಮೆ (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿದನು. ನಾವಿಲ್ಲಿರುವುದು ಬೇಡ ದ್ವೆ ತವನದಲ್ಲಿರೋಣ ಬನ್ನಿ ಎಂದು ಹೇಳಿ, ಮಾತಲಿಯನ್ನು ಕಳುಹಿಸಿಕೊಟ್ಟು ತನ್ನ ಬಂಧುಗಳ ಸಮೇತ ದ್ವೆ ತವನಕ್ಕೆ ಬಂದು ಸುಖವಾಗಿದ್ದನು.
೩೭. ಹಾಗಿರುವಾಗ ‘ರಭಸ ಕೋಪ ಮತ್ತು ವೇಗದಲ್ಲಿ ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ ಹಾಗೆ ಇರುವ ಮಾಯಾಗಜವು ಬಂದಿತು! ತಡೆಯಿರಿ, ಕೊಂದುಹಾಕುತ್ತಿದೆ’ ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಿದರು. ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು (ಅಗ್ನಿಯನ್ನುಂಟುಮಾಡಲು ಉಪಯೋಗಿಸುವ ಕಡೆಗೋಲು) ಕೊಂಡು ಓಡಿತು. ವ|| ಆಗ ಆ ಮದ್ದಾನೆಯ ಕೋಲಾಹಲವನ್ನು ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ
ಕೆಯ್ಕೊಂಡು ಮದಾಂಧಗಂಧಸಿಂಧುರದ ಬೞಯಂ ನಿರ್ವಂದದಿಂ ತಗುಳ್ವುದುಮಾ ಮಾಯಾ ಮತ್ತಹಸ್ತಿಯುಂ ಮೂಱು ಜಾವರಂಬರಂ ರೂಪುದೋಱ ಪರಿದು ಬೞಯಮದೃಶ್ಯಮಾದೊಡಯ್ವರುಂ ಚೋದ್ಯಂ ಬಟ್ಟು ಘರ್ಮಕಿರಣಸಂತಾಪತಾಪಿತಶರೀರರೊಂದಾಲದ ಮರದ ಕೆಳಗೆ ವಿಶ್ರಮಿಸೆ ಧರ್ಮ ಪುತ್ರಂ ನೀರಡಸಿ ಸಹದೇವನನೆಲ್ಲಿಯಾದೊಡಂ ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದುದು ಮಂತೆಗೆಯ್ವೆನೆಂದು ಕೂಜಜ್ಜಳಚರಕುಳಕಳರವದೊಳಂ ಕಮಳಕುವಳಯರಜಕಷಾಯ ಪರಿಮಿಳದಳಿಪಟಳಜಟಿಳಮಾಗಿ ಬಂದು ತೀಡುವ ಮಂದಾನಿಳನಿಂ ನೀರ ದೆಸೆಯನಱದು ಪೋಗೆ ವೋಗೆ-
ಕಂ|| ಬಕ ಕಲಹಂಸ ಬಲಾಕ
ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱ|
ತ್ತು ಕೊಳಂ ಪರಿ ವಿಕಸಿತ ಕನ
ಕ ಕಂಜಕಿಂಜಲ್ಕಪುಂಜಪಿಂಜರಿತಜಳಂ|| ೩೮
ವ|| ಅಂತು ಸೊಗಯಿಸುವ ಸರೋವರಮಂ ಕಂಡು ತಾನುಂ ನೀರಡಸಿದನಪ್ಪುದಱಂದದಱ ಕೆಲದ ಲತೆಯ ಮೆಳೆಯೊಳ್ ಬಿಲ್ಲುಮಂಬುಮಂ ಸಾರ್ಚಿ ಕೊಳನಂ ಪೊಕ್ಕು ಕರಚರಣ ವದನಪ್ರಕ್ಷಾಲನಂಗೆಯ್ದು ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳೊಂದು ದಿವ್ಯವಚನಮಾಕಾಶದೊಳ್-
ಕಂ|| ತೋಯಜಷಂಡಮನಿದನಾ
ನಾಯತಿಯಿಂ ಕಾವೆನೆನ್ನ ಮಾತಿಂಗಲೆ ಕೌಂ|
ತೇಯ ಮಱುಮಾತನಿತ್ತು ಮ
ದೀಯ ಸರೋವರದ ತೋಯಮಂ ಕುಡಿ ಕೊಂಡುಯ್|| ೩೯
ವ|| ಎಂಬುದುಮಾ ದಿವ್ಯವಚನಮನುಲ್ಲಂಘಿಸಿ ನೀರೞ್ಕೆಪೋಪಿನಂ ನೀರಂ ಕುಡಿದು ಪದ್ಯಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂ ಪೊಱಮಟ್ಟೊಂದೆರಡಡಿಯನಿಡುತೆ ಗತಪ್ರಾಣನಾಗಿ ಬಿೞರ್ದನಿತ್ತ ಧರ್ಮಪುತ್ರಂ ಸಹದೇವಂ ತಡೆದುದರ್ಕುಮ್ಮಳಿಸಿ ನಕುಲನ ಮೊಗಮಂ ನೋಡಿ ಸಹದೇವನೊಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದೊಡಂತೆಗೆಯ್ವೆನೆಂದು ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿೞರ್ದ ತಮ್ಮನಂ ಕಂಡು ಚೋದ್ಯಂಬಟ್ಟು-
ತಂದುಕೊಡದಿದ್ದರೆ ಯಜ್ಞವಿಘ್ನಮಾಡಿದವರಾಗುತ್ತೀರಿ ಎಂದರು. ಅಯ್ದು ಜನವೂ ಭಯಂಕರವಾದ ಬಿಲ್ಲನ್ನು ತರಿಸಿ ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ ಹಿಂದೆ ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು ಆ ಮಾಯಾಮದಗಜವು ಮೂರು ಜಾವದವರೆಗೂ ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು. ಅಯ್ದು ಜನವೂ ಆಶ್ಚರ್ಯಪಟ್ಟು ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ ಒಂದು ಆಲದಮರದ ಕೆಳಗೆ ವಿಶ್ರಮಿಸಿಕೊಂಡರು ಧರ್ಮರಾಜನು ಬಾಯಾರಿ ಸಹದೇವನನ್ನು ಎಲ್ಲಿಂದಲಾದರೂ ಬೇಗ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಮಾಡುತ್ತೇನೆ ಎಂದು ಶಬ್ದಮಾಡುತ್ತಿರುವ ಜಲಚರಪ್ರಾಣಿಗಳ ಕಲಕಲಶಬ್ದದಿಂದಲೂ ಕುಮಲಕನ್ನೆ ದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ಬಂದು ಬೀಸುವ ಮಂದಮಾರುತದಿಂದಲೂ ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದನು.
೩೮. ಬಕ, ಹಂಸ ಮತ್ತು ಬೆಳ್ಳಕ್ಕಿಗಳ ಸಮೂಹದ ನಯವಾದ ಶಬ್ದದಿಂದಲೂ ರಮ್ಯವಾಗಿ ಅರಳಿರುವ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಹಳದಿಯ ಬಣ್ಣವನ್ನುಳ್ಳ ನೀರಿನಿಂದಲೂ ಕೂಡಿದ ಸರೋವರವೊಂದು ಇದಿರಿನಲ್ಲಿ ಕಾಣಿಸಿಕೊಂಡಿತು. ವ|| ಹಾಗೆ ಸೊಗಯಿಸುತ್ತಿರುವ ಸರೋವರವನ್ನು ನೋಡಿ ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ ಬಳ್ಳಿಯ ಮೆಳೆಯಲ್ಲಿ ಬಿಲ್ಲನ್ನೂ ಬಾಣವನ್ನೂ ಇಟ್ಟು ಸರೋವರವನ್ನು ಪ್ರವೇಶಿಸಿ ಕೈಕಾಲುಮುಖವನ್ನು ತೊಳೆದುಕೊಂಡು ನೀರನ್ನು ಕುಡಿಯುವುದಕ್ಕೋಸ್ಕರ ತನ್ನ ಕೈಬೊಗಸೆಯನ್ನು ನೀಡಿದಾಗ ಒಂದು ಅಶರೀರವಾಣಿಯು ಆಕಾಶದಲ್ಲಿ ಹೀಗೆಂದಿತು.
೩೯. ‘ಈ ಕೊಳವನ್ನು ನಾನು ಎಚ್ಚರದಿಂದ ಕಾಯುತ್ತಿದ್ದೇನೆ. ಎಲೈ ಕೌಂತೇಯನೆ ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟು ನನ್ನ ಸರೋವರದ ನೀರನ್ನು ಕುಡಿದುಕೊಂಡು ಹೋಗು’ ವ|| ಎನ್ನಲು ಆ ದಿವ್ಯವಚನವನ್ನುಲಂಘನೆ ಮಾಡಿ ಬಾಯಾರಿಕೆ ಹೋಗುವವರೆಗೂ ನೀರು ಕುಡಿದು ಕಮಲಪತ್ರಗಳ ಸಮೂಹದಲ್ಲಿ ತಮ್ಮಣ್ಣನಿಗೆ ನೀರನ್ನು ತುಂಬಿಕೊಂಡು ಸರೋವರದಿಂದ ಹೊರಟನು. ಒಂದೆರಡು ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು. ಎಷ್ಟು ಹೊತ್ತಾದರೂ ಸಹದೇವನು ಹಿಂತಿರುಗಿ ಬರದಿದ್ದುದರಿಂದ
ಕಳವಳಪಟು ಯುಷ್ಠಿರನು ನಕುಲನನ್ನು ನೋಡಿ ಸಹದೇವನನ್ನು ಕರೆದುಕೊಂಡು ನೀನರ‍್ನೂ ತೆಗೆದುಕೊಂಡು ಬಾ ಎಂದು ಹೇಳಿದನು.
ಕಂ|| ತಾನುಂ ಸರೋಜಷಂಡಮ
ನಾನತರಿಪು ಪೊಕ್ಕು ದಿವ್ಯಚನಮನದನಂ|
ತೇನು ಬಗೆಯದೆ ಕುಡಿದ
ಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ|| ೪೦
ವ|| ಅನ್ನೆಗಂ ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನೊಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂತೆಗೆಯ್ವೆನೆಂದು ಬಂದು ಕೊಳನ ತಡಿಯೊಳಚೇತನರಾಗಿ ಬಿೞರ್ದ ತಮ್ಮಂದಿರಿರ್ವರುಮಂ ಕಂಡು ವಿಸ್ಮಯಂಬಟ್ಟು-
ಕಂ|| ಆ ಕಮಳಾಕರಮಂ ಪೊ
ಕ್ಕಾಕಾಶಧ್ವನಿಯನುಱದೆ ಕುಡಿದರಿಭೂಪಾ|
ನೀಕಭಯಂಕರನುಂ ಗಡ
ಮೇಕೆಂದಱಯೆಂ ಬೞಲ್ದು ಜೋಲ್ದಂ ಧರೆಯೊಳ್|| ೪೧
ವ|| ಅನ್ನೆಗಮತ್ತ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ ಭೀಮಸೇನನಂ ನೀಂ ಪೋಗಿ ಮೂವರುಮನೊಡಂಗೊಂಡು ನೀರಂ ಕೊಂಡು ಬಾಯೆಂದೊಡಂತೆಗೆಯ್ವೆನೆಂದು ವಾಯುವೇಗದಿಂ ಬಂದು ಪುಂಡರೀಕಷಂಡೋಪಾಂತದೊಳ್ ವಿಗತಜೀವಿತರಾಗಿರ್ದ ಮೂವರನುಜರುಮಂ ಕಂಡಿದು ಮನುಜರಿಂದಾದುಪದ್ರವಮಲ್ಲ ಮೇನಾನುಮೊಂದು ದೇವತೋಪದ್ರವಮಾಗಲೆ ವೇೞ್ಕುಮೆಂದು
ಕಂ|| ಬಿಡದೆ ಕಡುಕೆಯ್ದ ದಿವ್ಯದ
ನುಡಿಗೆ ಕಿವುೞ್ಕೇಳ್ದು ಕುಡಿದು ನೀರಂ ಭೀಮಂ|
ಪಿಡಿದ ಗದೆವೆರಸು ಭೋಂಕೆನೆ
ಕೆಡೆದಂ ಗಿರಿಶಿಖರದೊಡನೆ ಕೆಡೆವಂತಾಗಳ್|| ೪೨
ವ|| ಅಂತು ನಾಲ್ವರುಂ ವಿಳಯಕಾಲವಾತಾಹತಿಯಿಂ ಕೆಡೆದ ಕುಲಗಿರಿಗಳಂತೆ ಕೆಡೆದು ವಿಗತಜೀವಿತರಾಗಿರ್ದ ಪದದೊಳತ್ತ ದುರ್ಯೋಧನನ ಬೆಸದೊಳಾತನ ಪುರೋಹಿತಂ ಕನಕಸ್ವಾಮಿಯೆಂಬಂ ಪಾಂಡವರ್ಗಾಭಿಚಾರಮಾಗೆ ಬೇಳ್ವ ಬೇಳ್ವೆಯ ಕೊಂಡದೊಳಗಣಿಂದ ಮಂಜನ ಪುಂಜದಂತಪ್ಪ ಮೆಯ್ಯುಂ ಸಿಡಿಲನಡಸಿದಂತಪ್ಪ ದಾಡೆಯುಮುರಿಯುರುಳಿಯಂತಪ್ಪ ಕಣ್ಣುಂ ಕೃತಾಂತನಂತಾಕಾರಮಾಗಿ ತೞತೞಸಿ ಪೊಳೆವ ಕತ್ತಿಗೆಯುಂ ಬೆರಸು ಪೊಱಮಟ್ಟು ಕೀರ್ತಿಗೆಯೆಂಬುಗ್ರದೇವತೆ ಬೆಸಸು ಬೆಸಸೆಂದು ಬೆಸನಂ ಬೇಡೆ ಪಾಂಡವರನೆಲ್ಲಿವೊಕ್ಕೊಡಂ ಕೊಲ್ಲೆಂದೊಡಂತೆ ಗೆಯ್ವೆನೆಂದು ಪೋಗೆಲ್ಲಿಯುಮಱಸಿ ಕಾಣದೆ ಕೊಳನ ತಡಿಯೊಳ್ ಬಿೞರ್ದ ನಾಲ್ವರುಮಂ ಕಂಡು ಬಾಪ್ಪು ಬೞ್ದೆನೆಂದು ತಿನಲ್ ಸಾರ್ವಾಗಳವರ್ಗಳ್ಗನಿತಂ ಮಾಡಿದ ದೈವಂ ಪ್ರತ್ಯಕ್ಷಮಾಗಿ ಗಜಱ ಗರ್ಜಿಸುತ್ತುಂ ಬಂದು-
೪೦. ಅವನೂ ಸರೋವರವನ್ನು ಪ್ರವೇಶಿಸಿ ಶತ್ರುಗಳನ್ನು ಅನಮಾಡಿಕೊಂಡಿದ್ದ ಆ ನಕುಲನು ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ಅವಿವೇಕದಿಂದ ಕುಡಿದ ವಿಷಪಾನ ಮಾಡಿದವರ ಹಾಗೆ ಬಿದ್ದನು. ವ|| ಆಗ ಧರ್ಮರಾಯನು ಇಬ್ಬರ ಬರುವಿಕೆಯನ್ನೂ ಕಾಣದೆ ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ ಅರ್ಜುನನನ್ನು ನೀನು ಬೇಗಹೋಗಿ ಆ ಮಕ್ಕಳುಗಳನ್ನೊಳಗೊಂಡು ನೀರನ್ನೂ ತೆಗೆದುಕೊಂಡು ಸಾವಕಾಶಮಾಡದೆ ಬಾ ಎಂದನು. ಹಾಗೆಯೇ ಮಾಡುತ್ತೇನೆ ಎಂದು ಅರ್ಜುನನು ಬಂದು ಕೊಳದ ದಡದಲ್ಲಿ ಸತ್ತು ಬಿದ್ದಿದ್ದ ಇಬ್ಬರು ತಮ್ಮಂದಿರನ್ನು ನೋಡಿ ಆಶ್ಚರ್ಯಪಟ್ಟನು.
೪೧. ಶತ್ರುರಾಜರ ಸಮೂಹಕ್ಕೆ ಭಯವನ್ನುಂಟುಮಾಡುವ ಅರ್ಜುನನೂ ಆ ಸರೋವರವನ್ನು ಪ್ರವೇಶಿಸಿ ಏನೆಂದು ತಿಳಿಯದೆ ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು. ವ|| ಅಷ್ಟರಲ್ಲಿ ಆ ಕಡೆ ಧರ್ಮರಾಯನು ಮೂವರು ತಮ್ಮಂದಿರ ಬರವನ್ನು ಕಾಣದೆ ಉತ್ಸಾಹಶೂನ್ಯನಾಗಿ (ಒಡೆದ ಮನಸ್ಸುಳ್ಳವನಾಗಿ) ಭೀಮಸೇನನನ್ನು ‘ನೀನು ಹೋಗಿ ಮೂವರನ್ನೂ ಕೂಡಿಕೊಂಡು ನೀರನ್ನೂ ತೆಗೆದುಕೊಂಡು ಬಾ’ ಎಂದನು, ‘ಹಾಗೆಯೇ ಮಾಡುತ್ತೇನೆ’ ಎಂದು ವಾಯುವೇಗದಿಂದ ಬಂದು ಸರೋವರದ ಸಮೀಪದಲ್ಲಿ ಸತ್ತು ಹೋಗಿದ್ದ ಮೂವರು ತಮ್ಮಂದಿರನ್ನೂ ನೋಡಿ ಇದು ಮನುಷ್ಯರಿಂದಾದ ಕೇಡಲ್ಲ ; ಯಾವುದಾದರೂ ದೇವತೆಯ ಹಿಂಸೆಯಾಗಿರಬೇಕೆಂದು ಊಹಿಸಿ
೪೨. ತನಗೂ ಅವಕಾಶಕೊಡದೆ ತಡೆದ ದೇವತೆಯ ಮಾತನ್ನು ಉದಾಸೀನಮಾಡಿ ನೀರನ್ನು ಕುಡಿದು ಹಿಡಿದ ಗದೆಯೊಡನೆಯೇ ಶಿಖರಸಹಿತವಾಗಿ ಪರ್ವತವು ಉರುಳುವಂತೆ (ಭೀಮ) ತಟಕ್ಕನೆ ಬಿದ್ದನು. ವ|| ಹಾಗೆ ನಾಲ್ಕು ಮಂದಿಯೂ ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಬಿದ್ದ ಕುಲಪರ್ವತಗಳಂತೆ ಕೆಡೆದು ಗತಪ್ರಾಣರಾಗಿದ್ದ ಸ್ಥಿತಿಯಲ್ಲಿ ಆ ಕಡೆ ದುರ್ಯೋಧನನ ಆಜ್ಞೆಯಿಂದ ಆತನ ಪುರೋಹಿತನಾದ ಕನಕಸ್ವಾಮಿಯೆಂಬುವನು ಪಾಂಡವರಿಗೆ ಮಾಟಮಾಡಲು ಒಂದು ಹೋಮಮಾಡುತ್ತಿದ್ದನು. ಆ ಯಜ್ಞಕುಂಡದಿಂದ ಕತ್ತಲೆಯ ಸಮೂಹದಂತಿರುವ ಶರೀರವೂ ಸಿಡಿಲನ್ನು ತುಂಬಿಕೊಂಡ
ಕಂ|| ಎಲೆ ಪಿಱತಿನಿ ಪೋ ಮುಟ್ಟದೆ
ತೊಲಗೀ ನಾಲ್ವರ್ಕಳಸುವನವರ್ಗಳ ಮೆಯ್ಯಿಂ|
ತೊಲಗಿಸಿ ಮುನ್ನಮೆ ಕಾದಿ
ರ್ದಲಂಘ್ಯಬಲನೆನಿಸಿದೆನಗೆ ನೀನಗ್ಗಳಮೇ|| ೪೩
ವ|| ಅದಲ್ಲದೆಯುಂ ನೀನೆ ಜಾತಿದೇವತೆಯಪ್ಪೊಡೆನ್ನೆಂಜಲನೆಂತು ತಿಂಬೆಯೆಂಬುದುಂ ಪಾಂಡವರ್ ಮುನ್ನಮೆ ನಿನ್ನ ಕೆಯ್ಗೆ ವಂದರೆನಗಮಾ ಬೆಸಂ ತಪ್ಪಿದುದಾನಾರಂ ತಿಂಬೆಂ ಪೇೞೆನೆ ನಿನ್ನನಾವನೊರ್ವನಕಾರಣಂ ಪುಟ್ಟಿಸಿದನಾತನನೆ ತಿನ್ನೆಂಬುದುಮಂತೆಗೆಯ್ವೆನೆಂದು ಪೋಗಿ-
ಕಂ|| ಕನಕನ ಬೇಳ್ವೆ ತಗುಳ್ದುದು
ಕನಕನನೆಂಬೊಂದು ಮಾತು ಧರೆಗೆಸೆಯೆ ಸುಯೋ|
ಧನನ ಪುರೋಹಿತನಪ್ಪಾ
ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್|| ೪೪
ವ|| ಅನ್ನೆಗಮಿತ್ತ ಕೃತಾಂತನಂದನಂ ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ-
ಕಂ|| ಪೋದರನೊಡಗೊಂಡು ಬರಲ್
ಪೋದರುಮಾ ಪೋದ ಪೋಗೆ ಪೋದರ್ ತಡೆಯಲ್|
ಪೋದವರಲ್ತೆಂದು ಮನ
ಖೇದಂಬೆರಸೆಯ್ದವಂದನಬ್ಜಾಕರಮಂ|| ೪೫
ವ|| ಅಂತೆಯ್ದೆವಂದು ಬಱಸಿಡಿಲ್ ಪೊಡೆಯೆ ಕೆಡೆದ ಶಾಲತರುಗಳಿರ್ಪಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು-
ಕಂ|| ಆರಿಂದಮಿವರ್ಗಿದಾಯ್ತೆಂ
ದಾರಯ್ವೆಂ ಬೞಯಮಾದೊಡೇನಾಯ್ತೆಂದಂ|
ಭೋರುಹರಜಪಟಾವೃತ
ವಾರಿಯನಾ ನೃಪತಿ ಕುಡಿಯಲೊಡರಿಸಿದಾಗಳ್|| ೪೬
ಹಾಗಿದ್ದ ಕೋರೆಹಲ್ಲುಗಳೂ ಬೆಂಕಿಯ ಉಂಡೆಯ ಹಾಗಿದ್ದ ಕಣ್ಣೂ (ಇವುಗಳಿಂದ ಕೂಡಿ) ಯಮನ ಹಾಗಿರುವ ಸ್ವರೂಪವೂ ಇವುಗಳನ್ನು ತಾಳಿ ಥಳಥಳನೆ ಹೊಳೆಯುತ್ತಿರುವ ಕತ್ತಿಯಿಂದ ಕೂಡಿ ಹೊರಟು ಕೀರ್ತಿಗೆಯೆಂಬ ಒಂದು ಭಯಂಕರವಾದ ದೇವತೆಯು ‘ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆಕೊಡು’ ಎಂದು ತಾನು ಮಾಡಬೇಕಾದ ಕಾರ್ಯವನ್ನು ಬೇಡಿತು. ‘ಪಾಂಡವರೆಲ್ಲಿ ಹೊಕ್ಕಿದ್ದರೂ ಕೊಲ್ಲು’ ಎಂದು ಆಣತಿಯಿತ್ತನು. ಹಾಗೆಯೇ ಮಾಡುತ್ತೇನೆ ಎಂದು ಹೋಗಿ ಹುಡುಕಿ ಎಲ್ಲಿಯೂ ಕಾಣದೆ ಕೊಳದ ದಡದಲ್ಲಿ ಬಿದ್ದಿದ್ದ ನಾಲ್ವರನ್ನೂ ಕಂಡು ‘ಶಹಭಾಸ್ ಬದುಕಿದೆನು’ ಎಂದು ತಿನ್ನುವುದಕ್ಕೆ ಬಂದಾಗ ಅವರುಗಳಿಗೆ ಆ ಸ್ಥಿತಿಯನ್ನುಂಟು ಮಾಡಿದ ದೈವವು ಎದುರಿಗೆ ಕಾಣಿಸಿಕೊಂಡು ರೇಗಿ ಆರ್ಭಟಮಾಡುತ್ತ ಬಂದು ಹೇಳಿತು.
೪೩. ಎಲೆ ಪಿಶಾಚಿ, ತೊಲಗಿಹೋಗು. ಈ ನಾಲ್ಕು ಜನದ ಪ್ರಾಣವನ್ನು ಅವರ ಶರೀರದಿಂದ ತೊಲಗಿಸಿದ ಮೊದಲಿಂದ ಕಾದಿರುವ, ಮೀರುವುದಕ್ಕಾಗದ ಶಕ್ತಿಯುಳ್ಳವನೆನಿಸಿಕೊಂಡಿರುವ ನನಗೆ ನೀನು ಹೆಚ್ಚಿನವಳೇ? ವ|| ಹಾಗೆಲ್ಲಿಯೂ ‘ನೀನು ಉತ್ತಮಜಾತಿಯ ದೇವತೆಯೇ ಆಗಿದ್ದ ಪಕ್ಷದಲ್ಲಿ ನನ್ನ ಎಂಜಲನ್ನು ಹೇಗೆ ತಿನ್ನುತ್ತೀಯೆ’ ಎಂದಿತು. ಪಾಂಡವರು ಮೊದಲೇ ನಿನ್ನ ಅನರಾದವರು ಆದುದರಿಂದ ನಾನು ಮಾಡಬೇಕಾದ ಆ ಕಾರ್ಯವು ತಪ್ಪಿಹೋಯಿತು. ನಾನು ಈಗ ಯಾರನ್ನು ತಿನ್ನಲಿ ಹೇಳು ಎಂದು ಕೇಳಿದಳು. ನಿನ್ನನ್ನು ಯಾವನು ಅಕಾರಣವಾಗಿ ಹುಟ್ಟಿಸಿದನೋ ಅವನನ್ನೇ ತಿನ್ನು ಎಂದು ಹೇಳಲು ಹಾಗೆಯೇ ಮಾಡುತ್ತೇನೆ ಎಂದು ಹೋಗಿ
೪೪. ‘ಕನಕನ ಯಜ್ಞ ಕನಕನ ಬೆನ್ನನ್ನೇ ಅಂಟಿತು’ ಎಂಬ ಒಂದು ಮಾತು ಭೂಮಿಯಲ್ಲಿ ಪ್ರಖ್ಯಾತವಾಗುವ ಹಾಗೆ ದುರ್ಯೋಧನನ ಪುರೋಹಿತನಾದ ಆ ಕನಕಸ್ವಾಮಿಯನ್ನೇ ಕೋಪಿಸಿಕೊಂಡು ಕೀರ್ತಿಗೆ ತಿಂದುಹಾಕಿದಳು. ವ|| ಅಷ್ಟರಲ್ಲಿ ಧರ್ಮರಾಜನು ತನ್ನ ನಾಲ್ಕು ತಮ್ಮಂದಿರೂ ಬರದೆ ಸಾವಕಾಶಮಾಡಿದುದಕ್ಕಾಗಿ ಚಿಂತಾಕ್ರಾಂತನಾಗಿ
೪೫. ಹೋದವರನ್ನು ಒಡಗೊಂಡು ಬರಲು ಹೋದವರೂ ಅವರು ಹಿಂದೆಯೇ ಹೊರಟುಹೋದರು. ಅವರು ತಡೆಯಲು ಹೋದವರಲ್ಲ (ಅವರು ಹಾಗೆ ಸಾವಕಾಶಮಾಡುವವರಲ್ಲ) ಎಂಬ ಮನಸ್ಸಿನ ಖೇದದಿಂದ ತಾನೇ ಸರೋವರದ ಸಮೀಪಕ್ಕೆ ಬಂದನು. ವ|| ಹಾಗೆ ಸಮೀಪಿಸಿ ಬರಸಿಡಿಲು ಹೊಡೆಯಲು ಕೆಡೆದ ಸಾಲವೃಕ್ಷಗಳಂತಿದ್ದ ನಾಲ್ವರು ತಮ್ಮಂದಿರನ್ನೂ ನೋಡಿ ಆಶ್ಚರ್ಯಪಟ್ಟನು.
೪೬. ಯಾರಿಂದ ಇವರಿಗಿದಾಯಿತು ಎಂಬುದನ್ನು ಅನಂತರ ವಿಚಾರಿಸುತ್ತೇನೆ. ಆದರೆ ಏನಾಯ್ತು ಎಂದು ಕಮಲದ ಧೂಳೆಂಬ
ಮರುಳಾಗದೆನ್ನ ನುಡಿಗು
ತ್ತರಮಂ ಮುನ್ನಿತ್ತು ಕುಡಿಯೆ ಕಜ್ಜಂ ನಿನಗು|
ತ್ತರಿಸುಗುಮಂತಲ್ಲದಿವಂ
ದಿರಂತೆ ನೀನುಂತೆ ಮೂರ್ಖನಾಗದಿರರಸಾ|| ೪೬
ವ|| ಎಂಬುದುಮೆನ್ನ ತಮ್ಮಂದಿರ್ಗಿನಿತಂ ಮಾಡಿದ ದಿವ್ಯವಿ ದಿವ್ಯಮಕ್ಕುಮೆಂದದಱ ಬೆಸಗೊಂಡುದರ್ಕೆಲ್ಲಂ ಮಱುಮಾತುಗುಡುವುದುಂ ಮೆಚ್ಚಿ ತನ್ನ ಸ್ವರೂಪಮಂ ತೋಱ-
ಚಂ|| ಕನಕನ ಬೇಳ್ವೆಯಿಂದೊಗೆದ ಕೀರ್ತಿಗೆಯಿಂ ನಿನಗಪ್ಪಪಾಯಮಂ
ನೆನೆದು ಮದೇಭರೂಪಮನೆ ತೋಱ ನಿಜಾಶ್ರಮದಿಂದಗಲ್ಚಿ ನಿ|
ನ್ನನುಜರನೀಯುಪಾಯದೊಳೆ ಕೀರ್ತಿಗೆಯೊಡ್ಡಿಸೆ ಕಾದೆನಾಂ ಕೃತಾಂ
ತನೆನೆನಗಮ್ಮ ನೀಂ ಮಗನೆಯಿನ್ ಪೆಱತೇಂ ನಿನಗುತ್ತರೋತ್ತರಂ|| ೪೮
ವ|| ಎಂದು ಮಱಕೆಂದಿದರನೆತ್ತುವಂತೆ ನಾಲ್ವರುಮನೆತ್ತಿ ತಾಂ ಮುನ್ನಂ ತಂದರಣಿಯಂ ಕೊಟ್ಟು ಕೃತಾಂತನಂತರ್ಧಾನಕ್ಕೆ ಸಂದಂ ಧರ್ಮತನೂಜಮನುಜರ್ ಸಹಿತಂ ನಿಜನಿವಾಸಕ್ಕೆ ವಂದರಣಿಯಂ ಪಾರ್ವರ್ಗೆ ಕೊಟ್ಟು ಕೆಲವು ದೆವಸಮಿರ್ದು ಧೌಮ್ಯ ಪುರೋಹಿತಂಬೆರಸಯ್ವರು ಮಾಳೋಚಿಸಿ-
ಚಂ|| ನೆದುವು ಪನ್ನೆರೞ್ಬರಿಸಮುಗ್ರವಿರೋಜನಕ್ಕೆ ಮಿೞ್ತುಗಳ್
ನೆವವೊಲಾಗದಿನ್ನಱದಿರಲ್ ನಮಗಬ್ದಮನೊಂದನಿರ್ದೊಡೇ|
ತಱ ಪಡೆಮಾತೊ ಮತ್ತಮಿರವೇೞ್ಪುದು ಪನ್ನೆರಡಬ್ದಮಂ ಮನಂ
ಮಱುಗೆ ಬನಂಗಳೊಳ್ ನುಡಿದ ನನ್ನಿಗೆ ಪೇೞಮಿದರ್ಕೆ ಕಜ್ಜಮಂ|| ೪೯
ವ|| ಎನೆ ಯಮನಂದನನಿಂತೆಂದಂ-
ಮ|| ಅಪವಾದಂ ಪೆಱತೊಂದುಮಿಲ್ಲ ನಮಗಿನ್ನುಂ ಪೊಕ್ಕಿರಲ್ಕಿಂಬು ಮ
ತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯನದಱಂದಜ್ಞಾತವಾಸಕ್ಕೆ ಚಿಂ|
ತಿಪೊಡಿನ್ನನ್ನವು ತಾಣಮಿಲ್ಲದಱನುಂತಾರ್ಗಪ್ಪೊಡಂ ಮಿಕ್ಕ ರೂ
ಪ ಪರಾವರ್ತನದಿಂ ವಿರಾಟಪುರಮಂ ಪೊಕ್ಕಿರ್ದದಂ ನೀಗೆಮೇ|| ೫೦
ವ|| ಎಂದು ಯುಷ್ಠಿರಂ ನಿಷ್ಠಿತಕಾರ್ಯಮನನನುಷ್ಠಿಸೆ ನಿಜ ಪರಿಜನಮೆಲ್ಲಮನೀಯೊಂದು ವರುಷಮುಂ ನಿಮ್ಮ ನಿಮ್ಮ ಬಲ್ಲಂದದೊಳಿರಿಮೆಂದು ಧೌಮ್ಯಸಮೇತಂ ಪೋಗಲ್ವೇೞ್ದು ತಮ್ಮಯ್ವರುಂ ಪಾಂಚಾಳಿವೆರಸು ಪೋದ ದೆಸೆಯನಾರುಮಱಯದಂತು ದ್ವೈತವನಮಂ ಪೊಱಮಟ್ಟು ಜಗುನೆಯಂ ಪಾಯ್ದು ಮೂಡಮೊಗದೆ ಪಯಣಂಬೋಗಿ ಮತ್ಸ್ಯದೇಶಮಂ ಪುಗುತಂದರದೆಂತಪ್ಪುದೆಂದೊಡೆ ಬಟ್ಟೆಯಿಂದ ಮುಚ್ಚಿದ ನೀರನ್ನು ಆ ರಾಜನು ಕುಡಿಯಲು ತೊಡಗಿದನು.
೪೭. ‘ಅವಿವೇಕಿ (ಹುಚ್ಚ)ಯಾಗದೆ ನನ್ನ ಮಾತಿಗೆ ಮೊದಲು ಉತ್ತರವನ್ನು ಕೊಟ್ಟು ನೀರು ಕುಡಿದರೆ ನಿನ್ನ ಕೆಲಸ ಜಯಪ್ರದವಾಗುತ್ತದೆ. ಹಾಗಲ್ಲದೆ ಎಲೈ ರಾಜನೇ ಇವರುಗಳ ಹಾಗೆ ನೀನೂ ಸುಮ್ಮನೆ ಮೂರ್ಖನಾಗಬೇಡ’ ವ|| ಎನ್ನಲು ನನ್ನ ತಮ್ಮಂದಿರಿಗೆ ಇಷ್ಟು ಮಾಡಿದೆ ದೇವತೆಯಿದೇ ಆಗಿರಬಹುದೆಂದು ತಿಳಿದು ಅದು ಹಾಕಿದ ಪ್ರಶ್ನೆಗಳಿಗೆಲ್ಲ ಪ್ರತ್ಯುತ್ತರವನ್ನಿತ್ತು ತೃಪ್ತಿಪಡಿಸಿದನು. ಸಂತೋಷಗೊಂಡ ದೈವವು ಹೀಗೆ ಹೇಳಿತು.
೪೮. ಕನಕನ ಯಜ್ಞದಿಂದ ಹುಟ್ಟಿದ ಕೀರ್ತಿಗೆಯೆಂಬ ದೇವತೆಯಿಂದ ನಿನಗಾಗಬಹುದಾದ ಅಪಾಯವನ್ನು ತಿಳಿದು ಅದನ್ನು ತಪ್ಪಿಸಬೇಕೆಂದು ಹೀಗೆ ಮಾಡಿದೆ. ಮದಗಜದ ಆಕಾರವನ್ನು ತೋರಿಸಿ ನಿಮ್ಮನ್ನು ಆಶ್ರಮದಿಂದ ಆಗಲಿಸಿ (ಬೇರೆ ಮಾಡಿ) ಈ ಉಪಾಯದಿಂದ ಕೀರ್ತಿಗೆಯೆಂಬ ಆ ದೇವತೆಗೆ ಪ್ರತೀಕಾರ ಮಾಡಿ ನಿನ್ನ ತಮ್ಮಂದಿರನ್ನು ರಕ್ಷಿಸಿದ ನಾನು ಯಮ. ನೀನು ನನ್ನ ಮಗನಾಗಿದ್ದೀಯಪ್ಪ. ಇದಕ್ಕಿಂತ ನಿನಗೆ ಬೇರೆಯಾದ ಅಭಿವೃದ್ಧಿ ಏನಿದೆ. ವ|| ಎಂಬುದಾಗಿ ಹೇಳಿ ಮರೆತು ಮಲಗಿದ್ದವರನ್ನು ಎಬ್ಬಿಸುವ ಹಾಗೆ ನಾಲ್ಕು ಜನರನ್ನೂ ಎಬ್ಬಿಸಿ ತಾನು ತಂದಿದ್ದ ಅರಣಿಯನ್ನು ಕೊಟ್ಟು ಯಮನು ಅದೃಶ್ಯನಾದನು. ಧರ್ಮರಾಜನೂ ತಮ್ಮಂದಿರೊಡನೆ ತನ್ನ ವಾಸಸ್ಥಳಕ್ಕೆ ಬಂದು ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟನು. ಕೆಲವು ದಿನಗಳಿದ್ದು ಧೌಮ್ಯನೆಂಬ ಪುರೋಹಿತನೊಡಗೂಡಿ ಅಯ್ದು ಜನರೂ ಆಲೋಚಿಸಿದರು.
೪೯. ಕ್ರೂರಿಗಳಾದ ಶತ್ರುಗಳಿಗೆ ಮೃತ್ಯುಪೂರ್ಣವಾಗುವ ಹಾಗೆ ಹನ್ನೆರಡು ವರ್ಷಗಳು ತುಂಬಿದುವು. ಇನ್ನು ಒಂದು ವರ್ಷ ನಾವು ಯಾರೂ ತಿಳಿಯದಂತೆ ಇರಬೇಕು. ಅದು ತಪ್ಪಿದರೆ ಆಡಿದ ಸತ್ಯವಾಕ್ಕಿಗೆ ಅನುಗುಣವಾಗಿ ಮನಸ್ಸಿಗೆ ದುಖವಾಗುವ ಹಾಗೆ ಇನ್ನೂ ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿರಬೇಕಾಗುತ್ತದೆ. ಇದಕ್ಕೆ ಮಾಡಬೇಕಾದ ಕಾರ್ಯ (ಉಪಾಯ)ವನ್ನು ತಿಳಿಸಿ. ವ|| ಎನ್ನಲು ಧರ್ಮರಾಯನು ಹೀಗೆಂದನು-
೫೦. ‘ನಮಗೆ ಇದುವರೆಗೆ ಯಾವ ಅಪವಾದವೂ ಇಲ್ಲ ; ಸುಖವಾಗಿರುವುದಕ್ಕೆ ಮತ್ಸ್ಯಪುರವು
ಕಂ|| ಇಂಚೆಯ ಪಸವಿನ ಬಱದ ಕ
ಳಿಂಚಿನ ಡಾವರದ ಬಾಧೆಯಿಲ್ಲದ ಪದದೊಳ್|
ಮುಂಚದೆ ಪಿಂಚದೆ ಬಳೆದು ವಿ
ರಿಂಚಿಯ ಕೆಯ್ಪಿಡಿವೊಲಾದುವಾ ನಾಡೂರ್ಗಳ್||| ೫೧
ವ|| ಆ ನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಂ ಬಂದು-
ಕಂ|| ಧ್ವನದಳಿಕುಳಾಕುಳೀಕೃತ
ವನಂಗಳಿಂದೆಸೆವ ಪದ್ಮಷಂಡಂಗಳ ಚೆ|
ಲ್ವಿನೊಳಂ ಕಣ್ಣಂ ಮನಮುಮ
ನನುವಿಸುವ ವಿರಾಟಪುರಮನೆಯ್ದಿದರವರ್ಗಳ್|| ೫೨
ವ|| ಅಂತೆಯ್ದೆವಂದು ತಮ್ಮ ದಿವ್ಯಾಯುಧಂಗಳನೆಲ್ಲಮನಾ ಪುರೋಪವನದ ಪಿತೃವನದ ಕೆಲದ ಶವಿವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಗಟ್ಟಿ ಕೆಲದ ಪೆಣಂಗಳೆಲ್ಲಮನವಱ ಮೇಲೊಟ್ಟಿ ಪರೆದೋರೊರ್ವರೊಂದೊಂದು ಬಟ್ಟೆಯೊಳ್ ಪೋಗಿ ಬೇವೇ ಪೊೞಲಂ ಪೊಕ್ಕು ಧರ್ಮಪುತ್ರಂ ಧರಾಮರವೇಷದೊಳ್ ವಿರಾಟನಂ ಕಂಡಾಶೀರ್ವಾದಮಂ ಕುಡೆ ವಿರಾಟಂ ನೀಮೆತ್ತಣಿಂ ಬಂದಿರೆಂಬುದುಮಾಂ ಧರ್ಮರಾಜನ ಸಮೀಪದೊಳಿರ್ಪೆವರಸಂಗೆ ಪೋೞ್ತು ಪೋಗದಾಗಳೆಮ್ಮೊಡನೆ ನೆತ್ತಮನಾಡುವನದಲ್ಲದೆಯುಂ-
ಕಂ|| ಕನವರಿಸೆ ನಾಲ್ಕು ವೇದಮು
ಮೆನಗೆ ಮುಖೋದ್ಗತಮದಲ್ಲದಾಱಂಗದ ಮಾ|
ತನಿತೆ ಗಡ ನೃಪತಿ ಬಂದೆಂ
ನಿನಗಾಳಾಗಲ್ಕೆ ಕಂಕಭಟ್ಟನೆನೆಂಬೆಂ|| ೫೩
ವ|| ಎಂಬುದುಂ ವಿರಾಟನಾತನ ಭದ್ರಾಕಾರಮುಮಂ ಮೃದುಮಧುರಗಂಭೀರ ವಾಣಿಯುಮಂ ಕಂಡು ಕರಂ ಮನದೆಗೊಂಡು ಕರೆಮೊಳ್ಳಿತೆಂದು ಕಂಕಭಟ್ಟನನಿರಿಸಿದನನನ್ನೆಗಂ ಭೀಮಸೇನನುಂ ಬೋನವೇಳಿಗೆಯಂ ಸಟ್ಟುಗಮುಮನೊರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು ನಿಂದನಂ ಕಂಡು ವಿರಾಟಂ ನಿನ್ನ ಬಿನ್ನಾಣಮೇನೆಂದು ಬೆಸಗೊಳೆ-
ಆಶ್ರಯವಾಗಿರುತ್ತದೆ. ನಮ್ಮ ಶತ್ರುವಾದ ಕೌರವನಿಗೆ ಮತ್ಸ್ಯರಾಜನು ಶತ್ರು ; ಆದುದರಿಂದ ಅಜ್ಞಾತವಾಸದ ವಿಷಯವಾಗಿ ಯೋಚಿಸುವುದಾದರೆ ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ಆದುದರಿಂದ ಯಾರಿಗೂ ತಿಳಿಯದಂತೆ ವೇಷವನ್ನು ಮರೆಸಿಕೊಂಡು ವಿರಾಟಪುರವನ್ನು ಪ್ರವೇಶಿಸಿ ಆ ಅಜ್ಞಾತವಾಸವನ್ನು ಕಳೆಯೋಣ.’ ವ|| ಎಂದು ಧರ್ಮರಾಯನು ಮಾಡಬೇಕಾದ ಕಾರ್ಯವನ್ನು ಸೂಚಿಸಿ ತನ್ನ ಪರಿವಾರದವರನ್ನೆಲ್ಲ ಈ ಒಂದು ವರ್ಷ ಕಾಲ ನಿಮಗೆ ತಿಳಿದ ರೀತಿಯಲ್ಲಿ ಇರಿ ಎಂದು ಧೌಮ್ಯನೊಡನೆ ಕಳುಹಿಸಿದನು. ತಾವೈದು ಜನರೂ ದ್ರೌಪದಿಯೊಡಗೂಡಿ ತಾವು ಹೋದ ದಿಕ್ಕನ್ನು ಯಾರೂ ತಿಳಿಯದಂತೆ ದ್ವೆ ತವನದಿಂದ ಹೊರಟು ಯಮುನಾ ನದಿಯನ್ನು ದಾಟಿ ಪೂರ್ವಾಭಿಮುಖವಾಗಿ ಪ್ರಯಾಣಮಾಡಿ ಮತ್ಸ್ಯದೇಶವನ್ನು ಪ್ರವೇಶಮಾಡಿದರು. ಅದು ಹೇಗಾಯಿತೆಂದರೆ-
೫೧. ಆ ನಾಡಿನ ಊರುಗಳು ಹಿಂಸೆ, ಕ್ಷಾಮ, ಬರ, ಮೋಸ, ಕ್ಷೋಭೆ ಇವುಗಳ ಉಪದ್ರವವಿಲ್ಲದ ಸ್ಥಿತಿಯಲ್ಲಿ ಯಾವ ಹೆಚ್ಚೂ ಕಡಿಮೆಯಿಲ್ಲದೆ ಏಕಪ್ರಕಾರವಾಗಿ ಅಭಿವೃದ್ಧಿಯಾಗಿ ಬ್ರಹ್ಮನ ಕೈಗನ್ನಡಿಯ ಹಾಗಿದ್ದುವು. ವ|| ಆ ದೇಶವನ್ನು ಅಸಾಧಾರಣವಾಗಿ ನೋಡುತ್ತ ಬಂದು, ೫೨. ಶಬ್ದಮಾಡುತ್ತಿರುವ ದುಂಬಿಗಳ ಸಮೂಹದಿಂದ ಆವರಿಸಲ್ಪಟ್ಟ ತೋಟಗಳಿಂದ ಪ್ರಕಾಶಿಸುವ, ಸರೋವರಗಳ ಸೌಂದರ್ಯದಿಂದ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ವಿರಾಟಪುರವನ್ನು ಅವರು ಬಂದು ಸೇರಿದರು. ವ|| ತಮ್ಮ ದಿವ್ಯಾಯುಧಗಳೆಲ್ಲವನ್ನೂ ಆ ಪಟ್ಟಣದ ಸಮೀಪದ ಸ್ಮಶಾನದ ಪಕ್ಕದಲ್ಲಿದ್ದ ಬನ್ನಿಮರದ ಮೇಲೆ ಮನುಷ್ಯಾಕೃತಿಯಲ್ಲಿ ನೇತುಹಾಕಿದರು. ಪಕ್ಕದಲ್ಲಿದ್ದ ಹೆಣಗಳೆಲ್ಲವನ್ನೂ ಅದರ ಮೇಲೆ ರಾಶಿ ಹಾಕಿದರು. ಬೇರೆಬೇರೆಯಾಗಿ ಒಬ್ಬೊಬ್ಬರೂ ಒಂದೊಂದು ದಾರಿಯಲ್ಲಿ ಪ್ರತ್ಯೇಕವಾಗಿ ಪುರಪ್ರವೇಶಮಾಡಿದರು. ಧರ್ಮರಾಯನು ಬ್ರಾಹ್ಮಣವೇಷದಲ್ಲಿ ವಿರಾಟನನ್ನು ನೋಡಿ ಆಶೀರ್ವದಿಸಿದನು. ವಿರಾಟನು ‘ನೀವೆಲ್ಲಿಂದ ಬಂದಿರಿ’ ಎನ್ನಲು ನಾವು ಧರ್ಮರಾಜನ ಸಮೀಪದಲ್ಲಿದ್ದವರು. ರಾಜನಿಗೆ ಹೊತ್ತುಹೋಗದಾಗ ಅವನು ನಮ್ಮೊಡನೆ ಪಗೆಯಾಡುತ್ತಿದ್ದನು. ಅದಲ್ಲದೆ ೫೩. ನಾನು ನಾಲ್ಕು ವೇದಗಳನ್ನು ಕನಸಿನಲ್ಲಿಯೂ ಹೇಳಬಲ್ಲೆ, ಅದಲ್ಲದೆ ಶಿಕ್ಷಾವ್ಯಾಕರಣವೇ ಮೊದಲಾದ ಆರು ವೇದಾಂಗಗಳೂ ಹಾಗೆಯೇ ಕಂಠಪಾಠವಾಗಿವೆ. ನಿನಗೆ ಆಳಾಗಿರುವುದಕ್ಕೆ ಬಂದಿದ್ದೇನೆ. ಕಂಕಭಟ್ಟನೆಂದು ನನ್ನ ಹೆಸರು ಎಂದನು. ವ|| ವಿರಾಟನು ಆತನ ಮಂಗಳಾಕಾರವನ್ನೂ ಮೃದುಮಧುರಗಂಭೀರವಾದ ಮಾತನ್ನೂ ನೋಡಿ ವಿಶೇಷವಾಗಿ ಸಂತೋಷಪಟ್ಟು ಬಹಳ ಒಳ್ಳೆಯದು ಎಂದು ಕಂಕಭಟ್ಟನನ್ನು ತನ್ನಲ್ಲಿ ಇರಿಸಿಕೊಂಡನು. ಅಷ್ಟರಲ್ಲಿ ಭೀಮಸೇನನು ಊಟದ ಪೆಟ್ಟಿಗೆಯನ್ನೂ ಸೌಟನ್ನೂ ಒಬ್ಬ ಆಳಿನ ಕಯ್ಯಲ್ಲಿ ತೆಗೆಸಿಕೊಂಡು
ಕಂ|| ಎನ್ನಟ್ಟಡುಗೆಯನುಂಡೊಡೆ
ಬಿನ್ನಣಮೇನರಸ ನರೆಗಳಾಗವು ಸವಿಯೊಳ್|
ನಿನ್ನಂ ಮೆಚ್ಚಿಪೆನೆಡಱದೊ
ಡೆನ್ನರೊಳಂ ಮಲ್ಲನೊರ್ವ ವಲ್ಲಲನೆಂಬೆಂ|| ೫೪
ವ|| ಎಂಬುದುಂ ನಿನ್ನನಾಳ್ವೆನೆಂದು ಬಾಣಸಿನ ಕರಣಕ್ಕೆ ನಿರೂಪಣಂಗೆಯ್ದನನ್ನೆಗಂ ನಕುಳನುಮಂಕವಣಿಯುಂ ಬಾಳುಂ ಬಾರುಂ ಚಮ್ಮಟಿಗೆಯುಮನೊರ್ವ ಕೀೞುಳಿಂ ಪಿಡಿಯಿಸಿಕೊಂಡು ಬಂದು ವಿರಾಟನಂ ಕಂಡೆಂತಪ್ಪ ದುಷ್ಟಾಶ್ವಂಗಳುಮನೇಱಲುಂ ತೀರ್ದಲುಂ ಬಲ್ಲೆನೆಂದು ಪೇೞುಳಾಗಿ ತಂತ್ರಪಾಳವೆಸರೊಳ್ ಮಾಸಾದಿಯಾಗಿರ್ದಂ ಸಹದೇವನುಂ ಗೋಪಾಳವೇಷದೊಳ್ ಬಂದು ಕಂಡವನ ಗೋಮಂಡಳಾಧ್ಯಕ್ಷನಾಗಿರ್ದಾಗಳ್-
ಮ|| ಎಳೆಯಂ ವಿಕ್ರಮದಿಂ ತರಲ್ ಮಹಿಧರಂ ಮುನ್ ಪಂದಿಯಾದಂತೆ ಪೋ
ದೆಳೆಯಂ ದಾಯಿಗರಂ ಪಡಲ್ವಡಿಸಿ ಕೊಂಡಾಳಲ್ಕಮಾದೇವದಿಂ|
ಮುಳಿಸಿಂ ರಂಭೆಯ ಕೊಟ್ಟ ಶಾಪಮನದಂ ನೀಗಲ್ಕಮಾಗಳ್ ಬೃಹಂ
ದಳೆಯಾದಂ ನರನಾತ್ಮಕಾರ್ಯವಶದಿಂ ಶುದ್ಧಾಂತದೊಳ್ ಮತ್ಸ್ಯನಾ|| ೫೫
ವ|| ಅಂತು ಬೃಹಂದಳೆಯಾಗಿ ಗಾಂಡೀವ ಜ್ಯಾಘಾತದೊಳಿಂದ್ರನೀಲಂಗಳನಡಸಿದಂತಿರ್ದೆರಡುಂ ಮುಂಗೆಯ್ಗಳ ಕರ್ಪಂ ತೀವೆ ತೊಟ್ಟ ಬಳೆಗಳ್ ಮಱಸೆ ವಿರಾಟನ ಮಗಳಪ್ಪುತ್ತರೆ ಮೊದಲಾಗೆ ಪಲವುಂ ಪಾತ್ರಂಗಳನಾಡಿಸುತ್ತುಂ ಮಹಾ ಭಾರವತಾರದೊಳಪ್ಪ ಸಂಗ್ರಾಮರಂಗದೊಳರಾತಿನಾಯಕರ ಕಬಂಧಪಾತ್ರಂಗಳನಾಡಿಸುವುದನುದಾಹರಿಸುವಂತಿರ್ದಂ ಪಾಂಚಾಳ ರಾಜತನೂಜೆಯುಂ ರೂಪುಗರೆದು ಸೈರಂವೇಷದೊಳ್ ಪೋಗಿ ವಿರಾಟನ ಮಹಾದೇವಿ ಸುದೇಷ್ಣೆಯಂ ಕಾಣ್ಬುದುಮಾಕೆಯುಂ ಕೃಷ್ಣೆಯ ರೂಪಂ ಕಂಡು ಚೋದ್ಯಂಬಟ್ಟು ಸಾಮಾನ್ಯೆಯಲ್ಲೆ ನೀನಾರ್ಗೆನೆಂಬೆಯೆಂದು ಬೆಸಗೊಳೆ-
ಕಂ|| ನವ ಮೃಗಮದ ಪರಿಮಳಮುಮ
ನಿವು ಮಸುಳಿಪುವೆನಿಪ ವಿವಿಧ ಗಂಧಂಗಳನಾ|
ನವಯವದೊಳ್ ಮಾಡುವ ಘ
ಟ್ಟಿವಳ್ತಿಯೆಂ ದೇವಿ ಗಂಡವಳ್ತಿಯೆನಲ್ಲೆಂ|| ೫೬
ಬಂದು ನಿಂತನು. ಅವನನ್ನು ನೋಡಿ ನಿನ್ನ ವಿದ್ಯೆಯೇನು (ಕಸುಬು ವೃತ್ತಿ) ಎಂದು ಪ್ರಶ್ನೆಮಾಡಿದನು. ೫೪. ಅದಕ್ಕೆ ಭೀಮನು ನಾನು ಮಾಡಿದ ಅಡಿಗೆಯನ್ನು ಊಟಮಾಡಿದರೆ ತಲೆಯಲ್ಲಿ ನರೆಕೂದಲೇ ಬರುವುದಿಲ್ಲ. ಎಲೈ ರಾಜನೆ ವಿಚಾರಮಾಡುವುದೇನು ರುಚಿಯಲ್ಲಿ ನಾನು ನಿಮ್ಮನ್ನು ತೃಪ್ತಿಪಡಿಸಬಲ್ಲೆ, ಪ್ರತಿಭಟಿಸಿ ಬಂದರೆ ಎಂತಹವರನ್ನೂ ನೋಡಿಕೊಳ್ಳಲೂ ಸಮರ್ಥನಾದ ಜಟ್ಟಿ ನಾನು, ವಲಲನೆಂಬುದು ನನ್ನ ಹೆಸರು ಎಂದನು. ವ|| ನಿನ್ನನ್ನಾಳುತ್ತೇನೆ ಎಂದು ವಿರಾಟನು ಅವನನ್ನು ಅಡುಗೆಯ ಕಾರ್ಯಕ್ಕೆ ನೇಮಿಸಿಕೊಂಡನು. ಅಷ್ಟರಲ್ಲಿ ನಕುಳನು ಕುದುರೆಯ ಮೇಲಿನ ತಡಿಯನ್ನೂ ಕತ್ತಿಯನ್ನೂ ಚರ್ಮದ ಲಗಾಮನ್ನೂ ಚಾವಟಿಯನ್ನೂ ಒಬ್ಬ ಸೇವಕನಿಂದ ತೆಗೆಯಿಸಿಕೊಂಡು ಬಂದು ವಿರಾಟನನ್ನು ಕುರಿತು ಎಂತಹ ದುಷ್ಟಕುದುರೆಯನ್ನಾದರೂ ಹತ್ತಲು ತಿದ್ದಲೂ ಬಲ್ಲೆ ಎಂದು ಹೇಳಿ ಆತನಲ್ಲಿ ಆಳಾಗಿ ಸೇರಿ ತಂತ್ರಪಾಲನೆಂಬ ಹೆಸರಿನಿಂದ ಕುದುರೆಯ ರಕ್ಷಕನಾಗಿದ್ದನು. ಸಹದೇವನೂ ದನಕಾಯುವವನ ವೇಷದಲ್ಲಿ ಬಂದು ಕಂಡು ಅವನ ಗೋಸಮೂಹದ ಮುಖ್ಯಾಕಾರಿಯಾಗಿದ್ದನು. ಆಗ ೫೫. ಪೌರುಷದಿಂದ ವಿಷ್ಣುವು ಭೂಮಿಯನ್ನು ತರಲು ಹಿಂದೆ ಹಂದಿಯಾದಂತೆ (ವರಾಹವತಾರವನ್ನೆತ್ತಿದ ಹಾಗೆ) ತಮಗೆ ನಷ್ಟವಾದ ರಾಜ್ಯವನ್ನು ದಾಯಾದಿಗಳಿಂದ ಬಿಡಿಸಿಕೊಂಡು ಆಳುವುಕ್ಕೂ ತನಗುಂಟಾದ ಅವಮಾನದಿಂದಲೂ ಕೋಪದಿಂದಲೂ ರಂಭೆಯು ಕೊಟ್ಟ ಶಾಪವನ್ನು ನೀಗುವುದಕ್ಕೂ ಆಗ ಅರ್ಜುನನು ತನ್ನ ಕಾರ್ಯಸಾಧನೆಗಾಗಿ ವಿರಾಟನ ಅಂತಪುರದಲ್ಲಿ ಬೃಹಂದಳೆಯೆಂಬ ನಪುಂಸಕನಾದನು. ವ|| ಗಾಂಡೀವದ ಹೆದೆಯ ಪೆಟ್ಟಿನಿಂದಾದ ಇಂದ್ರನೀಲಮಣಿಗಳನ್ನು ಕೆತ್ತಿಸಿದ ಹಾಗಿದ್ದ ಎರಡು ಮುಂಗೈಗಳ ಕಪ್ಪನ್ನು ಪೂರ್ಣವಾಗಿ ತೊಟ್ಟುಕೊಂಡಿದ್ದ ಬಳೆಗಳು ಮರೆಮಾಡಿದುವು. ವಿರಾಟನ ಮಗಳಾದ ಉತ್ತರೆಯೇ ಮೊದಲಾದ ಅನೇಕ ಪಾತ್ರಗಳನ್ನು ನಾಟ್ಯವಾಡಿಸುವ ಕಾರ್ಯವು ಅವನದಾಯಿತು. ಮುಂದು ಅದು ಬರುವ ಮಹಾಭಾರತ ಯುದ್ಧಭೂಮಿಯಲ್ಲಿ ಶತ್ರುನಾಯಕರ ರುಂಡಗಳೆಂಬ ಪಾತ್ರಗಳನ್ನು ಈ ರೀತಿಯಲ್ಲಿ ಆಡಿ ತೋರಿಸುತ್ತೇನೆ ಎನ್ನುವಂತಿದ್ದಿತು. ದ್ರೌಪದಿಯೂ ಆಕಾರವನ್ನು ಮರೆಸಿಕೊಂಡು ಸೈರಂವೇಷದಿಂದ ಹೋಗಿ ವಿರಾಟನ ಮಹಾರಾಣಿಯಾದ ಸುದೇಷ್ಣೆಯನ್ನು ಕಂಡಳು. ಅವಳು ದ್ರೌಪದಿಯ ರೂಪವನ್ನು ನೋಡಿ ಆಶ್ಚರ್ಯಪಟ್ಟು ‘ನೀನು ಸಾಮಾನ್ಯಳಲ್ಲ, ನೀನು ಯಾರವಳು? ನಿನ್ನ ಹೆಸರೇನು?’ ಎಂದು ಪ್ರಶ್ನೆಮಾಡಿದಳು- ೫೬. ಹೊಸದಾದ ಕಸ್ತೂರಿಯ ವಾಸನೆಯನ್ನೂ ಮೀರಿಸುವ ನಾನಾಬಗೆಯಾದ ಗಂಧಗಳನ್ನು ಶ್ರಮವಿಲ್ಲದೆ ಅರೆದು
ಪೆಸರೊಳ್ ಸೈರಂಯೆನೞ
ವೆಸನದ ದೆಸೆಯಱಯೆನೆನಗೆ ಗಂಧರ್ವರ ಕಾ|
ಪಸದಳಮುಂಟಿರಿಸುವೊಡಾಂ
ಬೆಸಕೆಯ್ವೆಂ ನಿನ್ನ ಬೆಸಸಿದಂದದೊಳಿರ್ಪೆಂ|| ೫೭
ವ|| ಎಂದು ವಿರಾಟನ ಮಹಾದೇವಿಗಾವಗಮಣುಗೆಯಾಗಿ ಪಾಂಚಾಳಿಯಿರ್ದಳಂತು ಪಾಂಡವರೀ ಮಾೞ್ಕೆಯಿಂದಿರ್ಪನ್ನೆಗಮೊಂದು ದೆವಸಂ ವಿರಾಟಂ ನೆಲದೊಳುಳ್ಳಮಲ್ಲರೆಲ್ಲರುಮಂಬರಿಸಿ ಮಲ್ಲಯುದ್ಧಮಂ ನೋಡಿ ಸುಯೋಧನನಮಲ್ಲಂ ವಿಷಖರ್ಪರನೆಂಬಂ ತನ್ನ ಮಲ್ಲರೆಲ್ಲರು ಮಂ ಕೊಂದೊಡೆ ಸಿಗ್ಗಾಗಿ ತನ್ನ ಬಾಣಸಿಗನಾಗಿರ್ದ ವಲ್ಲಲನಂ ಕರೆದು ಪೇೞುಗಳ್-
ಕಂ|| ಪರ್ಪರಿಕೆಗಿಡದೆ ಕಲಿ ವಿಷ
ಖರ್ಪರನಿದಿರಾಂತೊಡಾಂತು ವಲಲಂ ತಳಮಂ|
ಮಾರ್ಪೊಸೆದು ತಳ್ತು ಕಣ್ತಿರಿ
ತರ್ಪಿನೆಗಮವುಂಕಿ ಸಿಂಹನಾದದಿನಾರ್ದಂ|| ೫೮
ವ|| ಅಂತು ಸುಯೋಧನನ ಮಲ್ಲನಂ ಕೊಂದು ವಲಲಂ ವಿರಾಟನ ಮನೆಯೊಳ್ ತನ್ನ ಮಾತೆ ಮಾತಾಗಿರ್ದನನ್ನೆಗಂ ವಿರಾಟನ ಮೈದುನಂ ಸುದೇಷ್ಣೆಯೊಡವುಟ್ಟಿದನೊರ್ವಂ ಸಿಂಹಬಲಂ ಕೀಚಕನೆಂಬಂ ಸುಯೋಧನನ ದಂಡೆಲ್ಲಮನದೋಡಿಸಿ ಬಂದು ವಿರಾಟನಂ ಕಂಡು ತಮ್ಮಕ್ಕನಂ ಕಾಣಲ್ ಪೋದಾತನಾ ಮಹಾದೇವಿಯ ಕೆಲದೊಳಿರ್ದ-
ಚಂ|| ಸೊಗಯಿಸೆ ತೋಳ ಮೊತ್ತಮೊದಲೊಳ್ ಪೊಗರ್ವಟ್ಟೆಸೆವೊಂದು ನುಣ್ಪು ಸಾ
ವಗಿಸುವ ಮೇಲುದಂ ಮೊಲೆಗಳಲ್ಲಿಱಯುತ್ತಿರೆ ಪೊಣ್ಮೆ ಘರ್ಮ ಬಿಂ|
ದುಗಳಲರಂಬುವೋಲೆಳಸೆ ಪಾಟಲಲೋಲವಿಲೋಚನಂ ಮನಂ
ಬುಗೆ ನಳಿತೋಳ ಕೋಳೆಸೆಯೆ ಘಟ್ಟಿಮಗುೞ್ಚುವ ಘಟ್ಟಿವಳ್ತಿಯಂ|| ೫೯
ವ|| ಭೋಂಕನೆ ಕಂಡು ಕೀಚಕಂ ಕಾಮದೇವಂ ಮಾಡಿದ ಯಾಚಕನಂತೆ ಕರಮೆ ನಾಣ್ಗೆಟ್ಟು ಮನಂಗಾಪೞದಳಿಪಿ ನೋಡಿ ತನ್ನ ಮನದೊಳಿಂತೆಂದು ಬಗೆದಂ-
ಚಂ|| ಸುರಿಯೆ ಬೆಮರ್ ಕುರುಳ್ವಿಡಿದು ಮುತ್ತುಗಳಂ ಮಱದುಂಬಿ ಕಾಱುವಂ
ತಿರೆ ನಳಿತೋಳ ಬಳ್ವಳಿಕೆ ಕಣ್ಗೊಳೆ ಘಟ್ಟಿಮಗುೞ್ಚುವಂದಮ|
ಲ್ತರೆದು ಮಗುೞ್ಚುವಂದಮೆ ದಲೆನ್ನೆರ್ದೆಯಂ ಪೆಱತೇನದೆಂತು ಪೇೞು
ಪರಿಕಿಪೆನೀ ಮೃಗೋದ್ಭವದ ಕಂಪುಮನೀಕೆಯ ಸುಯ್ಯ ಕಂಪುಮಂ|| ೬೦
ಸಿದ್ಧಪಡಿಸಬಲ್ಲ ಗಟ್ಟಿವಳ್ತಿಯು ನಾನು. ದೇವಿ ಗಂಡನಿಲ್ಲದವಳಾಗಿದ್ದೇನೆ- ೫೭. ಸೈರಂಯೆಂಬುದು ನನ್ನ ಹೆಸರು. ನೀಚಕಾರ್ಯದ ಪರಿಚಯವಿಲ್ಲದವಳು, ನನಗೆ ಗಂಧರ್ವರ ರಕ್ಷಣೆ ಪೂರ್ಣವಾಗುಂಟು. ಒಪ್ಪುವುದಾದರೆ ದಾಸಿಯಾಗಿರುತ್ತೇನೆ. ಆಜ್ಞೆ ಮಾಡಿದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ವ|| ಎಂದು ದ್ರೌಪದಿಯು ವಿರಾಟನ ಮಹಾರಾಣಿಗೆ ಅತ್ಯಂತ ಪ್ರೀತಿಪಾತ್ರಳಾದ ದಾಸಿಯಾಗಿದ್ದಳು. ಪಾಂಡವರು ಈ ರೀತಿಯಿಂದಿರುವಾಗ ಒಂದುದಿನ ವಿರಾಟನು ಭೂಮಿಯಲ್ಲಿರುವ ಜಟ್ಟಿಗಳೆಲ್ಲರನ್ನೂ ಬರಮಾಡಿ ಜಟ್ಟಿಕಾಳಗವನ್ನು ಆಡಿಸಿ ನೋಡಿದನು. ದುರ್ಯೋಧನನ ಜಟ್ಟಿಯಾದ ವಿಷಖರ್ಪರನೆಂಬುವನು ತನ್ನ ಜಟ್ಟಿಗಳೆಲ್ಲರನ್ನೂ ಕೊಲ್ಲಲು ಅವಮಾನಿತನಾಗಿ ತನ್ನ ಅಡುಗೆಯವನಾಗಿದ್ದ ವಲಲನನ್ನು ಕರೆದು ಕಾದಲು ಹೇಳಿದನು. ೫೮. ವಿಷಖರ್ಪರನು ತನ್ನ ವಿಶೇಷ ಕ್ರೌರ್ಯದಿಂದ ಪ್ರತಿಭಟಿಸಲು ವಲಲನು ಭೂಮಿಯನ್ನು ಕಯ್ಯಿಂದ ಉಜ್ಜಿ, ಎದುರಿಸಿ ಕಣ್ಣುಗಳು ತಿರುಗುವ ಹಾಗೆ ಅವುಕಿಕೊಂಡು ಸಿಂಹಧ್ವನಿಯಿಂದ ಘರ್ಜಿಸಿದನು. ವ|| ದುರ್ಯೋಧನನ ಜಟ್ಟಿಯನ್ನು ಕೊಂದು ವಲಲನು ವಿರಾಟನ ಮನೆಯಲ್ಲಿ ತನ್ನ ಮಾತೇ ಮಾತಾಗಿದ್ದನು. ಅಷ್ಟರಲ್ಲಿ ವಿರಾಟನ ಮೈದುನನೂ ಸುದೇಷ್ಣೆಯ ಸೋದರನೂ ಸಿಂಹಬಲವುಳ್ಳವನೂ ಆದ ಕೀಚಕನೆಂಬುವನು ದುರ್ಯೋಧನನ ಸೈನ್ಯವನ್ನೆಲ್ಲ ಶೀಘ್ರವಾಗಿ ಓಡಿಸಿ ಬಂದು ವಿರಾಟನನ್ನು ನೋಡಿಯಾದ ಮೇಲೆ ತಮ್ಮಕ್ಕನನ್ನು ನೋಡಲು ಹೋದನು. ಆ ಮಹಾರಾಣಿಯ ಸಮೀಪದಲ್ಲಿದ್ದ ದ್ರೌಪದಿಯನ್ನು ಕಂಡನು.
೫೯. ಅವಳ ತೋಳ ನುಣುಪು ವಿಶೇಷಕಾಂತಿಯಿಂದ ಸೊಗಸಾಗಿತ್ತು. ನೋಟಕರಿಗೆ ಸಾವನ್ನುಂಟುಮಾಡುತ್ತಿರುವ ಅವಳ ಮೊಲೆಗಳು ಮೇಲುಹೊದಿಕೆಯನ್ನು ಅಲುಗಾಡಿಸುತ್ತಿದ್ದುವು. ಬೆವರಹನಿಗಳು ಹೊರಹೊಮ್ಮುತ್ತಿದ್ದುವು. ನಸುಗೆಂಪಾದ ಕಣ್ಣುಗಳು ಪುಷ್ಪಬಾಣದಂತೆ ಮನಸ್ಸನ್ನಾಕರ್ಷಿಸುತ್ತಿದ್ದುವು. ದುಂಡಾದ ತೋಳುಗಳು ಹಿಡಿತವು ಚೆಲುವಾಗಿರಲು ಗಂಧವನ್ನು ಅರೆಯುತ್ತಿದ್ದ ಸೈರಂಯನ್ನು ಕೀಚಕನು ನೋಡಿದನು ವ|| ಇದ್ದಕ್ಕಿದ್ದ ಹಾಗೆ ಅವಳನ್ನು ನೋಡಿ ಕೀಚಕನು ಕಾಮದೇವನು ಮಾಡಿದ ಭಿಕ್ಷುಕನಂತೆ ವಿಶೇಷವಾಗಿ ನಾಚಿಕೆಗೆಟ್ಟು ಮನಸ್ಸಿನ ಹಿಡಿತ ತಪ್ಪಿ ಆಸೆಯಿಂದ ನೋಡಿ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದನು- ೬೦. ಮರಿದುಂಬಿಗಳು ಮುತ್ತುಗಳನ್ನು
ಕಂ|| ಇದೆ ಮದನಭವನಮಿಂತಿದೆ
ಮದನಾಮೃತಮಿದುವೆ ಮದನಸಾಯಕಮಿದೆ ಪೋ|
ಮದನಮಹೋತ್ಸವ ಪದಮೆನಿ
ಸಿದುದು ಕಟ್ಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ|| ೬೧
ಉ|| ಮಾಸಿದ ರೂಪು ನೋಡರೆ ಮಾಸಿದ ಚಿತ್ರದ ಪೆಣ್ಣ ರೂಪುಮಂ
ಮಾಸಿಸೆ ನಾಡೆ ಮಾಸದಿಕೆಯಂ ಪಡೆದಪ್ಪುದು ಕಂಡ ಕಣ್ಗಳೊಳ್|
ಸೂಸುವ ಮಾೞ್ಕೆಯಿಂ ಪೊಱಗೆ ಪೊಣ್ಮುವುದಂದಮಿದೆಂತೊ ಕಾಯ್ದು ಕೈ
ವೀಸುವ ಕಾವನಂದಮಿವಳೇಂ ಕುಲನಾರಿಯೊ ವಾರನಾರಿಯೋ|| ೬೨
ಮಲ್ಲಿಕಾಮಾಲೆ|| ಆವಳಪ್ಪೊಡಮಕ್ಕೆ ಪೋ ತಲೆಯಿಂದೆ ಪೋದೊಡಮಿಂದೆ ಮಾ
ದೇವನಾರ್ತೆಡೆಗೋದೊಡಂ ಲಯಮಿಂದೆ ಬರ್ಪೊಡಮೆನ್ನುರಂ|
ತೀವಿ ತಳ್ತಿವಳೀ ಕುಚಂಗಳನೞ್ಕಱಂದಮರ್ದಪ್ಪಿ ಪೋ
ಗಾವುಪಾಯದೊಳಾದೊಡಂ ನೆರೆದಲ್ಲದಿನ್ನಿರೆನೀಕೆಯೊಳ್|| ೬೩
ವ|| ಎಂದು ಸೈರಂಯಂ ನೋಡಿ ಸೈರಿಸಲಾಱದೆ ಸಿಂಹಬಲನಂತನಂಗಮತ್ತಮಾತಂಗ ಕೋಳಾಹಳೀಕೃತಾಂತರಂಗನಾಗಿ ತಮ್ಮಕ್ಕನನೀಕೆಯಾರ್ಗೆಂದು ಬೆಸಗೊಂಡೊಡಾತನ ಸೋಲ್ತ ಕಣ್ಣಱದೀಕೆ ಸಾಮಾನ್ಯವನಿತೆಯಲ್ಲಿವಳ್ ಗಂಧರ್ವವನಿತೆಯೆನ್ನೊಳಾದ ಮಚ್ಚುಂ ಮೋಹಮುಂ ಕಾರಣಮಾಗಿರ್ಪಳೆಂಬುದುಮಾ ಮಾತಿನೊಳ್ ಬೇಟಮಗ್ಗಳಿಸೆ ನಿಜನಿವಾಸಕ್ಕೆ ಬಂದಕ್ಕನೆನಗೆ ತನ್ನ ಘಟ್ಟಿವಳ್ತಿಯಂ ಕೆಯ್ಯೊಳಪೂರ್ವ ವಿಲೇಪನಂಗಳನಟ್ಟುವುದೆಂದಟ್ಟುವುದುಂ ತಮ್ಮನುಪರೋಧಕ್ಕಾಱದೆ ಸೈರಂಯಂ ಪೋಗಲ್ವೇೞ್ವುದುಮಾಕೆಯವನ ಮನದ ಪೞುವಗೆಯನಱಯದಂತೆಗೆಯ್ವೆನೆಂದು-
ಚಂ|| ಸ್ಮರನರಲಂಬು ಕೈಬರ್ದುಕಿ ಬರ್ಪವೊಲೊಯ್ಯನೆ ಬಂದು ನಿಂದ ಸುಂ
ದರಿಯನೊಱಲ್ದು ಸಿಂಹಬಳನಂತಿರು ಮಾಸಿದೆಯಾದೆ ಮೇಣುಡಲ್|
ತರಿಪೆನೆ ತಂಬುಲಂಬಿಡಿ ಮನೋಜಶಿಖಾಳಿಗಳೞ್ವೆ ಮುನ್ನಮೆ
ನ್ನುರಿವೆರ್ದೆ ಕಂಡು ನಿನ್ನನಿನಿಸಾಱದುದಂಬುಜಲೋಲಲೋಚನೇ|| ೬೪
ಕಾರುವ ಹಾಗೆ ಬೆವರು ಮುಂಗುರುಳುಗಳನ್ನು ಅನುಸರಿಸಿ ಸುರಿಯುತ್ತಿವೆ. ದುಂಡಾದ ತೋಳಿನ ಸೌಂದರ್ಯವು ಆಕರ್ಷಕವಾಗಿದೆ. ಇದು ಗಂಧವನ್ನು ತೇಯುವ ರೀತಿಯಲ್ಲ ; ನನ್ನ ಎದೆಯನ್ನು ಅರೆದು ಹಿಂದುಮುಂದು ಮಾಡುವ ರೀತಿಯೇ ಸರಿ. ನಾನು ಈ ಕಸ್ತೂರಿಯ ವಾಸನೆಯನ್ನೂ ಈಕೆಯ ಉಸುರಿನ ಗಾಳಿಯ ವಾಸನೆಯನ್ನೂ ಹೇಗೆ ರಕ್ಷಿಸಲಿ? ೬೧. ಈ ಚಂಚಲಾಕ್ಷಿಯ ಕಡೆಗಣ್ಣಿನ ನೋಟವೇ ಮದನಭವನ, ಇದೇ ಮದನಾಮೃತ, ಇದೇ ಮದನಬಾಣ. ಇದೇ ಮದನಮಹೋತ್ಸವದ ಸ್ಥಾನ ಎನಿಸಿತು.
೬೨. ನೋಡುವುದಾದರೆ ಇವಳ ಮಲಿನವಾದ ರೂಪವು ಅರ್ಧಕೊಳೆಯಾದ ಚಿತ್ರದಲ್ಲಿರುವ ಸುಂದರವಾದ ಹೆಣ್ಣಿನ ರೂಪವನ್ನು ಮಸುಳಿಸುವಂತಿದೆ. ಇವಳ ಕಣ್ಣಿನಲ್ಲಿ ಹೊರಸೂಸುವ ಸೌಂದರ್ಯವನ್ನು ನೋಡಿದರೆ ಕೆರಳಿ ಕೈಬೀಸಿ ಮನ್ಮಥನೇ ವಿಲಾಸದಿಂದ ಜಗಳಕ್ಕೆ ಕೈಬೀಸುವಂತಿದೆ. ಇವಳೇನು ಕುಲಸ್ತ್ರೀಯೋ ಅಥವಾ ವೇಶ್ಯಾಸ್ತ್ರೀಯೋ? ೬೩. ಯಾವಳಾದರೂ ಆಗಲಿ ಈ ದಿನವೇ ತಲೆಹೋದರೂ ಮಹಾದೇವನೇ ಸಮರ್ಥವಾಗಿ ಮಧ್ಯ ಪ್ರವೇಶಿಸಿದರೂ ಈ ದಿನವೇ ನಾಶವುಂಟಾದರೂ ನನ್ನ ಎದೆ ತುಂಬಿ ಸೇರಿದ ಇವಳ ಮೊಲೆಗಳನ್ನು ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಯಾವ ಉಪಾಯದಿಂದಲಾದರೂ ಈಕೆಯಲ್ಲಿ ಕೂಡಿಯಲ್ಲದೆ ಇರುವುದಿಲ್ಲ. ವ|| ಎಂದು ಸೈರಂಯರನ್ನು ನೋಡಿ ಸಹಿಸಲಾರದೆ ಸಿಂಹಬಲನು ಮನ್ಮಥನೆಂಬ ಮದ್ದಾನೆಯಿಂದ ಹಿಂಸಿಸಲ್ಪಟ್ಟ ಮನಸ್ಸುಳ್ಳವನಾಗಿ ತಮ್ಮ ಅಕ್ಕನನ್ನು ಈಕೆ ಯಾರವಳು ಎಂದು ಪ್ರಶ್ನೆಮಾಡಿದನು. ಸುದೇಷ್ಣೆಯು ಅವನ ಮೋಹಪರವಶವಾದ ಕಣ್ಣನ್ನು ತಿಳಿದು ಈಕೆಯು ಸಾಮಾನ್ಯಸ್ತ್ರೀಯಲ್ಲ, ಇವಳು ಗಂಧರ್ವಪತ್ನಿ ; ನನ್ನಲ್ಲಾದ ಮೆಚ್ಚಿಗೆಯಿಂದಲೂ ಪ್ರೀತಿಯಿಂದಲೂ ಇಲ್ಲಿ ಇದ್ದಾಳೆ ಎಂದಳು. ಆ ಮಾತಿನಿಂದ ಅವನಿಗೆ ಪ್ರೀತಿಯೂ ಮೋಹವೂ ಮತ್ತೂ ಅಕವಾಯಿತು. ತನ್ನ ಮನೆಗೆ ಬಂದು ಅಕ್ಕನನ್ನು ತನ್ನ ಗಂಧ ಅರೆಯುವವಳ ಕಯ್ಯಲ್ಲಿ ಅಪೂರ್ವವಾದ ಸುಗಂಧದ್ರವ್ಯವನ್ನು ಕಳುಹಿಸಿಕೊಡುವುದು ಎಂದು ಹೇಳಿ ಕಳುಹಿಸಿದನು. ತಮ್ಮನ ಒತ್ತಾಯಕ್ಕೆ ತಡೆಯಲಾರದೆ ಸೈರಂಯನ್ನು ಕಳುಹಿಸಲು ಅವಳು ಅವನ ಮನಸ್ಸಿನ ನೀಚಬುದ್ಧಿಯನ್ನು ತಿಳಿಯದೆ ಹಾಗೆಯೇ ಆಗಲೆಂದು ಅವನ ಅರಮನೆಗೆ ಹೋದಳು. ೬೪. ಮನ್ಮಥನ ಪುಷ್ಪಬಾಣವು ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ ನಿಧಾನವಾಗಿ ಬಂದು ನಿಂತ ಆ ಸುಂದರಿಯನ್ನು ಸಿಂಹಬಲನು ಪ್ರೀತಿಯಿಂದ ನೋಡಿ ಹೇ ಕಮಲಾಕ್ಷಿ ಹಾಗೆಯೇ ಇರು, ಮಲಿನವಾಗಿ ಬಿಟ್ಟಿದ್ದೀಯೆ, ಉಡುವುದಕ್ಕೆ ವಸ್ತ್ರವನ್ನು ತರಿಸಲೇ?
ಕಂ|| ಪರೆದ ಕುರುಳಲುಗೆ ಘಟ್ಟಿಯ
ನರೆಯುತ್ತುಂ ನಾಣ್ಚಿ ತೆಗೆದು ನೋೞ್ಪುದುಮೆನ್ನಂ|
ಸ್ಮರ ಕುಳಿಕಾಗ್ನಿಯೆ ಕೊಂಡಂ
ತಿರೆ ಕೊಂಡುದು ನೋಡ ನಿನ್ನ ನೋಡಿದ ನೋಟಂ|| ೬೫
ಮ|| ಮದನಾಸ್ತ್ರಂ ಕರ ಸಾಣೆಗಾಣಿಸಿದುದೆಂಬಂತಾಗೆ ನಿನ್ನೊಂದು ಕಂ
ದಿದ ಮೆಯ್ಯೆನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞುಳ್ದು ರಾ|
ಗದಿನೆನ್ನೊಳ್ ಸುಕಮಿರ್ಪುದೆನ್ನ ನುಡಿಯಂ ನೀಂ ಕೇಳ್ದುಮೊಂದಂಚೆಯಂ
ಪೊದೆಯೊಂದಂಚೆಯನುಟ್ಟ ನಿನ್ನಿರವಿದೇನಂಭೋಜಪತ್ರೇಕ್ಷಣೇ|| ೬೬
ಕಂ|| ಬಿಗಿದೊಲೆದ ನಿನ್ನ ಮೊಲೆಗಳ
ಮೃಗಮದದ ಪುಳಿಂಚುಗಳ್ ಪಗಿಲ್ತಿರಲೆಡೆಯಾ|
ದಗಲುರಮನೆನಗೆ ಪಡೆದಜ
ನೊಗಸುಗಮಲ್ತೆಲಗೆ ನಿನ್ನನೆನಗೆಯೆ ಪಡೆದಂ|| ೬೭
ಕಂ|| ಎನಗರಸಿಯಾಣೆ ನಿನ್ನೊಡ
ನೆನಗೇಗೆಟ್ಟಪುದಿದೆಂದು ಡಾಡಲ್ ಕೆ|
ಮ್ಮನೆ ನುಡಿದೊಡೆನ್ನ ಕಣ್ಗಂ
ಮನಕ್ಕೆ ವಂದಿರ್ದ ನಿನ್ನೊಳೆನಗೆರಡುಂಟೇ|| ೬೮
ಬಾಯೞದೆನಿತೆರೆದೊಡಮಾ
ಹಾಯೆನ್ನಯ ಕರಮೆ ಮಱುಗೆ ಮೆಯ್ವಿಡಿದುರಿವೆ|
ನ್ನೀ ಯೆರ್ದೆಯನಾಱಸಲ್ ನೀಂ
ಬಾಯೊಳ್ದಂಬುಲಮನಪ್ಪೊಡಂ ದಯೆಗೆಯ್ವೋ|| ೬೯
ವ|| ಎಂದು ಮತ್ತೆಮೆನಿತಾನುಂ ತೆಱದ ಲಲ್ಲೆಯಿನಳಿಪಂ ತೋಱ ಬಾಯೞದು ತನ್ನ ನುಡಿಗಳಳಿಪಿಳಿವೋಗೆ ಸೈರಿಸಲಾಱದೆ ಪಿಡಿವುದುಂ ಪಾಂಚಾಲರಾಜತನೂಜೆಯಿಂತೆಂದಳ್-
ಮ|| ಸ್ರ|| ನುಡಿಯಲ್ಬೇಡೆನ್ನೊಳಿಂತಪ್ಪಳಿಪಿನ ನುಡಿಯಂ ನಿನ್ನ ಮಾತಿಂಗೆ ಚಿ ಮೆ
ಳ್ಪಡುವಂತಪ್ಪಾಕೆಯಲ್ಲೆಂ ಬಿಡು ಗಡ ಬಿಡದಂದೆನ್ನ ಗಂಧರ್ವರಿಂದಂ|
ಮಡಿವಯ್ ನೀನೆಂದೊಂಡಂತಪ್ಪೊಡೆ ಬಿಡೆನೆನಗಂ ಮೇಗುವೇೞ್ದಪ್ಪೆಯಿಲ್ಲಾ
ರ್ಪೊಡೆ ನಿನ್ನಂ ಕಾವ ಗಂಧರ್ವರೆ ಬಿಡಿಸುಗೆ ಪೋಗೆಂದು ಪೊಯ್ದಂ ದುರಾತ್ಮಂ|| ೭೦
ತಾಂಬೂಲವನ್ನು ಹಿಡಿ, ಮನ್ಮಥನ ಬಾಣಗಳ ಸಮೂಹವು ಈಗಾಗಲೇ ಸುಡುತ್ತಿರುವ ನನ್ನ ಎದೆಯು ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು. ೬೫. ಚದುರಿದ ನಿನ್ನ ಮುಂಗುರುಳು ಚಲಿಸುತ್ತಿರುವ ಗಂಧವನ್ನು ಅರೆಯುತ್ತ ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡಲು ನಿನ್ನ ಆ ನೋಡಿದ ನೋಟ ನನ್ನನ್ನು ಮನ್ಮಥನೆಂಬ ಸರ್ಪದ ವಿಷಾಗ್ಮಿಯೇ ಸುಟ್ಟ ಹಾಗೆ ಸುಟ್ಟಿತು ನೋಡು. ೬೬. ನಿನ್ನ ಕಂದಿಹೋಗಿರುವ ಶರೀರವನ್ನು ನನ್ನ ತೋಳಿನಲ್ಲಿ ಕೂಡಿಸಿ ಕಾಮಬಾಣವೇ ವಿಶೇಷವಾಗಿ ಸಾಣೆಯನ್ನು ಹೊಂದಿತು ಎನ್ನುವ ಹಾಗೆ ಸುಖಿಸು ನೀನು. ನನ್ನ ಈ ಐಶ್ವರ್ಯಲಕ್ಷ್ಮಿಯನ್ನು ಬರಸೆಳೆದು ನಿನ್ನ ಸೇವಕಿಯನ್ನಾಗಿ ಮಾಡಿಕೊ, ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು. ನನ್ನ ಮಾತನ್ನು ಕೇಳಿ ಒಂದು ವಸ್ತ್ರವನ್ನು ಹೊದೆದುಕೊ ಎಲೌ ಕಮಲದಳದಂತೆ ಕಣ್ಣುಳ್ಳವಳೇ ಏಕವಸ್ತ್ರವನ್ನುಟ್ಟಿರುವೆ ನಿನ್ನ ಈ ದುರವಸ್ಥೆಯಿದೇನು? ೬೭. ಬಿಗಿದುಕೊಂಡು ಗಟ್ಟಿಯಾಗಿ ಹೊರಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಗುಳ್ಳೆಗಳು ಅಂಟಿಕೊಳ್ಳಲು ಯೋಗ್ಯವಾಗಿರುವ ಹಾಗೆ ಬ್ರಹ್ಮನು ನನ್ನ ಎದೆಯನ್ನು ವಿಶಾಲವಾಗಿ ಸೃಷ್ಟಿಸಿದ್ದಾನೆ. ಇದು ಅತಿಶಯವಲ್ಲ ನಿನ್ನನ್ನು ಬ್ರಹ್ಮನು ನನಗಾಗಿಯೇ ನಿರ್ಮಿಸಿದ್ದಾನೆ- ೬೮. ರಾಣಿಯಾದ ಸುದೇಷ್ಣೆಯಾಣೆ. ಇಂದು ನಾನು ಪರಿಹಾಸ್ಯಕ್ಕಾಗಿ ನಿನ್ನೊಡನೆ ಮಾತನಾಡಿದರೆ ದೋಷವೇನು? ನನ್ನ ದೃಷ್ಟಿಗೂ ಮನಸ್ಸಿಗೂ ಒಪ್ಪಿಗೆಯಾಗಿರುವ ನಿನ್ನಲ್ಲಿ ನನಗೆ ಮೋಸವುಂಟೇ? ೬೯. ಬಾಯಿಸೋಲುವಷ್ಟು ಬೇಡಿದರೂ ಅಯ್ಯೋ ಎಂದು ಹೇಳಲಾರೆಯಲ್ಲ. ವಿಶೇಷವಾಗಿ ಸಶರೀರವಾಗಿ ಉರಿಯುತ್ತಿರುವ ನನ್ನ ಎದೆಯನ್ನು ಸಮಾಧಾನಮಾಡಲು ನೀನು ಬಾಯಲ್ಲಿ ತಂಬುಲವನ್ನಾದರೂ ಕೊಡಲೊಲ್ಲೆಯಾ? ವ|| ಎಂದು ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ ಗೋಗರೆದು ತನ್ನ ಮಾತುಗಳೂ ಆಸೆಯೂ ತಿರಸ್ಕೃತವಾಗಲು ಸಹಿಸಲಾರದೆ ಕೀಚಕನು ಅವಳನ್ನು ಹಿಡಿಕೊಳ್ಳಲು ಹೋದನು. ದ್ರೌಪದಿಯು ಹೀಗೆಂದಳು- ೭೦. ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ. ಚಿ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ.
ವ|| ಪೊಯ್ದೊಡೆ ಬಱುಬಂ ಪೊಯಿಲ್ವೆತ್ತೆಂತೇನುಮನಱಯದೆ ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡನಡುಗಿ ಕಾಯ್ಪಿನೊಳ್ ಪಿಡುಗಿ ತಳೋದರಿ ವೃಕೋದರನಲ್ಲಿಗೆ ವಂದು ಕ್ಟಟೇಕಾಂತದೊಳಿಂತೆಂದಳ್-
ಮ||ಸ್ರ|| ಪೆಱನಿಕ್ಕುಂಗೂೞೊಳಂ ಕೀೞಲೊಳಮಳವಿಗೆಟ್ಟಿರ್ಪ ನಿಮ್ಮಿರ್ಪುದರ್ಕಂ
ಮಱುಗುತ್ತಿರ್ಪಳ್ಗೆ ನೋಡಾದೞಲನೆನಗೆ ಕಣ್ಸೋಲದಿಂ ಕೀಚಕಂ ಬಂ|
ದುಱದೆನ್ನಂ ಕಾಡಿ ಕೈಗೆಲ್ದುಗಿದನವನದೊಂದುರ್ಕನೇವೇೞ್ವೆನಿನ್ನೀ
ನಱವಯ್ ಪೂಣ್ದೆನ್ನದೊಂದಂ ಪರಿಭವಮನಿದಂ ನೀಗು ನೀಂ ಭೀಮಸೇನಾ|| ೭೧
ವ|| ಎಂಬುದುಂ ಭೀಮಸೇನನೇವದೊಳ್ ಕಣ್ಗಾಣದಿವನೊರ್ವಂ ದುಶ್ಶಾಸನನ ನಂಟನಕ್ಕುಮಾದೊಡೇನಾಯ್ತು-
ಕಂ|| ಮುಳಿಸೆಂಬುದೆನಗೆ ಕೌರವ
ರೊಳೆ ಪಿರಿದಾ ಬಲಿದ ಬಯಕೆಯಂ ಮಾದುರದೊಳ್|
ಕಳೆವಂತನ್ನೆಗಮಿವನೊಳ್
ಕಳೆವೆಂ ನಿನ್ನೊಂದು ಮುಳಿಸನಬ್ಜದಳಾಕ್ಷೀ|| ೭೨
ವ|| ಎಂದು ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಮೆನ್ನಿಂ ಮುನ್ನಮೆ ಪೋಗಿರ್ಪುದಾನಲ್ಲಿಗೆ ವರ್ಪೆನೆಂದಾ ಪಾಣ್ಬನಂ ನಂಬೆ ನುಡಿದಾ ಪೋೞಗೆನ್ನನಲ್ಲಿಗೆ ವರಿಸವಂಗೆ ತಕ್ಕುದನಾನೆ ಬಲ್ಲೆನೆಂದು ನುಡಿದು ಕೞಪಲಾ ದ್ರೌಪದಿ ಸಂತಸಂಬಟ್ಟಂತೆಗೆಯ್ವೆನೆಂದು ಪೋಗಿ-
ಚಂ|| ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈ
ಸೆಯೆನಿಪಂಗರಾಗಮನಿಳೇಶ್ವರವಲ್ಲಭೆಯಟ್ಟಲುಯ್ದೊಡಾ|
ನಱಯದೆ ನಿನ್ನೆ ನೋಯಿಸಿದೆನಿಂದೆನಗೆಂಬುದನೆಂಬುದೆಂದು ಕಾ
ಲ್ಗೆಱಗಿದೊಡೊಳ್ಳಿತಾಗೆ ನಿನಗಿಂತಿನಿತೊಂದೊಲವುಳ್ಳೊಡೊಲ್ಲೆನೇ|| ೭೩
ಬಿಟ್ಟುಬಿಡು, ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುತ್ತೀಯೆ ಎಂದಳು. ಹಾಗಾದರೆ ಬಿಡುವುದಿಲ್ಲ. ನನಗೂ ವಂಚನೆಯ ಮಾತುಗಳನ್ನಾಡುತ್ತಿರವೆಯಲ್ಲ ; ಸಮರ್ಥರಾಗಿದ್ದರೆ ನಿನ್ನನ್ನು ರಕ್ಷಿಸುವ ಗಂಧರ್ವರೆ ಬಿಡಿಸಿಕೊಳ್ಳಲಿ ಹೋಗು ಎಂದು ದುರಾತ್ಮನಾದ ಅವನು ಅವಳನ್ನು ಹೊಡೆದನು. ವ|| ಹೊಡೆಯಲಾಗಿ ಸಹಾಯವಿಲ್ಲದವನು ಪೆಟ್ಟು ತಿಂದಹಾಗೆ ಏನು ಮಾಡಲೂ ತಿಳಿಯದೆ ಅವಮಾನವೆಂಬ ಗಾಳಿಯಿಂದ ದುಖಾಗ್ನಿಯು ಇಮ್ಮಡಿಸಲು ವಿಶೇಷವಾಗಿ ನಡುಗಿ ಕೋಪದಿಂದ ಸಿಡಿದು ದ್ರೌಪದಿಯು ಭೀಮನ ಬಳಿಗೆ ಬಂದು ಅತ್ಯಂತ ರಹಸ್ಯವಾಗಿ ಹೀಗೆಂದು ತನ್ನ ದುಖವನ್ನು ತೋಡಿಕೊಂಡಳು. ೭೧. ಪರಾನ್ನದಿಂದಲೂ ಪರರ ಸೇವಾವೃತ್ತಿಯಿಂದಲೂ ಕೀಳಂತಸ್ತಿನಲ್ಲಿ ದುಸ್ಥಿತಿಯಿಂದ ದುಖಪಡುತ್ತಿರುವ ನನಗೆ ಉಂಟಾದ ದುಖವನ್ನು ನೋಡು. ನನ್ನ ಮೇಲಿನ ಮೋಹದಿಂದ ಕೀಚಕನು ಬಂದು ವಿಶೇಷವಾಗಿ ನನ್ನನ್ನು ಹಿಂಸಿಸಿ ಕೈಮೀರಿ ಹೊಡೆದು ಬಿಸಾಡಿದನು. ಅವನ ಕೊಬ್ಬನ್ನು ಏನೆಂದು ಹೇಳಲಿ; ಭೀಮಸೇನಾ ನನ್ನನ್ನು ಆವರಿಸಿರುವ ಈ ಅವಮಾನವನ್ನು ನೀನು ತಿಳಿದಿದ್ದೀಯೆ. ಇದನ್ನು ನೀನು ಪರಿಹಾರಮಾಡು ಎಂದು ಬಾಯಳಿದಳು. ವ|| ಭೀಮಸೇನನು ಕೋಪದಲ್ಲಿ ಕುರುಡನಾಗಿರುವ ಇವನು ಮತ್ತೊಬ್ಬ ದುಶ್ಶಾಸನನ ನೆಂಟನಾಗಿರಬೇಕು, ಆದರೇನಾಯ್ತು? ೭೨. ನನಗೆ ಕೌರವರಲ್ಲಿ ವಿಶೇಷ ಆಗ್ರಹವುಂಟು. ಈ ಸಂಪೂರ್ಣವಾದ ಬಯಕೆಯನ್ನು ಮಹಾಯುದ್ಧದಲ್ಲಿ ಕಳೆಯುವವರೆಗೆ ನಿನಗಾಗಿ ಉಂಟಾದ ಕೋಪವನ್ನು ಎಲೌ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ. ವ|| ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ಮನೆಯನ್ನಾಗಿ ಮಾಡಿಕೊಂಡು ಸೂರ್ಯಾಸ್ತಮಾನವಾದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು, ನಾನು ಅಲ್ಲಿಗೆ ಬರುತ್ತೇನೆಂದು ಕಾಮುಕನನ್ನು ನಂಬಿಕೆ ಬರುವಂತೆ ಮಾತನಾಡಿ ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು. ಅವನಿಗೆ ತಕ್ಕುದನ್ನು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು. ದ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋದಲು. ೭೩. ಮಾರನೆಯ ದಿನ ಲತೆಯಂತೆ ಕೋಮಲವಾದ ಶರೀರವುಳ್ಳ ದ್ರೌಪದಿಯ ಕಯ್ಯಲ್ಲಿ ಮಹಾರಾಣಿಯಾದ ಸುದೇಷ್ಣೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು ಕೀಚಕನಲ್ಲಿಗೆ ಕಳುಹಿಸಿದಳು. ಕೀಚಕನು ದ್ರೌಪದಿಯನ್ನು ಕುರಿತು ‘ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋವನ್ನುಂಟುಮಾಡಿದೆ. ಈ ದಿನ ನನಗೆ ಹೇಳಬೇಕಾದುದನ್ನು ಹೇಳು’ ಎಂದು ಅವಳ ಕಾಲಿಗೆ ಬಿದ್ದನು. ‘ಒಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ?’ ವ|| ಎಂದು ನಂಬುವ ಹಾಗೆ ಮಾತನಾಡಿ ಹಿಂದೆಯೇ ಸೂಚಿತವಾಗಿದ್ದಂತೆ ವಿರಾಟನ ನಾಟಕಶಾಲೆಯನ್ನೇ ಗುರುತು ಹೇಳಿ ಸೂರ್ಯನು ಮುಳುಗುವ ವೇಳೆಯಲ್ಲಿ ಭೀಮಸೇನನಿಗೆ ಆ
ವ|| ಎಂದು ನಂಬೆ ನುಡಿದು ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತಕ್ರಮದೊಳ್ ಕುಱುಪುವೇೞ್ದು ಸೂರ್ಯಾಸ್ತಮಯಸಮಯದೊಳ್ ಭೀಮಸೇನಂಗೆ ತದ್ವ ತ್ತಕಮನಱಪಿದೊಡೆ ಬಾಹುಯುದ್ಧಸನ್ನದ್ಧನಾಗಿ ಕಲಿಗಂಟಿಕ್ಕಿ ಗಂಡುಡೆಯುಮನುಟ್ಟು ಮೇಲುದನಿೞಯೆ ಮುಸುಕಿಟ್ಟು ಪೋಗಿ ಗುಣಣೆಯ ಬಾಗಿಲೊಳ್ ದ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೊಳಪೊಕ್ಕು-
ಕಂ|| ಸಿಂಗಬಲನೆಂಬಗುರ್ವಿನ
ಸಿಂಗಮನಸಿಧೇನುಕಿರಣಕೇಸರಮಾಲಾ|
ಸಂಗತಮನಡಸಿ ನುಂಗಲ್
ಸಂಗತಬಲನೊಂದು ಶರಭಮಿರ್ಪಂತಿರ್ದಂ|| ೭೪
ವ|| ಅನ್ನೆಗಮಿತ್ತ ಕೀಚಕನೆಂಬ ಪಾಣ್ಬಂ-
ಉ|| ಅಚ್ಚಿಗದಿಂದೞಲ್ದಿನನಡಂಗದ ಬೇಸಳಂತೆ ನೀರೊಳಂ
ಕಿಚ್ಚಿನೊಳಂ ಪೊರಳ್ದು ಪಗಲಂದಿರುಳಾದೊಡೆ ರಾಜ್ಯಮಾದವೋಲ್|
ಪೆರ್ಚಿ ಮನಕ್ಕೆ ಬಿಚ್ಚತಿಕೆವಂದಿರೆ ನಾಟಕಶಾಲೆವೊಕ್ಕು ವಿ
ದ್ಯುಚ್ಚಪಳಂ ಮನೋಜಪರಿತಾಪದಿನೋಪಳೆಗತ್ತು ಭೀಮನಂ|| ೭೫
ಚಂ|| ನುಡಿಯದೆ ಕೆಮ್ಮನಿರ್ಪಿರವಿದಾವುದು ಕಾರಣಮಾವುದೀ ಮೊಗಂ
ಗುಡದಿರವಿಂತು ಕಣ್ಬಡಿಗರಪ್ಪರೆ ಮಾನಸರಪ್ಪರೆದು ಮೆ|
ಳ್ಪಡೆ ನುಡಿದೆಯ್ದೆವಂದು ಮುಸುಕಂ ತೆಗೆದಾಗಡೆ ಮೇಲೆವಾಯ್ದು ಬ
ಲ್ದಡಿಗನವುಂಕಿ ಬಲ್ದಡಿಗನಂ ಪಿಡಿದೊರ್ಮೆಯೆ ಮಲ್ಲಯುದ್ಧದೊಳ್|| ೭೬
ವ|| ಪೋರ್ದು ಮಲ್ಲಾಮಲ್ಲಿಯಾಗೆ ಪಲವುಂ ಗಾಯಗಳೊಳಾಯಂದಪ್ಪದೆ ತನಗವಂ ಸಮಾನಬಳನಪ್ಪುದಱಂ ಪಿರಿದು ಪೊೞ್ತು ಸಂತರ್ಪಿನಂ (?) ಪೋರ್ದು ಬಳೆಯ ಪೇಱನಾನೆ ಮೆಟ್ಟಿದಂತೆ ನುರ್ಚುನೂಱಪ್ಪಿನಮವುಂಕಿ ಪಿಡಿದಡಸಿಯಗುರ್ವು ಪರ್ವೆ ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಮಾಸೋಟಿಸಿ ತಾಟಿಸಿದಾಗಳ್-
ಕಂ|| ಬಿಸುನೆತ್ತರ್ ನೆಣನಡಗೆ
ಲ್ವು ಸಮಸ್ತಂ ಸುರಿಯೆ ಕೈಗೆ ತೊವಲುೞಯಲಗು|
ರ್ವಿಸಿದುದು ತೀವಿದ ಗುಳ್ಳೆಯ
ಪಸುಬೆಂಯಂ ಸೋರ್ಚಿದಂತೆ ತನು ಕೀಚಕನಾ|| ೭೭
ಸಮಾಚಾರವನ್ನು ತಿಳಿಸಿದಳು. ಭೀಮಸೇನನು ಮಲ್ಲಯುದ್ಧಮಾಡುವುದಕ್ಕೆ ಸಿದ್ಧನಾಗಿ ವೀರಗಚ್ಚೆಯನ್ನು ಹಾಕಿ ಗಂಡಸಿನ ಉಡುಪನ್ನು ಧರಿಸಿ ಮೇಲುಹೊದಿಕೆ(ಉತ್ತರೀಯ)ಯನ್ನು ಕೆಳಗಿನವರೆಗೆ ಮುಸುಕುಹಾಕಿಕೊಂಡು ಹೋಗಿ ದ್ರೌಪದಿಯನ್ನು ನಾಟ್ಯಶಾಲೆಯ ಬಾಗಿಲಿನಲ್ಲಿರಿಸಿ ವೀರಲಕ್ಷ್ಮಿಯ ವಿವಾಹಮಂಟಪವನ್ನು ಪ್ರವೇಶಮಾಡುವ ಹಾಗೆ ಒಳಹೊಕ್ಕನು. ೭೪. ಕತ್ತಿಯ ಕಿರಣಗಳೆಂಬ ಕೇಸರದ ಮಾಲೆಯಿಂದ ಕೂಡಿರುವ ಸಿಂಹಬಲ (ಕೀಚಕ)ನೆಂಬ ಸಿಂಹವನ್ನು ಹಿಡಿದು ನುಂಗಲು ಭೀಮನು ಶಕ್ತಿಯುತವಾದ ಶರಭಮೃಗವಿರುವ ಹಾಗಿದ್ದನು. ವ|| ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರಿಕೆಯ ದುಖದಿಂದ ವ್ಯಥೆಪಟ್ಟು ನೀರಿನಲ್ಲಿಯೂ ಬೆಂಕಿಯಲ್ಲಿಯೂ ಹೊರಳಿ ಹಗಲು ರಾತ್ರಿಯಾದ ತಕ್ಷಣ ರಾಜ್ಯಪ್ರಾಪ್ತಿಯಾದ ಹಾಗೆ ಉಬ್ಬಿ ಮನಸ್ಸಿಗೆ ಸಂತೋಷವುಂಟಾಗಿರಲು ನಾಟಕಶಾಲೆಯನ್ನು ಪ್ರವೇಶಿಸಿ ಮಿಂಚಿನಂತೆ ಚಪಲನಾದ ಕೀಚಕನು ಕಾಮತಾಪದಿಂದ ಭೀಮನನ್ನು ಪ್ರಿಯೆಯೆಂದೇ ಭಾವಿಸಿ ‘ಇದೇನಿದು ಪ್ರಿಯೆ. ೭೬. ಮಾತನಾಡದೆ ಸುಮ್ಮನೆ ಇರುವುದಕ್ಕೆ ಕಾರಣವೇನು? ಮುಖವನ್ನು ತೋರಿಸದೇ ಇರುವ ಈ ಸ್ಥಿತಿಯೇನು? ಮನುಷ್ಯರಾಗಿರುವವರು ಈ ಸ್ಥಿತಿಯಲ್ಲಿ ಮೋಸಗಾರರಾಗುವುದುಂಟೇ?’ ಎಂದು ಮೋಹದ ಮಾತುಗಳನ್ನಾಡಿ ಸಮೀಪಕ್ಕೆ ಬಂದು ಮುಸುಕನ್ನು ತೆಗೆದೊಡನೆಯೇ ಬಲುದಡಿಗನಾದ ಭೀಮನು ಬಲುದಡಿಗನಾದ ಕೀಚಕನನ್ನು ಅಮುಕಿ ಹಿಡಿದುಕೊಂಡು ಮಲ್ಲಯುದ್ಧದಲ್ಲಿ ಒಂದೇ ಸಮನಾಗಿ ವ|| ಹೋರಾಡಿ ದ್ವಂದ್ವಯುದ್ಧವಾಡಿ ಅನೇಕ ಪಟ್ಟುಗಳಲ್ಲಿ ಶಕ್ತಿಹೀನನಾಗದೆ ತನಗೆ ಅವನು ಸಮಾನಬಲನಾದುದರಿಂದ ಬಹಳಹೊತ್ತು ಸಮಾನನಾಗಿ ಕಾದಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ನುಚ್ಚುನೂರಾಗುವಂತೆ ಅಮುಕಿ ಹಿಡಿದು ನೆಗ್ಗಿ ಭಯವು ಹಬ್ಬುವ ಹಾಗೆ ಬೀಸಿ ನಾಟ್ಯಶಾಲೆಯ ಕಂಭಗಳಿಗೂ ಗೋಡೆಗಳಿಗೂ ಬಡಿದು ಆಸೋಟಿಸಿ ಬೀಸಿದನು. ೭೭. ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದು ಹೋಗಿ ಕೈಯಲ್ಲಿ ತೊಗಲು ಮಾತ್ರ ಉಳಿಯಿತು. (ಪದಾರ್ಥದಿಂದ) ತುಂಬಿ ಉಬ್ಬಿಕೊಂಡಿದ್ದ ಹಸುಬೆಯ ಚೀಲವನ್ನು
ಉ|| ಆಂ ಜಗದೊಳ್ ಬಲಸ್ಥನೆನಿದಿರ್ಚುವರಾರೆನಗೆಂದು ಸೋಲದಿಂ
ಕಂಜದಳಾಕ್ಷಿಯಂ ಪಿಡಿದನೀ ಖಳನೆಂಬೞಲಿಂದಮತ್ತಮಿ|
ತ್ತಂ ಜವನೊಕ್ಕಲಿಕ್ಕಿದೊಡೆ ನಾಟಕಶಾಲೆಯೊಳೆಯ್ದೆ ರಕ್ತ ಪು
ಷ್ಪಾಂಜಳಿಗೆಯ್ದ ಮಾೞ್ಕೆಯವೊಲಿರ್ದುವು ಸೂಸಿದ ಖಂಡದಿಂಡೆಗಳ್|| ೭೮
ವ|| ಅಂತು ಸಂ ಸಂಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನಶ್ರಮದೊಳೆ ಬಾಣಸಿನ ಮನೆಯೊಳ್ ಬಂದಿರ್ದನಿತ್ತ ದ್ರೌಪದಿಯುಮುಪಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು-
ಕಂ|| ಗಂಧರ್ವವನಿತೆಯೆಂ ನಿ
ರ್ಬಂಧಂ ಬೇಡಳಿಪೆ ಸಾವೆಯೆನೆ ಮಾಣದೆ ಕಾ|
ಮಾಂಧಂ ಕೀಚಕನಾಟಿಸಿ
ಗಂಧರ್ವರಿನೞದನೆನಗೆ ದೂಱಪ್ಪಿನೆಗಂ|| ೭೯
ವ|| ಎಂದು ಗಗ್ಗರಿಕೆಗೊಳ್ವ ಸರಮಂ ಕರ್ಣಪರಂಪರೆಯಂ ಕೇಳ್ದು ಸಿಂಹಬಲನೊಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್ ಕಣ್ಗಾಣದೆಲ್ಲವಿಡಾಮರ ಡಾಕಿನಿಯಿಂದಮಾದುದೀಕೆಗಮೆಮ್ಮಣ್ಣಂಗಮೊಂದೆ ವಿಯಂ ಮಾೞ್ತೆಮೆಂದಾಕೆಯಂ ಮುಂದಿಟ್ಟು ಪೋದರಿವನನಿರುಳೊಳೆ ಸಂಸ್ಕರಿಸಲ್ವೇೞ್ಕುಮೆಂದು ಕೊಂಡುಪೋಪಾಗಳಾ ಕಳಕಳಮಂ ಭೀಮಸೇನಂ ಕೇಳ್ದವಂದಿರೊಡನೆ ರೂಪುಗರೆದು ಪೊೞಲಂ ಪೊಱಮಟ್ಟು ಬಱಸಿಡಿಲೆಱಗುವಂತೆ ನಿಜಭುಜಶಿಖರಾಸಾಲನಂಗೆಯ್ದು-
ಮ|| ವನಿತಾಹೇತುವೆ ಕೇತುವಾಯ್ತು ನಿಮಗಂ ಗಾಂಧರ್ವರಿಂದಿಂದು ನಿ
ಮ್ಮ ನಿಷೇಕಂ ನೆರೆದತ್ತು ಸತ್ತಿರೆನುತ್ತುಂ ಪೊಕ್ಕಾರ್ದು ಕಾಳಾಂಬುದ|
ಧ್ವನಿಯಿಂ ಬಾೞೆಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ ಪೊ
ಯ್ದಿನಿಸುಂ ಮಾಣದೆ ನೀಚ ಕೀಚಕನಿಕಾಯ ಧ್ವಂಸನಂ ಮಾಡಿದಂ|| ೮೦
ವ|| ಅಂತಳವಿಗೞಯೆ ಕೊರ್ವಿದ ಕೀಚಕವನಮೆಲ್ಲಮೊಂದಿರುಳೊಳೆ ಸಾಹಸ ಭೀಮನುದ್ದಾಮಕೋಪದವದಹನಜ್ವಾಲಾ ಸಹಸ್ರಂಗಳಿನಳ್ಕಿಮೆಳ್ಕಿದಂತಪ್ಪುದುಂ ನೇಸಱು ಮೂಡಿದಾಗಳಾ ಪಡೆಮಾತನಿರ್ದರಿರ್ದಲ್ಲಿಯೆ ಕೇಳ್ದು-
ಅದರಲ್ಲಿದ್ದ ಪದಾರ್ಥವನ್ನು ಖಾಲಿಮಾಡಿದಂತೆ ಕೀಚಕನ ಶರೀರವು ಭಯಂಕರವಾಯಿತು. ೭೮. ಪ್ರಪಂಚದಲ್ಲೆಲ್ಲ ನಾನೇ ಬಲಿಷ್ಠನಾದವನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು ಮೋಹದಿಂದ ಕಮಲದಳನೇತ್ರೆಯಾದ ದ್ರೌಪದಿಯನ್ನು ಈ ದುಷ್ಟನು ಹಿಡಿದನು ಎಂಬ ದುಖದಿಂದ ಯಮನು ಆ ಕಡೆಯಿಂದ ಈ ಕಡೆಗೆ ಒಕ್ಕಣಮಾಡಲಾಗಿ ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು. ವ|| ಹಾಗೆ ಭೀಮನು ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ ಕೊಂದು ಯಮನಿಗೆ ಔತಣವವಿಕ್ಕಿ ನಿತ್ಯದ ಹಾಗೆ ಅಡುಗೆಮನೆಯನ್ನು ಸೇರಿದನು. ಈ ಕಡೆ ದ್ರೌಪದಿಯು ಉಪಾಯದಿಂದ ನಾಟ್ಯಶಾಲೆಯ ಮುಂದುಗಡೆ ನಿಂತುಕೊಂಡು- ೭೯. ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ; ದುರಾಸೆಪಟ್ಟರೆ ಸಾಯುತ್ತೀಯೆ ಎಂದರೂ ಬಿಡದೆ ಕಾಮಾಂಧನಾದ ಕೀಚಕನು ಆಶೆಪಟ್ಟು ನನಗೆ ಅಪಪ್ರಥೆ ಬರುವಹಾಗೆ ಗಂಧರ್ವರಿಂದ ನಾಶವಾದನು. ವ|| ಎಂದು ಆರ್ತಸ್ವರದಿಂದ ಕೂಗಿಕೊಳ್ಳುವ ಧ್ವನಿಯನ್ನು ಕಿವಿಯಿಂದ ಕಿವಿಗೆ ಕೇಳಿದ ಸಿಂಹಬಲನಾದ ಕೀಚಕನ ಸಹೋದರರಾದ ನೂರುಜನ ಕೀಚಕರು ಓಡಿಬಂದು ಕೋಪದಿಂದ ಕುರುಡರಾಗಿ ಎಲ್ಲವೂ ಈ ಪಿಶಾಚಿಯಿಂದಾಯಿತು, ಇವಳಿಗೂ ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು ಅವಳನ್ನು ಮುಂದಿರಿಸಿಕೊಂಡು ಹೋದರು. ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ ಆ ಗಲಭೆಯ ಶಬ್ದವನ್ನು ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು ಪಟ್ಟಣದಿಂದ ಹೊರಟು ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು ೮೦. ನಿಮಗೂ ಸ್ತ್ರೀನಿಮಿತ್ತವೇ (ವಿಪತ್ಕಾರಕ) ಕೇತುಗ್ರಹವಾಯಿತು. ಗಂಧರ್ವರಿಂದ ಈ ದಿನ ಒಸಗೆ (ಮಂಗಳಕಾರ್ಯ-ತಕ್ಕಶಾಸ್ತಿ) ಯಾಯಿತು. ಸತ್ತಿರಿ; ಎನ್ನುತ್ತ ಪ್ರವೇಶಮಾಡಿ ಆರ್ಭಟಿಸಿ ಕಾಲಮೇಘದ ಧ್ವನಿಯಿಂದ ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ಹೊಡೆದು ಸ್ವಲ್ಪವೂ ಬಿಡದೆ ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು. ವ|| ಹಾಗೆ ಅಳತೆಯನ್ನು ಮೀರಿ ಕೊಬ್ಬಿದ ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ ನಾಶಪಡಿಸಿದಂತೆ ಅಗಲು ಸೂರ್ಯೋದಯವಾಯಿತು. ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ
ಮ|| ಪಡಲಿಟ್ಟಂತೆವೊಲಾಯ್ತು ಕೀಚಕಬಲಂ ಗಂಧರ್ವರಿಂದಿಂದಿರು
ಳ್ಗಡಿದೇಂ ಸಂಗಡಮಿೞ್ತುವಾಯ್ತೆ ಪೆಱವೆಣ್ಗೊಲ್ದಂಗಮೇನಾಗದಿಂ|
ದುಡಿದತ್ತಾಗದೆ ಮತ್ಸ್ಯನೊಂದು ಬಲಗೆಯ್ಯೆಂದಕ್ಕಟಾ ಎಂಬುದಂ
ನುಡಿಯಲ್ಕಾರ್ತರುಮಿಲ್ಲ ಪಾರದರದೊಳ್ ಸತ್ತಂಗೞಲ್ವನ್ನರಾರ್|| ೮೧
ಕಂ|| ರಾವಣನುಂ ಗಡ ಸೀತಾ
ದೇವಿಗೆ ಸೋಲ್ತದಱ ಫಲಮನೆಯ್ದಿದನಿವನಾ|
ರಾವಣನಿಂ ಪಿರಿಯನೆ ಪೇ
ೞೇವುದೊ ಶುಚಿಯಲ್ಲದವನ ಗಂಡುಂ ತೊಂಡುಂ|| ೮೨
ವ|| ಎಂದು ಪೊೞಲ ಜನಂಗಳ್ ಗುಜುಗುಜುಗೊಂಡು ಕೀಚಕನ ಪಡೆಮಾತನೆ ನುಡಿಯೆ ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೇನುಮನೆನಲಱಯದೆ ನಾಣ್ಚಿ ತನ್ನೊಳೆ ಮೂಗೞ್ಕೆಯನೞ್ತು ಕೆಮ್ಮನಿರ್ದಳಿತ್ತ ದುರ್ಯೋಧನನ ಗೂಢಪ್ರಣಿಗಳಾ ಮಾತಂ ಜಲಕ್ಕನಱದು ನಾಗಪುರಕ್ಕೆ ವಂದು ಸುಯೋಧನ ಸಭಾಮಧ್ಯದೊಳಿಂತೆಂದು ಬಿನ್ನಪಂಗೆಯ್ದರ್-
ಮ|| ಗುಡಿಗಂ ಬದ್ದವಣಕ್ಕಮಪ್ಪ ಪಡೆಮಾತೇಮಾತಿದಂ ಕೇಳ್ದೊಡೀ
ಗಡೆ ಮೆಚ್ಚೀಯಲೆವೇೞ್ಪುದೆಯ್ದೆ ಪರಮದ್ರೋಹರ್ಕಳಾಗಿರ್ದು ನಿ
ಮ್ಮಡಿಯೊಳ್ ಪೋಗದೆ ಕಾಡುತಿರ್ದ ಸುಭಟರ್ಕಳ್ ನೂರ್ವರುಂ ಕೀಚಕರ್
ಮಡಿದರ್ ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್|| ೮೩
ವ|| ಅದು ಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯಮಾಗಿ ಕೈಗೆವರ್ಕುಮೆಂಬುದುಂ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-
ಮ|| ಇದು ದಲ್ ಚೋದ್ಯಮತರ್ಕ್ಯಮದ್ಭುತಮಸಂಭಾವ್ಯಂ ವಿಚಾರಕ್ಕೆ ಬಾ
ರದುದೆಂತೆಂದೊಡೆ ಸಂದ ಸಿಂಹಬಲನಂ ಕೊಲ್ವನ್ನರಾರ್ ಭೀಮನ
ಲ್ಲದವರ್ ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳ
ಪ್ಪುದಱಂ ತೋಳ್ವಲದೊಳ್ ಪೆಱಂಗಮರಿದೀ ವಿಕ್ರಾಂತಮುಂ ಗರ್ವಮುಂ|| ೮೪
೮೧. ಕೀಚಕಸಮೂಹವು ರಾತ್ರಿ ಗಂಧರ್ವರಿಂದ ಚೆಲ್ಲಾಪಿಲ್ಲಿಯಾದ ಹಾಗಾಯಿತು. ಇದೂ ಸಾಮೂಹಿಕ ಮೃತ್ಯವಾಯಿತಲ್ಲವೇ? ಪರಸ್ತ್ರೀಗೆ ಅಳುಪಿದವನಿಗೆ ಏನುತಾನೆ ಆಗುವುದಿಲ್ಲ? ಈ ದಿನ ವಿರಾಟನ ಬಲಗೈ ಮುರಿದುಹೋಯಿತಲ್ಲವೇ, ಅಯ್ಯೋ ಎಂದು ಹೇಳುವವರೂ ಇಲ್ಲವಲ್ಲಾ, ಹಾದರದಲ್ಲಿ ಸತ್ತವರಿಗೆ ಅಳುವವರಾರಿದ್ದಾರೆ ೮೨. ರಾವಣನೂ ಕೂಡ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು. ಇವನು ಆ ರಾವಣನಿಗಿಂತ ಹಿರಿಯನೆ ಹೇಳು. ಸ್ವಚ್ಛವಾದ ನಡತೆಯಿಲ್ಲದವನ ಪೌರುಷಪರಾಕ್ರಮಗಳಿಂದೇನು ಪ್ರಯೋಜನ? ವ|| ಎಂದು ಪಟ್ಟಣದ ಜನಗಳು ಗುಂಪುಕೂಡಿಕೊಂಡು ಕೀಚಕನ ವಿಷಯವಾದ ಮಾತನ್ನೇ ಆಡುತ್ತಿರಲು ವಿರಾಟನ ಮಹಾರಾಣಿಯಾದ ಸುದೇಷ್ಣೆಯೂ ಹೇಡಿ ಸತ್ತ ಹಾಗೆ ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು ಸುಮ್ಮನಿದ್ದಳು. ಈ ಕಡೆ ದುರ್ಯೋಧನನ ಗೂಢಚಾರರು ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು. ೮೩. ‘ಧ್ವಜಾರೋಹಣಮಾಡುವುದಕ್ಕೂ ಮಂಗಳವಾದ್ಯ ಮಾಡಿಸುವುದಕ್ಕೂ ಯೋಗ್ಯವಾದ ಸಮಾಚಾರ’ ಎಂದರು ದೂತರು. ಅದೇನಂತಹ ಸುದ್ದಿ ಎಂದ ದುರ್ಯೋಧನ. ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು. ‘ನಿಮ್ಮ ವಿಶೇಷಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ ನೂರುಜನ ಕೀಚಕರೂ ಸ್ವಾಮಿಯ ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು. ವ|| ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ’ ಎಂದು ಹೇಳಿದರು. ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿದನು. ೮೪. ಇದು ನಿಜವಾಗಿಯೂ ಆಶ್ಚರ್ಯಕರವಾದುದು, ತರ್ಕಿಸಲಾಗದುದು, ಅದ್ಭುತವಾದುದು, ನಡೆಯಲಾಗದುದು, ವಿಚಾರ ಮಾಡಲಾಗದುದು; ಹೇಗೆಂದರೆ ಭೀಮನಲ್ಲದವರು ಸಿಂಹಬಲನನ್ನು ಕೊಲ್ಲುವವರಾರಿದ್ದಾರೆ? ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ ಈ ಪೌರುಷಮಾರ್ಗವು ಇತರರಿಗೆ ಅಸಾಧ್ಯ. ವ|| ಆದುದರಿಂದ
ವ|| ಅದಱಂ ಪಾಂಡವರೈವರುಂ ವಿರಾಟಪುರದೊಳಿರ್ದರಾಗಲೆವೇೞ್ಕುಮವರಿರ್ದರಪ್ಪೊಡೆ-
ಚಂ|| ಪರಿಭವದೊಂದು ತುತ್ತ ತುದಿ ಕೃಷ್ಣೆಯ ಬನ್ನದೊಳಾಗೆ ಜೂದಿನೊಳ್
ಪೊರಸೞವಂತೆ ತಮ್ಮರಸುಗೆಟ್ಟು ಕೞಲ್ದೆರ್ದೆಗೆಟ್ಟರಣ್ಯದೊಳ್|
ತಿರಿತರುತಿರ್ದ ಕಣ್ಬಡಿಗರನ್ ಮಗುೞ್ದುಂ ಬಿಱುತೋಡಿ ಬೇಡರೊಳ್
ನೆರೆದಿರಲಲ್ಲದೊಡ್ಡಯಿಸಿ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ|| ೮೫
ವ|| ಎಂಬುದುಮಾ ಕೌರವನ ಮಾತಿಂಗಮರಾಪಗಾನಂದನನಿಂತೆಂದಂ-
ಮ|| ಸ್ರ|| ರಸೆಯೊಳ್ ಕಾಲಾಗ್ನಿರುದ್ರಂ ಜಲಶಯನದೊಳಂಭೋಜನಾಭಂ ಪೊದಳ್ದಾ|
ಗಸದಿಂ ಸುತ್ತಿರ್ದಜಾಂಡೋದರದೊಳಜನಡಂಗಿರ್ಪವೋಲ್ ಕಾರಣಕ್ಕೆಂ||
ದೊಸೆದಿರ್ದರ್ ಪಾಂಡವರ್ ಕಾನನದೊಳಿರದವರ್ ನನ್ನಿಯಂ ತಪ್ಪೆಯುಂ ಸ
ಪ್ತಸಮುದ್ರಂ ಮೇರೆಯಂ ತಪ್ಪೆಯುಮೊಳರೆ ಬಿಗುರ್ತಾಂಪವರ್ ರಾಜರಾಜಾ|| ೮೬
ವ|| ಎನೆ ಕುಂಭಸಂಭವನಿಂತೆಂದಂ-
ಮ|| ಕೃತಶಾಸ್ತ್ರರ್ ಧೃತಶಾಸ್ತ್ರರಪ್ರತಿಹತ ಪ್ರಾಗಲ್ಭ್ಯರೀಗಳ್ ಪೃಥಾ
ಸುತರುದ್ಯೋಗಮನೆತ್ತಿಕೊಳ್ವ ದೆವಸಂ ಸಾರ್ಚಿತ್ತು ಕಾಲಾವ|
ಸ್ಥಿತಿಯುಂ ಬಂದುದಿದರ್ಕೆ ಮಾಣ್ದಿರದೆ ಮಂತ್ರಾವಾಸದೊಳ್ ಮಂತ್ರ ನಿ
ಶ್ಚಿತನಾಗೀಗಡೆ ಕಾದಿದಲ್ಲದಿಳೆಯಂ ನೀನೆಂತುಮೇನಿತ್ತಪಯ್|| ೮೭
ವ|| ಎಂದೊಡೆ ಕರ್ಣನಿಂತೆಂದಂ-
ಚಂ|| ಬಗೆಯದೆ ಸಾಮಮಂ ಬಿಸುಟು ಭೇದಮನೊಲ್ಲದುದಗ್ರದಾನಮಂ
ನೆಗೞದೆ ದಂಡಮಂ ನಿನಗೆ ಮಾಡಿದಕೃತ್ಯರನಂತು ಮಾಣ್ಬುದೇ|
ಬಗೆ ಪಗೆ ನೀಗೆಯುಂ ಮುಳಿಸು ಪೋಗೆಯುಮಾಯತಿ ಪೆರ್ಚೆಯುಂ ಜಗಂ
ಪೊಗೞೆಯುಮಾಂತರಾತಿನೃಪರಂ ತವೆ ಕೊಲ್ವುದಹೀಂದ್ರಕೇತನಾ|| ೮೮
ವ|| ಎಂಬುದುಂ ಸುಯೋಧನನಿರ್ವರ ನುಡಿಯುಮಂ ಕೇಳ್ದು ತನ್ನ ಮನದೊಳಾದ ಕಜ್ಜಮನಿಂತೆಂದಂ-
ಪಾಂಡವರೈದು ಜನವೂ ವಿರಾಟನಗರದಲ್ಲಿದ್ದೇ ತೀರಬೇಕು. ಅವರಿರುವುದಾದರೆ- ೮೫. ದ್ರೌಪದಿಯ ಅವಮಾನದ ಪರಮಾವಯಿಂದ ಜೂಜಿನಲ್ಲಿ ಪಾರಿವಾಳವು ನಾಶವಾಗುವಂತೆ ತಮ್ಮ ರಾಜ್ಯವನ್ನು ಕಳೆದುಕೊಂಡು, ಗೌರವವನ್ನು ನೀಗಿ, ಉತ್ಸಾಹಶೂನ್ಯರಾಗಿ ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು ಪುನ ಹೆದರಿ ಓಡಿಹೋಗಿ ಬೇಡರಲ್ಲಿ ಸೇರಿರಬೇಕಲ್ಲದೆ ಗುಂಪುಕೂಡಿ ರಾಜ್ಯದಲ್ಲಿ ಸೇರುವುದು ಸೂಕ್ತವೇ? ಎಂದ ದುರ್ಯೋಧನ. ವ|| ಆ ದುರ್ಯೋಧನನ ಮಾತಿಗೆ ಭೀಷ್ಮನು ಹೇಳಿದನು: ೮೬. ಕಾಲಾಗ್ನಿರುದ್ರನು ಪಾತಾಳದಲ್ಲಿಯೂ ವಿಷ್ಣುವು ಜಲಶಯನದಲ್ಲಿಯೂ ಬ್ರಹ್ಮನು (ವ್ಯಾಪ್ತವಾದ) ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿಯೂ ಅಡಗಿರುವ ಹಾಗೆ ಯಾವುದೋ ಒಂದು ಕಾರಣಕ್ಕಾಗಿ ಪಾಂಡವರು ಸಮಾಧಾನ ಚಿತ್ತದಿಂದ ಕಾಡಿನಲ್ಲಿ ಅಡಗಿದ್ದರು. ದುರ್ಯೋಧನ ಅವರು ಹಾಗೆ ಮಾಡದೆ ಸತ್ಯವನ್ನು ತಪ್ಪಿದರೂ ಏಳು ಸಮುದ್ರಗಳು ಮೇಲೆದಪ್ಪಿದರೂ ಪ್ರತಿಭಟಿಸುವವರು ಯಾರು ಇದ್ದಾರೆ? ಎನ್ನಲು ದ್ರೋಣಾಚಾರ್ಯರು ಹೀಗೆಂದರು. ೮೭. ಪಾಂಡವರು ಶಾಸ್ತ್ರವನ್ನು ತಿಳಿದವರು. ಶಸ್ತ್ರವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು. ಅವರು ಕಾರ್ಯಾರಂಭಮಾಡುವ ಕಾಲ ಸಮೀಪಿಸಿದೆ. ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು. ಯುದ್ಧಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವುದಿಲ್ಲವಲ್ಲವೆ? ವ|| ಎನ್ನಲು ಕರ್ಣನು ಹೀಗೆ ಹೇಳಿದನು- ೮೮. ದುರ್ಯೋಧನ, ಸಾಮೋಪಾಯವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠರಾದ ದಾನೋಪಾಯವನ್ನು ಅಂಗೀಕರಿಸದೆ ನಿನಗೆ ದಂಡೋಪಾಯವನ್ನೇ ನಿಷ್ಕರ್ಷಿಸಿದ ಆ ಕೃತಘ್ನರನ್ನು ಹಾಗೆಯೇ ಬಿಡುವುದು ಯೋಗ್ಯವಲ್ಲ. ಶತ್ರು ತೊಲಗುವಂತೆಯೂ ಕೋಪವು ಪರಿಹಾರವಾಗುವಂತೆಯೂ ಪೌರುಷವು ಹೆಚ್ಚುವಂತೆಯೂ ಲೋಕವು ಹೊಗಳುವಂತೆಯೂ
ಚಂ|| ಅಱಯಲೆವೇೞ್ಪುದಿರ್ದೆಡೆಯನಿರ್ದೆಡೆಯಿಂ ತೆಗೆದಾಜಿರಂಗದೊಳ್
ನಿಱಸಲೆವೇೞ್ಪುದಂತವರನಂತವರಿರ್ಪೆಡೆಯುಂ ವಿರಾಟನಿ|
ರ್ಪಱಕೆಯ ಪಟ್ಟಣಂ ನಮಗಿದೇವಿರಿದಪ್ಪುದು ತಳ್ವದೆಯ್ದಿ ನಾಂ
ತುಱುವನೆ ಕೊಳ್ವಮಂತು ತುಱುಗೊಂಡೊಡೆ ಪಾಂಡವರಿರ್ಪ ಗಂಡರೇ|| ೮೯
ವ|| ಎಂದು ಪಿರಿದುಮಾಗ್ರಹಂಬೆರಸು ಗೋಗ್ರಹಣಪ್ರಪಂಚಮನೆ ನಿಶ್ಚಯಿಸಿ ವಿರಾಟನ ದಾಯಿಗಂ ತ್ರಿಗರ್ತಾಶಂ ಸುಶರ್ಮನುಮಂ ನಾಲ್ಭಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇೞ್ದು ತುಱುವಂ ಕೊಳಿಸಿದಾಗಳ್-
ಚಂ|| ಕರೆದು ವಿರಾಟನುತ್ತರನನಾತ್ಮತನೂಜನನಾ ಪೊೞಲ್ಗೆ ಕಾ
ಪಿರಿಸಿ ಧರಾತಳಂ ತಳರ್ವವೋಲ್ ನಡೆದಾಗಳೆ ಪಾಂಡುಪುತ್ರರ|
ಯ್ವರುಮಿದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮಿಲ್ಲಿ ಮಾ
ಣ್ದಿರಲಣಮಾಗ ಪೂಣ್ದವಯುಂ ನೆದತ್ತು ಕಡಂಗಿ ಕಾದುವಂ|| ೯೦
ವ|| ಎಂದು ತಮ್ಮಯ್ವರುಮಾಳೋಚಿಸಿ ವಿಕ್ರಮಾರ್ಜುನನಂ ಪೆಱಗಣ ಕಾಪಿಂಗಿರಲ್ವೇೞ್ದು ನಾಲ್ವರುಂ ನಾಲ್ಕು ಸಮುದ್ರಂಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಳ್-
ಚಂ|| ಕಡಲ ಪೊದಳ್ದ ಪೆರ್ದೆರೆಗಳೆಯ್ದೆ ಕುಲಾದ್ರಿಗಳೊಳ್ ಪಳಂಚಿ ತೂ
ಳ್ದೊಡನೆ ಮರಲ್ದವೋಲ್ ಕೆಡೆಯೆ ಪಾಯಿಸಿದುಗ್ರರಥಂಗಳೞತ||
ಳ್ತಡಿಗಿಡೆ ಪಾಯ್ದರಾತಿನೃಪರಂ ತಱದಾಂತಿರದಾ ಸುಶರ್ಮನಂ
ಪಿಡಿದು ನೆಗೞ್ತೆಯಂ ಪಡೆದು ಸಾಹಸದಿಂ ತುಱುವಂ ಮಗುೞದರ್|| ೯೧
ವ|| ಅನ್ನೆಗಮತ್ತ ಸುಯೋಧನಂ ಸಮಸ್ತ ಸಾಧನಂಬೆರಸು-
ಉ|| ಉತ್ತರಂ ಗೋಗ್ರಹಂ ಪಿರಿದುಮಾಗ್ರಹಮಂ ಮನದೊಳ್ ತಗುಳ್ಚೆ ದಿ
ಗ್ಭಿತ್ತಿ ವಿಭೇದಿ ಪೆರ್ಚೆ ಕದನಾನಕರಾವಮಗುರ್ವಿನುರ್ವು ಪ|
ರ್ವುತ್ತಿರೆ ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳ್ದು ತು
ಳ್ಕುತ್ತಿರೆ ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ|| ೯೨
ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಎಂದನು. ೮೯. ಎನ್ನಲು ದುರ್ಯೋಧನನು ಇಬ್ಬರ ಮಾತನ್ನು ಕೇಳಿ ತನ್ನ ಅಭಿಪ್ರಾಯವನ್ನು ಸೂಚಿಸಿದನು. ಮೊದಲು ಅವರು ಇರುವ ಸ್ಥಳವನ್ನು ತಿಳಿಯಬೇಕು. ಅವರನ್ನು ಅವರಿರುವ ಸ್ಥಳದಿಂದ ಓಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು. ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರವು ಅವರಿರುವ ಸ್ಥಳ. ನಮಗೆ ಆ ವಿರಾಟನಗರವು ಏನು ದೊಡ್ಡದು? ಸಾವಕಾಶಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ. ಹಾಗೆ ಹಸುಗಳನ್ನು ಬಂಸಿದರೆ ಪಾಂಡವರು ಸುಮ್ಮನಿರುವ ಶೂರರಲ್ಲ. ವ|| ಎಂದು ವಿಶೇಷ ಕೋಪದಿಂದ ಕೂಡಿ ಪಶುಗಳನ್ನು ಬಂಸುವ ವಿಷಯವನ್ನೇ ನಿಶ್ಚಯಿಸಿದರು. ವಿರಾಟನ ಜ್ಞಾತಿಯೂ ತ್ರಿಗರ್ತಾಶನೂ ಆದ ಸುಶರ್ಮನನ್ನು ನಾಲ್ಕು ಸಾವಿರ ತೇರುಗಳೊಡನೆ ದಕ್ಷಿಣ ದಿಗ್ಭಾಗಕ್ಕೆ ಕಳುಹಿಸಿ ಪಶುಗಳನ್ನು ಹಿಡಿಸಿದರು. ೯೦. ವಿರಾಟನು ತನ್ನ ಮಗನಾದ ಉತ್ತರನನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಪಾಂಡವರೈವರೂ ‘ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು. ಇಲ್ಲಿ ತಡೆದಿರಲಾಗದು. ಪ್ರತಿಜ್ಞೆ ಮಾಡಿದ ಗಡುವೂ ಪೂರ್ಣವಾಗಿದೆ. ಉತ್ಸಾಹದಿಂದ ಯುದ್ಧಮಾಡೋಣ’ ವ|| ಎಂದು ತಾವಯ್ದುಜನವೂ ತಮ್ಮಲ್ಲಿ ಆಲೋಚಿಸಿ ವಿಕ್ರಮಾರ್ಜುನನನ್ನು ನಗರದ ಹಿಂಗಾವಲಿಗೆ ಇರಹೇಳಿ ನಾಲ್ಕು ಜನರೂ ನಾಲ್ಕು ಸಮುದ್ರಗಳೇ ಮೇರೆದಪ್ಪಿದಂತೆ ವಿರಾಟನೊಡನೆ ಕೂಡಿ ಹೋಗಿ ಪ್ರತಿಭಟಿಸಿದರು. ೯೧. ಸಮುದ್ರದಲ್ಲಿ ವ್ಯಾಪ್ತವಾದ ದೊಡ್ಡ ಅಲೆಗಳು ಕುಲಪರ್ವತಗಳನ್ನು ತಗುಲಿ ಹಿಂದಕ್ಕೆ ಮರಳಿದಂತೆ ಮುಂದಕ್ಕೆ ನುಗ್ಗಿಸಿದ ಭಯಂಕರವಾದ ರಥಗಳನ್ನು ಹಿಂದಕ್ಕೆ ತಳ್ಳಿ ಬೀಳಿಸಿ ತಳಭಾಗವು ನಾಶವಾಗಿ ಅಡಿಮೇಲಾಗಲು ನುಗ್ಗಿದ ಶತ್ರುರಾಜರನ್ನೂ ಸುಶರ್ಮನನ್ನೂ ಬಿಡದೆ ಎದುರಿಸಿ ಹಿಡಿದು ಪ್ರಸಿದ್ಧಿಯನ್ನು ಪಡೆದು ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು. ವ|| ಅಷ್ಟರಲ್ಲಿ ಆ ಕಡೆ ದುರ್ಯೋಧನನು ಸಮಸ್ತ ಸೈನ್ಯದೊಡಗೂಡಿ- ೯೨. ಉತ್ತರದಿಕ್ಕಿನ ಗೋವುಗಳನ್ನು ಹಿಡಿಯಲು ಯೋಚಿಸಿ ದಿಗಂತವನ್ನು ಒಡೆಯುತ್ತಿರುವ ಯುದ್ಧಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚು ಹೊರಹೊಮ್ಮುತ್ತಿರಲು ಪ್ರಭುವಾದ ದುರ್ಯೋಧನನು
ಚಂ|| ಪಸರಿಸಿ ಪೊಕ್ಕು ಕೂಕಿಱದು ಕಾದುವ ಬಲ್ಲಣಿಗಳ್ ಪಳಂಚೆ ಪಾ
ಯಿಸುವ ದೞಕ್ಕಗುರ್ವೆಸೆಯೆ ನೂಂಕಿದ ಬಲ್ಲಣಿಗೆತ್ತಮೆಯ್ದೆ ಚೋ|
ದಿಸುವ ರಥಕ್ಕೆ ಪೆಳ್ಪಳಿಸದೊರ್ವರಿನೊರ್ವರೆ ಮಿಕ್ಕು ಪಾರ್ದು ಸಾ
ರ್ದಿಸೆ ತುಱುಗಾಱರಂದಿನಿಸು ಬಲ್ವಲನಾದುದೊಂದು ಕಾಳೆಗಂ|| ೯೩
ಕಂ|| ಮಚ್ಚರದಿನೊರ್ವರೊರ್ವರ
ನುಚ್ಚಳಿಸಿ ತಗುಳ್ದು ಗೋವರಾರ್ದಿಸೆ ಕೀೞಂ|
ಕರ್ಚಿ ಪುಡಿಯೊಳ್ ಪೊರಳ್ದುವು
ನಚ್ಚಿನ ಕಾಂಭೋಜವಾಜಿಗಳ್ ಕೆಲವಾಗಳ್|| ೯೪
ವ|| ಅಂತು ಮತ್ತು ಮನದೊಳೊಡಂಬಟ್ಟಂತೆ ಮನಮನೆಡಗಲಿಸಿ ಪರಿವ ಜಾತ್ಯಶ್ವಂಗಳೆಲ್ಲ ಮೞಗಾಳೆಗದೊಳ್ ಸತ್ತೊಡೆ-
ಚಂ|| ತುಱು ಪರಿವಾಗಳೆಮ್ಮ ಪೆಣನಂ ತುೞದುಂ ಪರಿಗುಂ ದಲೆಂದು ಚಿ
ತುಱುಗೊಳೆ ಬಾೞೆಮೆಂದು ತುಱುಗೋಳೊಳೆ ಸಾವುದು ಸೈಪಿದೆಂದು ಪಾ|
ಯ್ದಱಕೆಯ ಗೋವರಣ್ಮಿ ಬರೆ ಪಾಯಿಸಿ ಘೋೞಯಿಲರ್ ತಗುಳ್ದು ತ
ತ್ತಱ ತಱದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್|| ೯೫
ವ|| ಆಗಳೊರ್ವ ಗೋವಳನನಿಬರ ಸಾವುಮಂ ಕಂಡು ಮನದೊಳಾದೇವಂ ಪೆರ್ಚೆಯುಂ ತುಱುವ ಪೋಗಿಂಗಾಱದೆ ವಿರಾಟಪುರಕ್ಕೆ ವಂದುತ್ತರಂಗೆ ಪೇೞುಗಳ್-
ಚಂ|| ಪೆಱಗಣ ಕಾಪೆನ್ನನೆ ಮಹೀಪತಿ ಪೂಣಿಸಿ ಪೋದನಾಂ ಗಡಂ
ತುಱುಗೊಳೆ ಮಾಣೆನೆನ್ನಿದಿರ್ಗೆ ರಾವಣ ಕೋಟಿಯುಮಾಂತುಮೇಂ ಗೆಲಲ್|
ನೆಗುಮೆ ತನ್ನಿಮಿನ್ನೆನಗೆ ಸಾರಥಿಯಪ್ಪನನೀಗಳೆಂದು ಪೊ
ಚ್ಚಱಸೆ ವಿರಾಟನಂದನನದೆಲ್ಲಮನಾಗಡೆ ವಿಕ್ರಮಾರ್ಜುನಂ|| ೯೬
ವ|| ಕೇಳ್ದಾ ಪೊೞ್ತೆ ಪೊೞುಗೆ ದ್ರೌಪದಿಗೆ ಬೞಯನಟ್ಟಿ ಬರಿಸಿ-
ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು. ೯೩. ಪ್ರಸರಿಸಿ ಹೊಕ್ಕು ಮೇಲಕ್ಕೆ ನೆಗೆದು ಹೋರಾಡುವ ಬಲಿಷ್ಠರಾದ ಕಾಲಾಳುಗಳು ತಾಗಲು, ಮುನ್ನುಗ್ಗಿಸುವ ಸೈನ್ಯಕ್ಕೆ ಭಯವುಂಟಾಗುವಂತೆ ಮುಂದೆ ನುಗ್ಗಿದ ಬಲವಾದ ಕಾಲಾಳುಗಳಿಗೂ ವೇಗವಾಗಿ ನಡೆಸುತ್ತಿರುವ ತೇರುಗಳಿಗೂ ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ ಸಮೀಪಕ್ಕೆ ಬಂದು ಬಾಣಪ್ರಯೋಗಮಾಡಲು ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು. ೯೪. ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟದಿಂದ ಹೊಡೆಯಲು (ಜಯಿಸಿಯೇ ತೀರುತ್ತೇವೆಂದು) ನಂಬಿದ್ದ ಕೆಲವು ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು. ವ|| ಹಾಗೆ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಮನಸ್ಸನ್ನೂ ಮೀರಿ ಓಡುವ ಜಾತಿಕುದುರೆಗಳೆಲ್ಲ ಆ ಸಾಮಾನ್ಯಯುದ್ಧದಲ್ಲಿ ಸತ್ತವು. ೯೫. ದನಗಳು ಓಡುವಾಗ ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲವೇ? ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು. ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ (ಅದೃಷ್ಟ) ಎಂದು ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷಪ್ರದರ್ಶನಮಾಡಿ ಬರಲು ಕುದುರೆಯ ರಾವುತರು ಕುದುರೆಗಳನ್ನು ಮುನ್ನುಗ್ಗಿಸಿ ಅವರನ್ನು ಬೆನ್ನಟ್ಟಿ ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು. ವ|| ಆಗ ಒಬ್ಬ ಗೋಪಾಲಕನು ಅಷ್ಟುಮಂದಿಯ ಸಾವನ್ನು ಕಂಡು ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ ವಿರಾಟನಗರಕ್ಕೆ ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು. ೯೬. ನಗರದ ಹಿಂಗಾವಲಿಗೆ ರಾಜನು ನನ್ನನ್ನು ನಿಯಮಿಸಿ ಹೋದನು. ಆದರೂ ಪಶುಗಳನ್ನು ಸೆರೆಹಿಡಿಯುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ, ನನ್ನ ಇದಿರಾಗಿ ಕೋಟಿ ರಾವಣರು ಬಂದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ? ಈ ನನಗೆ ಸಾರಥಿಯಾಗುವವನನ್ನು ಈಗಲೆ ತನ್ನಿರಿ ಎಂದು ಉತ್ತರಕುಮಾರನು ವಿಜೃಂಭಿಸಲು (ಜಂಬ ಕೊಚ್ಚಲು) ಅದೆಲ್ಲವನ್ನೂ ಅರ್ಜುನನು ಕೇಳುತ್ತಿದ್ದನು. ವ|| ತಕ್ಷಣವೇ ದ್ರೌಪದಿಗೆ ದೂತರ ಮೂಲಕ ಸಮಾಚಾರವನ್ನು ಕಳುಹಿಸಿ ಬರಮಾಡಿದನು.
ಉ|| ಸಾರಥಿ ಮಾಡು ಮತ್ಸ್ಯಸುತನುತ್ತರನಂ ತದರಾತಿಸೈನ್ಯ ಕೂ
ಪಾರದ ಪಾರಮಂ ತಡೆಯದೆಯ್ದುವೆನೆಂಬುದುಮಂತೆ ಬಂದು ಪಂ|
ಕೇರುಹವಕ್ತ್ರೆ ಮತ್ಸ್ಯಸುತನಂ ನುಡಿದಳ್ ನಿನಗಾಜಿರಂಗದೊಳ್
ಸಾರಥಿಯಪ್ಪೊಡಪ್ಪುದು ಶಿಖಂಡಿಯೆ ನಿನ್ನೊರೆಗುಂತೆ ಗಂಡರಾರ್|| ೯೭
ವ|| ಎಂಬುದುಂ ಬೃಹಂದಳೆಯಲ್ಲಿಗುತ್ತರಂ ತನ್ನ ತಂಗೆಯುತ್ತರೆಯನೆ ಬೞಯನಟ್ಟಿ ಬರಿಸಿ-
ಉ|| ಸಾರಥಿಯಪ್ಪೊಡಪ್ಪನೆನಗೀತನೆ ಪೋ ಪೆಱರೇವರಿನ್ ನೆರಂ
ಬಾರೆನೆನುತ್ತೆ ತನ್ನ ರಥಮಂ ತರವೇೞರದೆಯ್ದೆ ಘೋರ ಕಾಂ||
ತಾರಮನೊಂದು ಬೇಗೆ ಪರಿವಂತು ರಥಂ ಪರಿದತ್ತು ವೈರಿ ಕಾಂ
ತಾರಮನೞ್ವಲಂಕದ ಬೃಹಂದಳೆ ಚೋದಿಸೆ ಚೋದ್ಯಮುಪ್ಪಿನಂ|| ೯೮
ವ|| ಅಂತು ಕಿಱದಂತರಮಂ ಪೋಗೆವೋಗೆ-
ಚಂ|| ಕರಿಘಟೆ ನೀಳಮೇಘಘಟೆಯಂತೆ ತುರಂಗದೞಂ ಸಮುದ್ರದೊಳ್
ತರತರದಿಂದಮೇೞ್ವ ತೆರೆಯಂತೆ ರಥಂ ಮಕರಂಗಳಂತಗು
ರ್ವುರಿವರಿಯುತ್ತಮಿರ್ಪಣಿ ಬೃಹದ್ಬಡಬಾನಳನಂತೆ ತೋ ಭೀ
ಕರತರಮಾದುದುತ್ತರನ ಕಣ್ಗೆ ಸುಯೋಧನಸೈನ್ಯಸಾಗರಂ|| ೯೯
ವ|| ಆಗಳದಂ ಕಂಡುತ್ತರನೊತ್ತರಮೊತ್ತಿದಂತೆ ಬೆರ್ಚಿ ಬೆಗಡುಗೊಂಡು-
ಉ|| ನೋಡಲೞುಂಬಮೆಂದೊಡಿದನಾಂತಿಱದಾರ್ ತವಿಪನ್ನರೆಂದು ನಾ
ಣೋಡೆ ವಿರಾಟಸೂನು ರಥದಿಂದಿೞದೋಡಿದೊಡೆಯ್ದೆ ಪೂಣ್ದು ಬೆ|
ರ್ಚೋಡೆ ಕಿರೀಟಿ ತನ್ನನಱಪುತ್ತೆ ಶವಿದ್ರುಮದಲ್ಲಿಗಾತನಂ
ನೀಡಿರದುಯ್ದು ನೀಡಿಸಿದನಾತನಿನಲ್ಲಿಯ ಕೈದುವೆಲ್ಲಮಂ|| ೧೦೦
ವ|| ಅಂತು ಗಾಂಡೀವಿ ಗಾಂಡೀವಂ ಮೊದಲಾಗೆ ದಿವ್ಯಶರಾಸನಶರ ವಿಚಿತ್ರತನುತ್ರಂಗಳೆಲ್ಲಮಂ ಗೆಲ್ಲಮಂ ತನಗಾವಗಂ ಕೊಳ್ವಂತೆ ಕೊಂಡು ಪಗೆವರ ಗಂಟಲ ಬಳೆಯನೊಡೆದು ಕಳೆವುದನನುಕರಿಸುವಂತೆ ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ಕಳೆದು-
೯೭. ‘ಮತ್ಸ್ಯನ ಮಗನಾದ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು. ಅವನ ಶತ್ರುಸೇನಾಸಮುದ್ರವನ್ನು ನಾನು ಜಯಿಸಿ ಬಿಡುತ್ತೇನೆ ಎಂದು ಹೇಳಿದನು. ದ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು. ಯುದ್ಧರಂಗದಲ್ಲಿ ನಿನಗೆ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು. ನಿನಗೆ ಸಮಾನರಾದ ಶೂರರಾಗಿದ್ದಾರೆ? ಎಂದಳು. ವ|| ಉತ್ತರನು ತನ್ನ ತಂಗಿಯಾದ ಉತ್ತರೆಯ ಮೂಲಕ ಸಮಾಚಾರವನ್ನು ಕಳುಹಿಸಿ ಬೃಹಂದಳೆಯನ್ನು ಬರಮಾಡಿದನು. ೯೮. ಸಾರಥಿಯಾಗುವುದಾದರೆ ಈತನೇ ಸಮರ್ಥ ಬಿಡು; ಇತರರು ಏನು ಮಾಡಿಯಾರು? ಇನ್ನು ಯಾರ ಸಹಾಯವನ್ನೂ ನಾನು ಅಪೇಕ್ಷಿಸುವುದಿಲ್ಲ ಎಂದು ಹೇಳುತ್ತ ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೊರಟನು. ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ಶೂರನಾದ ಬೃಹಂದಳೆಯು ಆಶ್ಚರ್ಯವಾಗುವ ಹಾಗೆ ತೇರನ್ನು ನಡೆಸಿದನು. ಶತ್ರುಗಳೆಂಬ ಕಾಡಿನ ಕಡೆಗೆ ತೇರು ಧಾವಿಸಿತು. ವ|| ಹಾಗೆ ಸ್ವಲ್ಪ ದೂರ ಹೋಗುತ್ತಲು ೯೯. ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ ಕುದುರೆಯ ಸೈನ್ಯವು ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆಯೂ ತೇರುಗಳು ಮೊಸಳೆಗಳಂತೆಯೂ ದೊಡ್ಡ ಕಿಚ್ಚಿನಂತೆ ಹರಿದುಬರುತ್ತಿರುವ ಪದಾತಿಸೈನ್ಯವು ದೊಡ್ಡ ಬಡಬಾಗ್ನಿಯಂತೆಯೂ ಕಾಣಲು ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು. ವ|| ಅದನ್ನು ನೋಡಿ ಉತ್ತರನು ಇದ್ದಕ್ಕಿದ್ದ ಹಾಗೆ ಆಕ್ರಮಿಸಲ್ಪಟ್ಟವನ ಹಾಗೆ ಬೆಚ್ಚಿ ಭಯವನ್ನು ಹೊಂದಿದನು. ೧೦೦. ‘ನೋಡುವುದಕ್ಕೆ, ಅಸಾಧ್ಯವಾದ ಇದನ್ನು ಪ್ರತಿಭಟಿಸಿ ನಾಶಮಾಡುವವರಾರು’ ಎಂದು ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಿದನು. (ಹಿಂದೆ) ಹೆಮ್ಮೆಯಿಂದ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಿಹೋಗುತ್ತಿರುವ ಉತ್ತರನಿಗೆ ಅರ್ಜುನನು ತನ್ನ ಪರಿಚಯವನ್ನು ಮಾಡಿಕೊಟ್ಟು ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು- (ತೆಗೆದುಕೊಂಡನು) ವ|| ಹಾಗೆ ಅರ್ಜುನನು ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ವಿಜಯಸೂಚಕವಾಗಿಯೇ ಅಂಗೀಕರಿಸಿದನು. ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ ಪೂರ್ಣವಾಗಿ
ಚಂ|| ಬಿಡೆ ಪಿಣಿಲಂ ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದಂದು ಗಂ
ಡುಡೆಯುಡೆ ಗಂಡುಗೆಟ್ಟುದು ನೆಗೞ್ತೆಯ ಗಾಂಡಿವಮಂ ತಗುಳ್ದು ಜೇ|
ವೊಡೆಯೆ ಸಿಡಿಲ್ ಸಿಡಿಲ್ದು ಪೊಡೆವಂತೆವೊಲಾಯ್ತೆನೆ ಗಂಡಗಾಡಿ ನೂ
ರ್ಮಡಿ ಮಿಗಿಲಾದುದಾ ರಥಮನೇಱಲೊಡಂ ಪಡೆಮೆಚ್ಚೆಗಂಡನಾ|| ೧೦೧
ವ|| ಅನ್ನೆಗಮತ್ತ ಪರಸೈನ್ಯಭೈರವನ ಬರವಿಂಗಳ್ಕಿ ಗಾಂಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುಧ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ-
ಚಂ|| ಅವಯ ಲೆಕ್ಕಮಂ ನೆಱಪಿ ನನ್ನಿಗೆ ಮಾಣದೆ ಕಾದಲೆಂದು ಬಂ
ದವನಿವನರ್ಜುನಂ ತೊಡರ್ದು ನಿಲ್ಲದೆ ನೀನೊಡಗೊಂಡು ಪೋಗು ಗೋ|
ವಹಮನಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂ
ಬಿವರ್ವೆರಸಾಂಪೆನಾನಿನಿಸನೀ ಯೆಡೆಯೊಳ್ ಕದನತ್ರಿಣೇತ್ರನಂ|| ೧೦೨
ವ|| ಎಂಬುದುಂ ಸುಯೋಧನಂ ಪಿರಿದುಮಾಕುಳಂಬೆರಸು ಗೋಕುಲಮಂ ಕೊಂಡುಪೋಗೆ ಪೋಗಲೀಯದುತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದು-
ಮ|| ಪಗೆ ತೀರ್ಗುಂ ಬಗೆ ತೀರ್ಗುಮಾ ಕುರುಕುಳಪ್ರಖ್ಯಾತನಂ ಕಾದಿ ತೊ
ಟ್ಟಗೆ ಗೋವೃಂದಮನಾಂ ಮಗುೞದಪೆನೆಂದಾರ್ದೆಚ್ಚು ತನ್ನಂಕದಂ|
ಬುಗಳೊಂದೊಂದಱಲೊಂದು ಲಕ್ಕ ಬಲಮಂದೞುಡೆ ದುರ್ಯೋಧನಂ
ಮಿಗೆ ಸೋಲ್ತೋಡೆ ಮಗುೞದಂ ತುಱುಗಳಂ ವಿದ್ವಿಷ್ಟವಿದ್ರಾವಣಂ|| ೧೦೩
ಚಂ|| ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಯೊಳ್ ತೊಡಂಕಿ ನಿ
ಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ|
ಗ್ಗದ ನಿಡುಗೋಡು ಮೇಡುಮಮರುತ್ತುಮಿಱುಂಕಿದ ಕೆಚ್ಚಲೆತ್ತಮೆ
ತ್ತಿದ ಕುಡಿವಾಲಮಂದೆಸೆಯೆ ಕರ್ಬಸುಗಳ್ ಪರಿಗೊಂಡುವಾಜಿಯೊಳ್|| ೧೦೪
ವ|| ಅಂತು ತುಱುವಂ ಮಗುೞ ಮಗುೞದೆ ತನಗಿದಿರೊಡ್ಡಿ ನಿಂದರಿನೃಪಬಲಮನರೆದು ಸದೆದು-
ತೊಟ್ಟಿದ್ದ ಮುಂಗಯ್ಯಿನ ಬಳೆಗಳನ್ನು ಒಡೆದುಹಾಕಿದನು. ೧೦೧. ಕೂದಲಿನ ಗಂಟನ್ನು (ಹೆರಳನ್ನು) ಬಿಚ್ಚಲು ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಮತ್ತು ಭಯದಿಂದ ಬಾಯಿಬಿಟ್ಟಿತು. ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು ತನ್ನ ಪೌರುಷವನ್ನು ನೀಗಿತು. ಗಾಂಡೀವವನ್ನು ಹಿಡಿದು ಹೆದೆಯಿಂದ ಶಬ್ದಮಾಡಲು ಸಿಡಿಲು ಸಿಡಿದು ಹೊಳೆಯುವ ಹಾಗಾಯಿತು ಎನ್ನಲು ಪಡೆಮೆಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರರಷ್ಟು ಹೆಚ್ಚಾಯಿತು. ವ|| ಅಷ್ಟರಲ್ಲಿ ಆ ಕಡೆ ಪರಸೈನ್ಯಭೈರವನಾದ ಅರ್ಜುನನ ಬರವಿಕೆಗೆ ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ವಿಶೇಷವಾಗಿ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು. ೧೦೨. ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ ಸತ್ಯವಾಕ್ಕಿಗೆ ತಪ್ಪದೆ ನಡೆದು ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ. ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಪಶುಸಮೂಹವನ್ನು ಕರ್ಣ, ಕೃಪ, ದ್ರೋಣರೇ ಮುಖ್ಯರಾದ ಯೋಧಾಗ್ರೇಸರರನ್ನು ಒಡಗೊಂಡು ಹಿಂತಿರುಗಿಸು. ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಸ್ವಲ್ಪಮಟ್ಟಿಗೆ ಎದುರಿಸುತ್ತೇನೆ ಎಂದನು. ವ|| ದುರ್ಯೋಧನನು ವಿಶೇಷಗಾಬರಿಯಿಂದ ಕೂಡಿ ಪಶುಸಮೂಹವನ್ನೊಡಗೊಂಡು ಹೋಗಲು ಹಾಗೆ ಹೋಗುವುದಕ್ಕೆ ಬಿಡದೆ ಉತ್ತರನನ್ನು ತೇರನ್ನು ನಡೆಸುವಂತೆ ಹೇಳಿ (ಅರ್ಜುನನು ದುರ್ಯೋಧನನ) ಸಮೀಪಕ್ಕೆ ಬಂದನು. ೧೦೩. ಶತ್ರುವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ. ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ಧಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಹೊಡೆದು ತನ್ನ ಪ್ರಸಿದ್ಧವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದನು. ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು. ೧೦೪. ಶೂರರ ಮತ್ತು ಪರಾಕ್ರಮಶಾಲಿಗಳ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡ ನಿಂತುಕೊಳ್ಳದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ, ಸಂಪೂರ್ಣವಾಗಿ ಮೇಲೆತ್ತಿಕೊಂಡಿರುವ ಬಾಲದ ತುದಿಯೂ ಪ್ರಕಾಶಿಸುತ್ತಿರಲು ಕರಿಯ ಹಸುಗಳು, ಯುದ್ಧರಂಗದಲ್ಲಿ ಓಡಿಹೋದುವು. ವ|| ಹಾಗೆ ಹಸುಗಳನ್ನು ಹಿಂತಿರುಗಿಸಿ ಹಿಂತಿರುಗದೆ ತನಗೆ
ಚಂ|| ಪೞುವೞಯಂ ತಗುಳ್ದಳುರ್ವ ಬೇಗೆವೊಲೆಚ್ಚ ಶರಾಳಿಗಳ್ ಛೞಲ್
ಛೞಲೆನೆ ಪಾಯೆ ಪಾಯ್ವ ಬಿಸುನೆತ್ತರ ಸುಟ್ಟುರೆ ಚಾತುರಂಗಮಂ|
ಕೞಕುಱಮಾಗೆ ಪೇೞೆಪೆಸರಿಲ್ಲೆನೆ ಪಾಯಿಸಿ ತೇರನೆಯ್ದೆ ತೊ
ತ್ತೞದುೞದತ್ತು ವೈರಿಬಲಮೆಲ್ಲಮನಮ್ಮನ ಗಂಧವಾರಣಂ|| ೧೦೫
ಕುರುಬಲದೊಳ್ ಕರಂ ನೆಗೞ್ದ ಬೀರರ ಚೆನ್ನರ ಸಂದ ಚೆನ್ನಪೊಂ
ಗರ ತಲೆ ತಾೞಪಣ್ ಕೆದಱದಂತೆ ನಿರಂತರಮಾಜಿರಂಗದೊಳ್|
ಪರೆದಿರೆ ಲೋಹಿತಾಂಬುಯೊಳಾನೆಗಳಟ್ಟೆಗಳಾಡೆ ನೋಡಲ
ಚ್ಚರಿಯುಮಗುರ್ವುಮದ್ಭುತಮುಮಾಯ್ತು ರಣಂ ಕದನತ್ರಿಣೇತ್ರನಾ|| ೧೦೬
ವ|| ಆಗಳದಂ ಕಂಡಂಗರಾಜಂ ರಾಜರಾಜನ ನಡಪಿದುದುಮಂ ತನ್ನ ಬಲ್ಲಾಳ್ತನಮುಮಂ ನೆನೆದು ವಿಕರ್ಣಂಬೆರಸರ್ಣವನಿನಾದ ದಿಂದಾರುತ್ತುಂ ಬಂದ ಗುಣಾರ್ಣವನೊಳ್ ತಾಗೆ-
ಚಂ|| ಸಮೆದುದು ಪೋಗು ಗೋಗ್ರಹಣದಲ್ಲಿಯೆ ಭಾರತಮೆಂಬ ಮಾತನಂ
ದಮರ ನರೋರಗರ್ ನುಡಿಯೆ ರೌದ್ರಶರಂಗಳಿನೆಚ್ಚು ಯುದ್ಧದೊಳ್|
ಸಮಸಮನಾಗಿ ಕಾದಿದೊಡೆ ಕರ್ಣನ ವಕ್ಷಮನೆಚ್ಚು ಗರ್ವಮಂ
ಸಮೆಯಿಸಿ ಕೊಂದನಂಕದ ವಿಕರ್ಣನನೊಂದೆ ವಿಕರ್ಣದಿಂ ನರಂ|| ೧೦೭
ವ|| ಅಂತು ಕರ್ಣನ ನೋವುಮಂ ವಿಕರ್ಣನ ಸಾವುಮಂ ಕಂಡು-
ಉ|| ತಸ್ಕಿನ ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರೆ
ಕ್ಕೆಕ್ಕೆಯಿನೊರ್ವರೊರ್ವರೆ ಬಿಗುರ್ತಿರದಾಂತು ನಿಶಾತ ಬಾಣ ಜಾ|
ಲಕ್ಕೆ ಸಿಡಿಲ್ದು ಜೋಲ್ದು ಸೆರಗಂ ಬಗೆದೋಡಿದರೊಂದು ಪೋೞ್ತುಮೊಂ
ದರ್ಕಮಿದಿರ್ಚಲಾಱದೆ ಮನಂಗಲಿಗಳ್ ಕದನತ್ರಿಣೇತ್ರನಾ|| ೧೦೮
ಕಂ|| ಮನದೊಳ್ ಕರುಣಿಸಿ ಸಂಮೋ
ಹನಾಸ್ತ್ರದಿಂದೆಚ್ಚು ಬೀರರಂ ಬೀರದ ಶಾ|
ಸನಮನೆ ನಿಱಸುವ ಬಗೆಯಿಂ
ದನಿಬರ ಪೞವಿಗೆಯನೆೞೆದುಕೊಂಡಂ ಹರಿಗಂ|| ೧೦೯
ಪ್ರತಿಭಟಿಸಿ ನಿಂತ ಶತ್ರುಸೈನ್ಯವನ್ನು ಪುಡಿಮಾಡಿ ನಾಶಪಡಿಸಿದನು. ೧೦೫. ಅರಣ್ಯಮಾರ್ಗವನನ್ನುಸರಿಸಿ ವ್ಯಾಪಿಸುವ ಕಿಚ್ಚಿನ ಹಾಗೆ ಪ್ರಯೋಗ ಮಾಡಿದ ಅರ್ಜುನನ ಬಾಣಸಮೂಹಗಳು ಛಳಿಲ್ ಛಳಿಲ್ ಎಂದು ನುಗ್ಗಿಸುತ್ತಾ ಹರಿದುಬರುತ್ತಿರುವ ಬಿಸಿರಕ್ತದ ಸುಂಟರಗಾಳಿಯಿಂದ ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿದನು. ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ ತೇರನ್ನು ಹಾಯಿಸಿ ಸೊಕ್ಕಿದಾನೆಯಂತೆ ಅರ್ಜುನನು ಶತ್ರುಸೈನ್ಯವನ್ನೆಲ್ಲ ಸಂಪೂರ್ಣವಾಗಿ ತುಳಿದು ಹಾಕಿದನು. ೧೦೬. ಕೌರವಸೈನ್ಯದಲ್ಲಿ ವಿಶೇಷಪ್ರಖ್ಯಾತರಾದ ವೀರರ ಸೌಂದರ್ಯಶಾಲಿಗಳ ಪ್ರಸಿದ್ಧರಾದ ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿದುವು. ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು ಕದನತ್ರಿಣೇತ್ರನಾದ ಅರ್ಜುನನ ಯುದ್ಧವು ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು. ವ|| ಆಗ ಕರ್ಣನು ಅದನ್ನು ನೋಡಿ ದುರ್ಯೋಧನನು ತನ್ನನ್ನು ಸಾಕಿದುದನ್ನೂ ತನ್ನ ಪರಾಕ್ರಮವನ್ನೂ ನೆನೆದು ವಿಕರ್ಣನೊಡಗೂಡಿ ಸಮುದ್ರಘೋಷದಿಂದ ಆರ್ಭಟಿಸುತ್ತ ಬಂದು ಗುಣಾರ್ಣವನಾದ ಅರ್ಜುನನನ್ನು ತಾಗಿದನು. ೧೦೭. ಗೋಗ್ರಹಣದಲ್ಲಿಯೇ ಮಹಾಭಾರತಯುದ್ಧವು ಮುಗಿದುಹೋಯಿತು ಎಂಬ ಮಾತನ್ನು ಆ ದಿನ ದೇವತೆಗಳೂ ಮನುಷ್ಯರೂ ಉರಗರೂ (ಮೂರು ಲೋಕದವರೂ) ಹೇಳುವ ಹಾಗೆ ಅರ್ಜುನನು ಭಯಂಕರವಾದ ಬಾಣಗಳಿಂದ ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದ ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಕಡಿಮೆ ಮಾಡಿ ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು. ವ|| ಹಾಗೆ ಕರ್ಣನ ನೋವನ್ನೂ ವಿಕರ್ಣನ ಸಾವನ್ನೂ ನೋಡಿ-
೧೦೮. ಸಮರ್ಥರಾದ ದ್ರೋಣ, ಭೀಷ್ಮ, ಕೃಪರೇ ಮುಖ್ಯರಾದ ವೀರಾಗ್ರೇಸರರೂ ಗುಂಪುಗುಂಪಾಗಿ ಒಬ್ಬೊಬ್ಬರೂ ಅರ್ಜುನನ ಹರಿತವಾದ ಬಾಣಸಮೂಹಗಳಿಗೆ ತಡೆಯಲಾರದೆ ಹೆದರಿ ಓಡಿಹೋದರು. ಮನಸ್ಸಿನಲ್ಲಿ ಮಾತ್ರ ಶೂರರಾದ ಅವರು ಕದನತ್ರಿಣೇತ್ರನಾದ ಅರ್ಜುನನ ಒಂದು ಹೊತ್ತಿನ ಯುದ್ಧಕ್ಕೂ ಪ್ರತಿಭಟಿಸಿ ನಿಲ್ಲಲಾರದೆ ಹೋದರು. ೧೦೯. ಆಗ ಅರ್ಜುನನ ಅವರ ಮೇಲೆ ದಯೆತೋರಿ
ವ|| ಅಂತು ವರ ಶಶಿ ವಿಶದಯಶಪಟಂಗಳಂ ನನ್ನಿಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುೞ್ದು ಬರ್ಪಾಗಳ್-
ಉ|| ಸೂಸುವ ಸೇಸೆ ಬೀಸುವ ಚಳಚ್ಚಮರೀರುಹಮೆಕ್ಕೆಯಿಂ ರಣಾ
ಯಾಸ ಪರಿಶ್ರಮಾಂಬು ಲವಮಂ ತವೆ ಪೀರೆ ಪುರಾಂಗನಾಮುಖಾ|
ಬ್ಜಾಸವಗಂಧದೊಳ್ ಬೆರಸಿದೊಂದೆಲರೊಯ್ಯನೆ ತೀಡೆ ಪೊಕ್ಕನಾ
ವಾಸವನಂತೆ ಮತ್ಸ್ಯಮಹಿಪಾಳಕಮಂದಿರಮಂ ಗುಣಾರ್ಣವಂ|| ೧೧೦
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಅಷ್ಟಮಾಶ್ವಾಸಂ
ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ ಅವರು ಮೈಮರೆತಿರಲು ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು. ವ|| ಹಾಗೆ ಶ್ರೇಷ್ಠವಾದ ಚಂದ್ರನಂತೆ ವಿಸ್ತಾರವಾಗಿರುವ ಯಶಸ್ಸೆಂಬ ವಸ್ತ್ರಗಳನ್ನು ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು ಜಯಪ್ರದನಾಗಿ ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು. ೧೧೦. ಸೂಸುತ್ತಿರುವ ಮಂತ್ರಾಕ್ಷತೆಗಳೂ ಚಲಿಸುತ್ತಿರುವ ಚಾಮರಗಳೂ ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು ಸಂಪೂರ್ಣವಾಗಿ ಹೀರಲು ಪರಸ್ತ್ರೀಯರ ಮುಖಕಮಲದ ನಸುಗಂಧದಿಂದ ಬೆರಸಿದ ಗಾಳಿಯು ನಿಧಾನವಾಗಿ ಬೀಸುತ್ತಿರಲು ವಿರಾಟನ ಅರಮನೆಯನ್ನು ಅರ್ಜುನನು ದೇವೇಂದ್ರನಂತೆ ಪ್ರವೇಶ ಮಾಡಿದನು- ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನವಿಜಯದಲ್ಲಿ ಎಂಟನೆ ಆಶ್ವಾಸ.
***********
ಮುಂದಿನ ಭಾಗ :ಪಂಪಭಾರತ : ನವಮಾಶ್ವಾಸಂ
************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ