ಒಮ್ಮೆ ಬೆಟ್ಟದ ಮಧ್ಯದಲ್ಲಿ ಹರಿಯುತ್ತಿದ್ದ ತೊರೆಯ ಬಳಿ ತೋಳವೊಂದು ನೀರು ಕುಡಿಯಲು
ಬಂತು. ನೀರು ಕುಡಿದು ತಲೆಯೆತ್ತಿದ ತೋಳನಿಗೆ, ಕುರಿ ಮರಿಯೊಂದು ಕೆಳಗಡೆ ನೀರು
ಕುಡಿಯುತಿದ್ದು ಕಾಣಿಸಿತು. ತೋಳನ ಬಾಯಲ್ಲಿ ನೀರು, ನನ್ನ ರಾತ್ರಿ ಊಟ
ಸಿಕ್ಕಿತೆಂದುಕೊಂಡು, ಕುರಿಗೆ “ನೀನು ನಾನು ಕುಡಿಯುವ ನೀರನ್ನು ಗಲೀಜು ಮಾಡುತಿದ್ದೀಯ”
ಎಂದು ಗದರಿ ಕೇಳಿತು.
ಅದಕ್ಕೆ ಕುರಿ ಮರಿ, “ಇಲ್ಲಪ್ಪ ದೊರೆ ಇಲ್ಲ, ನೀರು ನೀನು ಇರುವಲ್ಲಿಂದ ನನ್ನ ಕಡೆ ಬರುತ್ತಿದೆ, ಹಾಗಾಗಿ ನಾನು ನಿನ್ನ ನೀರನ್ನು ಗಲೀಜು ಮಾಡುತ್ತಿಲ್ಲ” ಎಂದು ಉತ್ತರಿಸಿತು.
“ಸರಿ ಹಾಗಾದರೆ, ಹೋದ ವರ್ಷ ನನ್ನನ್ನ ಕೆಟ್ಟವ ಎಂದು ಯಾಕೆ ಕರೆದೆ” ಎಂದು ಕಿರುಚಿತು ತೋಳ .
“ನಾನು ನಿನ್ನನ್ನು ಕೆಟ್ಟವ ಎಂದು ಕಳೆದ ವರ್ಷ ಕರೆದಿರುವುದು ಸಾಧ್ಯವೇ ಇಲ್ಲಾ, ಯಾಕೆಂದರೆ ನನ್ನ ವಯಸ್ಸು ಆರು ತಿಂಗಳು ಅಷ್ಟೇ” ಎಂದು ಕುರಿ ಉತ್ತರಿಸಿತು.
“ನಂಗೊತ್ತಿಲ್ಲ, ನೀನಲ್ಲ ಅಂದರೆ ನಿಮ್ಮಪ್ಪ ಅಂದಿರಬಹುದು” ಎಂದು ತೋಳ, ಕೆಳಗಡೆ ಹಾರಿ ಕುರಿ ಮರಿಯನ್ನು ಕೊಂದು ತಿಂದಿತು. ಸಾಯುವ ಮೊದಲು ಕುರಿ ಬಾಯಿಂದ, “ಕೆಟ್ಟವರಿಗೆ ಇನ್ನೊಬ್ಬರನ್ನು ಹಾಳುಗೆಡವಲು ಯಾವುದೇ ಕಾರಣ ಬೇಕಿಲ್ಲ” ಎಂಬ ಉದ್ಗಾರ ಹೊರಬಿತ್ತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ