೨೧. ಕತ್ತಲೆ ಎನ್ನುವುದು ಎಲ್ಲಿ ಇದೆ?

ಕತ್ತಲೆ ಎನ್ನುವುದು ಎಲ್ಲಿ ಇದೆ?
ಇರುವುದೆಲ್ಲ ಬೆಳಕು,
ರಾತ್ರಿಯೆನುವುದೇ ಬರಿಯ ಭ್ರಮೆ
ಅರಿವ ಕವಿದ ಮುಸುಕು.

ಎಂದೂ ಆರದ ಸೂರ್ಯನಿಗೆ
ಇರುಳೆನುವುದೆ ಇಲ್ಲ,
ಊರಿಯೇ ಆಕೃತಿಯಾದವಗೆ
ನೇರಳೆನುವುದೆ ಸಲ್ಲ.

ಸೂರ್ಯನ ಸುತ್ತ ಭ್ರಮಿಸುತ್ತ
ಭೂಮಿಗಾಯ್ತುಇರುಳು,
ಬೆಳಕಿಗೆ ಬೆನ್ನನು ಕೊಟ್ಟಾಗ
ಹುಟ್ಟಿ ಬಂತು ನೆರಳು.

ಭ್ರಮಿಸುವ ವಸ್ತುವಿಗಷ್ಟೆ ಇದೆ
ಕತ್ತಲೆ ರಾತ್ರಿಗಳು,
ಭ್ರಮಿಸದ ಜೀವಕೆ ಎಂದೆಂದೂ
ನಿತ್ಯವಾದ ಹಗಲು........

ಕಾಮೆಂಟ್‌ಗಳಿಲ್ಲ: