'ಕಾಣದ ಕಡಲಿಗೆ' ಜಾರಿದ ಜಿ.ಎಸ್.ಶಿವರುದ್ರಪ್ಪ

'ಕಾಣದ ಕಡಲಿಗೆ....' ಜಾರಿದ ಜಿ.ಎಸ್.ಶಿವರುದ್ರಪ್ಪ
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಇನ್ನಿಲ್ಲಜನ ಮನಗೆದ್ದ ಕವಿ ಹೃದಯದ ಹಿರಿಯ ಜೀವ, "ರಾಷ್ಟ್ರಕವಿ" ಜಿ.ಎಸ್.ಶಿವರುದ್ರಪ್ಪ ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಅದ್ಭುತ ವಿಮರ್ಶಕರಾಗಿ, ಸಾಹಿತಿಯಾಗಿ, ಕವಿಯಾಗಿ ಜನ ಮಾನಸಕ್ಕೆ ಹತ್ತಿರವಾಗಿದ್ದ ಅವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ.

ಶಿವಮೊಗ್ಗದ ಶಿಕಾರಿಪುರದಲ್ಲಿ ಜನಿಸಿದ್ದ ಶಿವರುದ್ರಪ್ಪ ಕನ್ನಡ ನೆಲ ಮತ್ತು ಭಾಷೆಗೆ ಲೋಕಕ್ಕೆ ಮಹಾನ್ ಕೊಡುಗೆ ನೀಡಿದ್ದು, ದೀಪದ ಹೆಜ್ಜೆ, ಅನಾವರಣ, ಗೋಡೆ, ತೀರ್ಥವಾಣಿ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗಾತಿ ಮುಂತಾದ ಕವನ ಸಂಕಲನಗಳ ಮೂಲಕ ಅವರು ಮನೆ ಮಾತಾಗಿದ್ದರು.

ಫೆ.7, 1926ರಂದು ಜನಿಸಿದ ಅವರಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು, ಪಂಪ ಪ್ರಶಸ್ತಿಗಳೇ ಮುಂತಾದ ಹಲವಾರು ಗೌರವಗಳು ಒಲಿದು ಬಂದಿದ್ದು, 2006ರ ನ.1ರಂದು ಕರ್ನಾಟಕ ಸರಕಾರವು ರಾಷ್ಟ್ರಕವಿ ಪುರಸ್ಕಾರ ನೀಡಿ ಗೌರವಿಸಿತ್ತು.                                                       

ಕಾಮೆಂಟ್‌ಗಳಿಲ್ಲ: