ಒಮ್ಮೆ ಒಂದು ಸಿಂಹ, ನರಿ, ಗುಳ್ಳೆ ನರಿ ಹಾಗು ತೋಳದೊಡನೆ ಬೇಟೆಯಾಡಲು ಹೊರಟಿತು. ಬಹಳ
ಹೊತ್ತಿನ ಹುಡುಕಾಟದ ನಂತರ, ಇವುಗಳ ಕಣ್ಣಿಗೆ ಜಿಂಕೆ ಯೊಂದು ಕಾಣಿಸಿತು. ಎಲ್ಲರು ಸೇರಿ
ಜಿಂಕೆಯನ್ನು ಕೊಂದವು. ಸರಿ ಈಗ ಜಿಂಕೆಯ ಮಾಂಸದ ಪಾಲನ್ನು ಹೇಗೆ ವಿಂಗಡಿಸುವುದು ಎಂದು
ಎಲ್ಲರೂ ಯೋಚಿಸುತಿದ್ದಾಗ, ಸಿಂಹ ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿ ಎಂದು
ಗುಡುಗಿತು. ಇತರರಿಗೆ ಕುಶಿಯಾಯಿತು, ಎಲ್ಲರಿಗು ಒಂದೊಂದು ಪಾಲು ಸಿಗುತ್ತದೆ ಎಂದು ಕೊಂದು
ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿದವು.
ಸಿಂಹ ಮುಂದೆ ಬಂದು, ” ಮೊದಲನೇ ಭಾಗ ಕಾಡಿನ ರಾಜನಾದ ನನ್ನ ಪಾಲು, ಎರಡನೇ ಭಾಗ ಈ
ವಿಭಾಗವನ್ನು ಮಾಡುವ ನ್ಯಾಯಾಧೀಶನಾದ ನನ್ನ ಪಾಲು, ಮೂರನೆಯ ಭಾಗ ವೇಗವಾಗಿ ಓಡಿ
ಜಿಂಕೆಯನ್ನು ಹಿಡಿದ್ದಿದ್ದಕ್ಕಾಗಿ ನನ್ನ ಪಾಲು, ಇನ್ನು ನಾಲ್ಕನೇ ಪಾಲನ್ನು ಮುಟ್ಟುವ
ಧೈರ್ಯ ನಿಮ್ಮಲ್ಲಿ ಯಾರಿಗಾದರು ಇದ್ದಾರೆ ಮುಂದೆ ಬನ್ನಿ ನೋಡೋಣ” ಎಂದು ತನ್ನ
ನ್ಯಾಯವನ್ನು ಘೋಷಿಸಿತು.
ಆಗ ನರಿ ತನ್ನ ಬಾಲವನ್ನು ಹಿಂಬದಿಯ ಕಾಲುಗಳ ನಡುವೆ ಸಿಕ್ಕಿಸಿ ಕೊಂಡು, ಗುಳ್ಳೆನರಿ
ಹಾಗು ತೋಳದೊಡನೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಡಿನ ಹಾದಿ ಹಿಡಿಯುತ್ತ ,
“ದೊಡ್ಡವರ ಜೊತೆ ಕೆಲಸ ಹಂಚಿಕೊಬಹುದು, ಆದರೆ ಫಲ ಹಂಚಿ ಕೊಳ್ಳೋಕಾಗಲ್ಲ” ಎಂದು
ಗೊಣಗಿಕೊಂಡಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ