ಸುದಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುದಾಮನ ಸ್ನೇಹಿತನಾಗಿದ್ದನು. ಸುದಾಮನ ಹೆಂಡತಿಯು ಸುದಾಮನಿಗೆ ಯಾವಾಗಲೂ “ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ", ಎಂದು ಹೇಳುತ್ತಿದ್ದಳು. ಆದರೆ ಸುದಾಮನು ಇದಕ್ಕೆ ಒಪ್ಪುತ್ತಿರಲಿಲ್ಲ.
ಒಂದು ದಿನ ಸುದಾಮನು ಹೆಂಡತಿಯ ಒತ್ತಾಯದ ಮೇರೆಗೆ ಶ್ರೀಕೃಷ್ಣನಲ್ಲಿ ತನ್ನ ಬಡತನದ ಬಗ್ಗೆ ಹೇಳಿ, ಧನ ಸಹಾಯ ಪಡೆಯಲು ಅರಮನೆಗೆ ಹೊರಟನು. ಸುದಾಮನು ಶ್ರೀಕೃಷ್ಣನ ಅರಮನೆಗೆ ಬಂದಾಗ, ಅಲ್ಲಿದ್ದ ದ್ವಾರಪಾಲಕರು ಅವನನ್ನು ಅರಮನೆಯ ಒಳಗೆ ಬಿಡಲು ಮೊದಲು ಒಪ್ಪಲಿಲ್ಲ ನಂತರ ಅವನನ್ನು ಅರಮನೆಯ ಒಳಗೆ ಹೊಗಲು ಬಿಟ್ಟರು.
ಶ್ರೀಕೃಷ್ಣನು ಸುದಾಮನು ತನ್ನ ಅರಮನೆಗೆ ಬಂದ ವಿಷಯವನ್ನು ಕೇಳಿ ತುಂಬ ಸಂತೋಷದಿಂದ ಅವನನ್ನು ತುಂಬ ಪ್ರೀತಿ, ಆದರದಿಂದ ಅರಮನೆಗೆ ಬರಮಾಡಿಕೊಂಡನು ಮತ್ತು ಅವನಿಗೆ ಆದರ ಆತಿಥ್ಯವನ್ನು ಮಾಡಿ ಸತ್ಕರಿಸಿದನು. ಆದರೆ ಸುದಾಮನು ಶ್ರೀಕೃಷ್ಣನ ಭಕ್ತನಾದ್ದರಿಂದ ತಾನು ಅರಮನೆಗೆ ಏಕೆ ಬಂದೆ ಎಂಬ ವಿಷಯವನ್ನು ಶ್ರೀಕೃಷ್ಣನಿಗೆ ತಿಳಿಸಲು ಆಗಲಿಲ್ಲ. ಸುದಾಮನು ಹೊರಡುವಾಗ ಶ್ರೀಕೃಷ್ಣನು ಏನಾದರೂ ವಿಷಯವಿತ್ತೇ ಎಂದು ಕೇಳಲು ಸುದಾಮನು ಏನು ಇಲ್ಲ ಎಂದು ಹೇಳಿದನು.
ಸುದಾಮನು ತನ್ನ ಹಳ್ಳಿಯ ಕಡೆಗೆ ಬರಿಗೈಯಲ್ಲಿ ತುಂಬ ಹೆದರಿಕೆಯಿಂದ ಹೊರಟನು ಯಾಕೆಂದರೆ ಹೆಂಡತಿಯು ಅವನಿಗೆ ಬರಿಗೈಯಲ್ಲಿ ಬರಬಾರದೆಂದು ಹೇಳಿದ್ದಳು. ಆದರೆ ಸುದಾಮನು ತನ್ನ ಹಳ್ಳಿಯನ್ನು ಪ್ರವೇಶಮಾಡಿದಾಗ ಅವನಿಗೆ ಆಶ್ಚರ್ಯಕಾದಿತ್ತು. ಶ್ರೀಕೃಷ್ಣನು ಅವನ ಮನೆಯನ್ನು ಸುಂದರವಾದ ಅರಮನೆಯನ್ನಾಗಿ ಪರಿವರ್ತಿಸಿದ್ದನು ಮತ್ತು ಆತನಿಗೆ ಸಾಕಷ್ಟು ಧನವನ್ನು ಅನುಗ್ರಹಿಸಿದ್ದನು
*****************ಕೃಪೆ: ಬಾಲಸಂಸ್ಕಾರ*****************
1 ಕಾಮೆಂಟ್:
ಸೂಪರ್ ಸರ್
ಕಾಮೆಂಟ್ ಪೋಸ್ಟ್ ಮಾಡಿ