ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಲೇಖಕನ ಮಾತು
ಕೆಲವು ಸಮಯದ ಹಿಂದೆ ಮದರಾಸಿನ ಲಿಟಲ್ ಫ್ಲವರ್ ಕಂಪೆನಿ (Little Flower
Co.,) ಅವರ `Ancient Famous Fables’ ಎಂಬ ಇಂಗ್ಲೀಷ್ ಪುಸ್ತಕ ಮಾಲೆಯನ್ನು ಓದುವ
ಅವಕಾಶ ದೊರೆಯಿತು. ಅಲ್ಲಿನ ಕೆಲವು ನೀತಿಕತೆಗಳು ಮಕ್ಕಳಲ್ಲಿ ಧೈರ್ಯ, ಶೌರ್ಯ, ಸಾಹಸ,
ಕಾರುಣ್ಯ, ಕರ್ತವ್ಯಪ್ರಜ್ಞೆ, ಪರೋಪಕಾರಗಳಂತಹ ಸದ್ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ
ಉಪಯುಕ್ತವಾದಾವು ಎನಿಸಿತು; ಜೊತೆಯಲ್ಲೆ ಅವುಗಳನ್ನು ಕನ್ನಡದ ಮಕ್ಕಳಿಗೂ ಪರಿಚಯಿಸುವ
ಆಸೆಯೊಂದು ಮನದಲ್ಲಿ ಮೂಡಿತು. ಅವುಗಳ ಪ್ರಕಾಶಕರಲ್ಲಿ ನನ್ನಾಸೆಯನ್ನು ತೋಡಿಕೊಂಡು,
ಅನುಮತಿಗಾಗಿ ಪತ್ರ ಬರೆದಾಗ ಅವರು ಅನುಮತಿ ನೀಡುವ ಸೌಜನ್ಯ ತೋರಿ ಪ್ರೋತ್ಸಾಹಿಸಿದರು
ಪರಿಣಾಮವಾಗಿ ಈ ಪುಟ್ಟ ಕಥಾ ಸಂಗ್ರಹ ಕನ್ನಡದ ಮಕ್ಕಳಿಗೆ ದೊರೆಯುವಂತಾಯಿತು. ಅದಕ್ಕಾಗಿ
ಮದರಾಸಿನ ಸುಪ್ರಸಿದ್ಧ ಪ್ರಕಾಶನ ಸಂಸ್ಥೆ Little Flower Co. ಇದರ ಸರ್ವ ಸದಸ್ಯರಿಗೆ
ನಾನು ಚಿರೃಋಣ.
ಈ ಪುಸ್ತಕವು ಕನ್ನಡದಲ್ಲಿ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳಲು ಕಾರಣರಾದವರು ನಮ್ಮ
ಬಂಧುಗಳೂ ಹಿತಚಿಂತಕರೂ ನಿರಂತರ ಪ್ರೋತ್ಸಾಹಕರೂ ಆದ “ಯುಗಪುರುಷ” ಪ್ರಕಾಶನದ ಒಡೆಯ ಶ್ರೀ
ಕೊ ಅ. ಉಡುಪ ಅವರು ಶ್ರೀಯುತರಿಗೆ ನನ್ನ ಹಾರ್ದಿಕ ಕೃತಜ್ಞತೆಗಳು. ಈ ಸಂಗ್ರಹದ ಕೆಲವು
ಕತೆಗಳು ಈ ಮೊದಲೇ ಪ್ರಕಟಿಸಿ ಉಪಕರಿಸಿದ “ತರಂಗ’ ಮತ್ತು “ಉದಯವಾಣಿ” ಪತ್ರಿಕೆಗಳ
ಸಂಪಾದಕರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಈ ಹೊತ್ತಗೆಯನ್ನು ಅಂದವಾಗಿ ಮುದ್ರಿಸಿ
ಕೊಟ್ಟವರು ‘ಯುಗಪುರುಷ’ ಮುದ್ರಣಾಲಯದ ಕೆಲಸಗಾರ ಬಂಧುಗಳು ಅವರಿಗೆ ನನ್ನ ನಮನಗಳು.
ಪಳಕಳ ಸೀತಾರಾಮಭಟ್ಟ
ಶಿಶುಸಾಹಿತ್ಯ ಮಾಲೆ.
ಮಿತ್ತಬೈಲು.
೧೪-೧೧-೧೯೮೮
ಶಿಶುಸಾಹಿತ್ಯ ಮಾಲೆ.
ಮಿತ್ತಬೈಲು.
೧೪-೧೧-೧೯೮೮
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ