ರಾತ್ರಿಯ ತಣ್ಣನೆ ತೋಳಿನಲಿ
ಮಲಗಿದೆ ಲೋಕವೆ ಮೌನದಲಿ
ಯಾರೋ ಬಂದು, ಹೊಸಿಲಲಿ ನಿಂದು
ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನ
......... ಕರೆದವರಾರೇ ನನ್ನನ್ನು?
ಬೇಗೆಗಳೆಲ್ಲಾ ಆರಿರಲು
ಗಾಳಿಯು ಒಯ್ಯುನೆ ಸಾಗಿರಲು
ಒಳಗೂ ಹೊರಗೂ ಹುಣ್ಣಿಮೆ ಚಂದಿರ
ತಣ್ಣನೆ ಹಾಲನು ತುಳುಕಿರಲು
ಕರೆದರಂತಲ್ಲೆ ಹೆಸರನ್ನು
....... ಕರೆದವರಾರೇ ನನ್ನನ್ನು?
ಮರಗಳ ಎಲೆಗಳ ಗೂಡಿನಲಿ
ಮೆಚ್ಚಿನ ಬೆಚ್ಚಿನ ಗೂಡಿನಲಿ
ರೆಕ್ಕೆಯ ಹೊಚ್ಚಿ ಮರಿಗಳ ಮುಚ್ಚಿ
ಮಲಗಿರೆ ಹಕ್ಕಿ ಪ್ರೀತಿಯಲಿ
ಕರೆದರಂತಲ್ಲೆ ಹೆಸರನ್ನು
....... ಕರೆದವರಾರೇ ನನ್ನನ್ನು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ