ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಕುರಿತು
ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ ಶ್ರೀ ಪಳಕಳದಿಂದ ರಚಿತ ಮಕ್ಕಳ ೨ ಕಿರು ಹೊತ್ತಗೆಗಳನ್ನು ಒಲವಿನ ಓದುಗರಿಗೆ ಒಪ್ಪಿಸಿರುವ ಯುಗ ಪುರುಷ ಪ್ರಕಟಣಾಲಯದ ಮೂಲಕ ಇದೀಗ ಮತ್ತೊಂದು ನೂತನ ಕೃತಿ ‘ಮಹಾ ಸಾಹಸಿ’ಯನ್ನೂ ಪ್ರಕಟಿಸಲು ಬಲು ಹೆಮ್ಮಯೆನಿಸಿದೆ.ಬಾಲೋಪಯೋಗಿಯಾದ ಈ ನೀತಿ ಕಥೆಗಳು ಒಂದಕ್ಕಿಂತ ಮತ್ತೊಂದು ಮುದ್ದು ಕಿರುಕಂದರ ಮನೋಮಂದಾರವನ್ನು ಅರಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯೆಂದು ಹೆಚ್ಚು ಹೇಳಬೇಕಾಗಿಲ್ಲ. ಏನಿದ್ದರೂ ಇಂತಹ ಸಂಗ್ರಾಹ್ಯ ಸತ್ಕೃತಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ಮುಂದಿನ ಜನಾಂಗದ ಇಂದಿನ ಬಾಲಕರು ಓದಿ ಆ ತಿರುಳನ್ನು ಮೈ ಗೂಡಿಸಿಕೊಂಡಾಗ ಕೃತಿ ರಚಯಿತರ ಹಾಗೂ ಪ್ರಕಾಶಕರ ಶ್ರಮ ಸಾರ್ಥಕ. ಅಂತಾಗಲೆಂದು ಹಾರೈಸುವುದರೊಂದಿಗೆ ಸನ್ಮಿತ್ರ ಸಹೃದಯ ಶ್ರೀ ಪಳಕಳ ಸೀತಾರಾಮ ಭಟ್ಟರನ್ನು, ಕೃತಿ ಮುದ್ರಣಗೈದ ಯುಗಪುರುಷ ಮುದ್ರಣಾಲಯದವರನ್ನೂ ಆವರಣ ಪುಟ ಹಾಗೂ ಒಳಪುಟಗಳಲ್ಲಿರುವ ಕಲಾಕೃತಿಗಳನ್ನು ವಿನಿರ್ಮಿಸುವಲ್ಲಿ ಸಹಕರಿಸಿದ ಕಲಾವಿದ ಶ್ರೀ ಕೆ. ದೇವಡಿಗಾರರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ.
ಕೊಡೆತ್ತೂರು ಅನಂತಪದ್ಮನಾಭ ಉಡುಪ
ಪ್ರಕಾಶಕ/ಸಂಪಾದಕ
೧೯-೧೧-೧೯೮೮
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ